ನವದೆಹಲಿ: ಕೇಂದ್ರದ ಈ ಬಾರಿಯ ಬಜೆಟ್ ನಲ್ಲಿ ಕೆಲ ವಸ್ತುಗಳ ಬೆಲೆ ಏರಿಕೆಯಾದ್ರೆ ಮತ್ತೆ ಕೆಲ ವಸ್ತುಗಳ ಬೆಲೆ ಇಳಿಕೆಯಾಗಿದೆ.
ಈ ಬಾರಿಯ ಆಯ ವ್ಯಯದಲ್ಲಿ ಮೇಕ್ ಇನ್ ಇಂಡಿಯಾವನ್ನು ಸಬಲಪಡಿಸೋ ನಿಟ್ಟಿನಲ್ಲಿ ಸ್ವದೇಶಿ ನಿರ್ಮಿತ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ಗೃಹೋಪಯೋಗಿ ವಸ್ತುಗಳು, ಜಿಮ್ ಉಪಕರಣ, ಕ್ರೀಡಾ ಸಾಮಾಗ್ರಿಗಳು, ಹಾಲು ಉತ್ಪನ್ನಗಳು, ಚಾಕೊಲೇಟ್, ಮಾಲ್ಟ್, ಟಿವಿ, ಫ್ರಿಡ್ಜ್, ವಾಶಿಂಗ್ ಮೆಶಿನ್, ಕೃಷಿ, ತೋಟಗಾರಿಕೆ ಕೆಲಸಗಳಲ್ಲಿ ಬಳಸಲಾಗುವ ಉತ್ಪನ್ನಗಳು ಅಗ್ಗವಾಗಲಿವೆ.
ಇನ್ನು ಟೈಲರಿಂಗ್ ಮೆಷಿನ್, ಕನ್ನಡಕಗಳ ಬೆಲೆ ಇಳಿಕೆಯಾಗಲಿದೆ. ಇನ್ನು ಗೃಹಿಣಿಯರಿಗೂ ಕೇಂದ್ರ ಸಿಹಿ ಸುದ್ದಿ ನೀಡಿದೆ ಸ್ಟೌ, ಸೀಮೆ ಎಣ್ಣೆ, ಮೆಹಂದಿ, ರವೆ, ಕುಕ್ಕರ್ ಗಳ ಬೆಲೆ ಕೂಡ ಇಳಿಕೆಯಾಗಲಿದೆ. ಹಾಗೆ ಸೆಣಬು, ಹತ್ತಿ, ಬಿದಿರು ಸೇರಿದಂತೆ ಜವಳಿ ಉತ್ನನ್ನಗಳ ಬೆಲೆ ಇಳಿಕೆಯಾಗಲಿದೆ. ಹಾಗೇ ವಿದ್ಯುತ್ ಚಾಲಿತ 20 ಲೀಟರ್ ನ ಗೀಸರ್ ಬೆಲೆ ಕೂಡ ಇಳಿಕೆ ಕಾಣಲಿದೆ.
ಬಜೆಟ್ ಮಂಡನೆಗೂ ಮುನ್ನವೇ ರೈತರಿಗೆ ಬಂಪರ್ ಗಿಫ್ಟ್..! ಮಿಸ್ ಮಾಡದೇ ಈ ವಿಡಿಯೋ ನೋಡಿ