ಬೆಂಗಳೂರು: ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಬಹುದೆನ್ನೋ ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ತೀಟೆ ತೀರಿಸಿಕೊಳ್ಳೋದಕ್ಕೆ ಮತ್ತೆ ರಾಜ್ಯದಲ್ಲಿ ಚುನಾವಣೆ ಮಾಡ್ಬೇಕಾ ಅಂತ ಪ್ರಶ್ನಿಸೋ ಮೂಲಕ ಮೈತ್ರಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಅಂತ ಹೇಳೋ ಮೂಲಕ ಸರ್ಕಾರ ಅಸ್ಥಿರವಾಗಿದೆ ಅಂತ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದ್ರೂ ಅಶ್ಚರ್ಯವಿಲ್ಲ ಎನ್ನೋ ಬಗ್ಗೆ ಸುಳಿವು ನೀಡಿದ್ರು. ಈ ಕುರಿತು ಪ್ರತಿಕ್ರಿಯಿಸಿರೋ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಯಾವ ಕಾರಣಕ್ಕೂ ಚುನಾವಣೆ ನಡೆಯೋಕೆ ಬಿಡೋದಿಲ್ಲ. ನಿಮಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ ಅಂದ್ರೆ ಹೋಗಿ ನಾವು ಅಧಿಕಾರ ವಹಿಸಿಕೊಳ್ತೇವೆ ಅಂತ ಯಡಿಯೂರಪ್ಪ ಮೈತ್ರಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ನಿಮ್ಮ ತೀಟೆ ತೀರಿಸಿಕೊಳ್ಳೋದಕ್ಕೆ ಮತ್ತೆ ಚುನಾವಣೆ ಮಾಡ್ಬೇಕಾ..? ಜನ ಇದಕ್ಕೆ ಸಿದ್ಧರಿಲ್ಲ ಅಂತ ಇದೇ ವೇಳೆ ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ಇನ್ನು ಮೈತ್ರಿ ಸರ್ಕಾರ ಅಸ್ಥಿರವಾಗುತ್ತಿರೋದು ಇದೀಗ ಬಿಜೆಪಿಗೆ ವರದಾನವಾಗಿದ್ದು, ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕೆ ರಣತಂತ್ರ ಶುರುಮಾಡಲಿದೆ.
ಹಾಗಾದ್ರೆ ಸರ್ಕಾರ ಪತನವಾಗೋದು ಖಚಿತವಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ