Thursday, October 16, 2025

Latest Posts

ವೈದ್ಯನ ಅಪಹರಣ – 25 ಜನರ ಗ್ಯಾಂಗ್ ದಾಳಿ!

- Advertisement -

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ, ವೈದ್ಯನನ್ನು ಅಪಹರಿಸಿ, ಇಬ್ಬರು ಮಕ್ಕಳ ತಂದೆಯನ್ನು ಕರುಣೆ ಇಲ್ಲದೆ ಹಲ್ಲೆ ಮಾಡಿರುವುದು ಇಡೀ ಜಿಲ್ಲೆಯಲ್ಲೇ ಬೇಸರ ಹುಟ್ಟಿಸಿದೆ. ಹಣಕಾಸಿನ ವಿವಾದವೇ ಈ ಅಮಾನವೀಯ ಕ್ರೌರ್ಯಕ್ಕೆ ಕಾರಣವೆಂದು ಶಂಕೆ ವ್ಯಕ್ತವಾಗುತ್ತಿದೆ. ಈ ವೇಳೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೂ ಬಹಿರಂಗವಾಗಿದ್ದು, ಜನತೆ ಆಕ್ರೋಶದಲ್ಲಿದ್ದಾರೆ.

ಜುಲೈ 10, ಮಧ್ಯಾಹ್ನ. ಅಥಣಿ ತಾಲೂಕಿನ ಸವದಿ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಮಹಿಷವಾಡಗಿ ಮೂಲದ ವೈದ್ಯ ಡಾ. ಆನಂದ ಉಪಾಧ್ಯಾಯ ಅವರನ್ನು ಸದ್ದು ಸದ್ದಿಲ್ಲದೆ ಸುಮಾರು 25 ಜನರ ಗುಂಪು ಬಲವಂತವಾಗಿ ಕಾರಿಗೆ ಎತ್ತಿ ಕರೆದೊಯ್ದು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಎರಡು ಗಂಟೆಗಳ ಕಾಲ ಹಲ್ಲೆ ಮಾಡಲಾಗಿದೆ.

ಕಬ್ಬಿಣದ ಪೈಪ್ ,ಹಗ್ಗ ,ಬಿಲ್ಲೆ ಮತ್ತು ಕಟ್ಟಿಗೆಯಿಂದ ಮನ ಬಂದಂತೆ ಹೊಡೆದು ಚಿತ್ರ ಹಿಂಸೆ ನೀಡಿದ್ದಾರೆ. ಡಾ. ಆನಂದ್ ವಿರುದ್ಧ ಈ ಹಲ್ಲೆ ನಡೆಸಿದವರು ಕಾಡಪ್ಪ ತೇಲಿ, ಸಿದ್ದಪ್ಪ ತೇಲಿ, ಸಿದ್ದರಾಯ ತೇಲಿ, ಧರೆಪ್ಪಾ ತೇಲಿ ಮತ್ತು ನಾಗಪ್ಪ ಬಿರಡಿ ಸೇರಿದಂತೆ 25 ಜನರ ಗುಂಪು ಎಂದು ವರದಿಯಾಗಿದೆ. ಇವರು ಉದ್ದೇಶಪೂರ್ವಕವಾಗಿ, ನಿರ್ದಯತೆಯಿಂದ, ವೈದ್ಯರ ಮೇಲೆ ದಾಳಿ ಮಾಡಿದ್ದನ್ನು ವೈದ್ಯರು ತಾವೇ ಬಾಯಿಬಿಟ್ಟಿದ್ದಾರೆ.

2018ರಲ್ಲಿ ಡಾ. ಆನಂದ್ ಉಪಾಧ್ಯಾಯ ಅವರು ತೇಲಿ ಕುಟುಂಬದೊಂದಿಗೆ ಸೇರಿ ಶ್ರೀಪದ್ಮಾವತಿ ಇಂಟರ್ ನ್ಯಾಷನಲ್ ಸ್ಕೂಲ್ ಎಂಬ ವಿದ್ಯಾಸಂಸ್ಥೆಯನ್ನು ಆರಂಭಿಸಿದ್ದರು. ಆದರೆ, ವೈದ್ಯರು ನೀಡಿದ 1.80 ಕೋಟಿ ರೂ. ಹಣದ ವಿಚಾರದಲ್ಲಿ ನಂತರ ಗಲಾಟೆ ಉಂಟಾಗಿ ಅವರು ಶಾಲೆಯ ಆಡಳಿತದಿಂದ ಹೊರಬಂದಿದ್ದರು. ಈ ವಿಚಾರ ಈಗ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಅದೇ ಹಣಕಾಸಿನ ವಿಚಾರವೇ ಈ ಅಪಹರಣ ಮತ್ತು ಹಲ್ಲೆಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ.

ಅಥಣಿ ಠಾಣೆಯ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೆಳಗಾವಿ ಜಿಲ್ಲಾ ಎಸ್‌ಪಿ ಭೀಮಾಶಂಕರ ಗುಳೇದ್ ಅವರನ್ನು ಭೇಟಿಯಾಗಿ, ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.

- Advertisement -

Latest Posts

Don't Miss