International News: ಹಿಂದಿನ ಕಾಲದಲ್ಲಿ ಅಪರೂಪಕ್ಕೆ ಶ್ರೀಮಂತರ ಮನೆಯಲ್ಲಿ ಲ್ಯಾಂಡ್‌ಲೈನ್ ಫೋನುಗಳಿರುತ್ತಿತ್ತು. ಆದರೆ ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಬಂದಿದೆ. ಕೆಲವರಿಗೆ ಒಂದು ಹೊತ್ತಿನ ಊಟವಿಲ್ಲದಿದ್ದರೂ ಆದೀತು. ಕೈಯಲ್ಲಿ ಸ್ಮಾರ್ಟ್ ಫೋನ್ ಇರಬೇಕು. ಅದಕ್ಕೆ ರಿಚಾರ್ಜ್ ಆಗಿರಬೇಕು. ಅಷ್ಟೇ.
ಅಲ್ಲದೇ, ಶಾಲೆಗೆ ಹೋಗುವ ಮಕ್ಕಳು ಕೂಡ ಮೊಬೈಲ್ ದಾಸರಾಗಿದ್ದಾರೆ. ಈ ಕಾರಣಕ್ಕೆ ಶಿಕ್ಷಣದ ಮೇಲೆ ಪೆಟ್ಟು ಬೀಳುತ್ತಿದೆ. ಓದಿನ ಕಡೆ ಗಮನ ಹರಿಸದೇ, ಮಕ್ಕಳು ಬೇರೆ ಬೇರೆ ವಿಚಾರದ ಕಡೆ ಗಮನ ಹರಿಸುತ್ತಿದ್ದಾರೆ. ಹಾಗಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಬ್ರಿಟನ್ ಶಾಲೆಗಳಲ್ಲಿ ತರಬೇತಿ ನಡೆಯುವ ವೇಳೆ, ಮತ್ತು ಕ್ಲಾಸಿನಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ್ದಾರೆ. ಶಾಲೆಯ ಹೊರಗೆ ಮೊಬೈಲ್ ಬಳಸಬಹುದು. ಆದರೆ ತರಗತಿಯಲ್ಲಿದ್ದಾಗ ಮಾತ್ರ ಮೊಬೈಲ್ ಬಳಸುವಂತಿಲ್ಲವೆಂದು ನಿಯಮಮ ತರಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುನಕ್, ಡಿಫ್ರೆಂಟ್ ಆಗಿರುವ ವೀಡಿಯೋ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಒಂದು ವಿಷಯದ ಬಗ್ಗೆ ಸುನಕ್ ಮಾತನಾಡುವಾಗ, ಫೋನ್ ರಿಂಗಣಿಸುತ್ತದೆ. ಅದನ್ನು ಸುಮ್ಮನಾಗಿಸಿ, ರಿಷಿ ಮತ್ತೆ ಮಾತನಾಡಲು ಶುರು ಮಾಡುತ್ತಾರೆ. ಮೊಬೈಲ್ ಮತ್ತೆ ಮತ್ತೆ ರಿಂಗಣಿಸುತ್ತದೆ. ಆಗ ರಿಷಿ ಕಾಲ್ ಕಟ್ ಮಾಡಿ, ಅದನ್‌ನು ಪಕ್ಕದಲ್ಲಿರುವ ಟೇಬಲ್ ಮೇಲಿಡುತ್ತಾರೆ.
ಬಳಿಕ ಮಾತನಾಡುತ್ತ. ಈ ರೀತಿ ಹಲವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಫೋನ್ ಅಡ್ಡವಾಗಿದೆ. ಹಲವು ಶಾಲೆಗಳಲ್ಲಿ ಈಗಾಗಲೇ ಫೋನ್ ಬ್ಯಾನ್ ಮಾಡಲಾಗಿದೆ. ಆದರೆ ಆ ನಿಯಮವನನ್ನು ಅಧಿಕೃತವಾಗಿ ಜಾರಿಗೊಳಿಸಲಾಗಲಿಲ್ಲ. ಆದರೆ ಇದೀಗ ಆ ನಿಯಮವನ್ನು ದೇಶದ ಎಲ್ಲ ಶಾಲಾ ಕಾಲೇಜುಗಳಲ್ಲಿ ಜಾರಿ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಏಕಾಗೃತೆಯಿಂದ ಶಿಕ್ಷಣ ಕಲಿಯಲಿ ಎಂಬುದು ಈ ನಿಯಮದ ಆಶಯವಾಗಿದೆ ಎಂದು ರಿಷಿ ಹೇಳಿದ್ದಾರೆ.
ಭಾರತ ಹಲವು ಶಾಲೆ ಕಾಲೇಜುಗಳಲ್ಲಿ ಮೊಬೈಲ್ ತರುವಂತೆ ಇಲ್ಲ. ಹಾಗೇನಾದರೂ ಮೊಬೈಲ್ ತಂದರೆ, ಅದನ್ನು ಶಾಲಾ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ಮತ್ತೆ ಹಿಂದಿರುಗಿಸುವುದಿಲ್ಲ.
We know how distracting mobile phones are in the classroom.
Today we help schools put an end to this. pic.twitter.com/ulV23CIbNe
— Rishi Sunak (@RishiSunak) February 19, 2024
ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ: ಸಿಎಂ
70 ವರ್ಷ ಕಾಂಗ್ರೆಸ್ ಏನು ಮಾಡಿದೆ? ಸಂತೋಷ್ ಲಾಡ್‌ಗೆ ಶೆಟ್ಟರ್ ಟಾಂಗ್
ಶಿವಾಜಿಯವರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಇದ್ರು: ಇತಿಹಾಸ ಬಿಚ್ಚಿಟ್ಟ ಸಂತೋಷ್ ಲಾಡ್