ಯಾರೇ ಕೂಗಾಡಲಿ.. ಊರೇ ಹೋರಾಡಲಿ ಎಂಬ ಹಾಡನ್ನು ನೀವು ಕೇಳಿಯೇ ಇರ್ತಿರಾ. ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರು ಎಮ್ಮೆಯೊಂದನ್ನ ಗುಣಗಾನ ಮಾಡ್ತಿದ್ದಾರೆ. ಇದೀಗ ನಾವು ಕೂಡ ಒಂದು ಎಮ್ಮೆಯನ್ನು ಗುಣಗಾನ ಮಾಡಬೇಕಾಗಿದೆ. ಯಾಕಂದ್ರೆ, ಈ ಎಮ್ಮೆ ಬರೋಬ್ಬರಿ 7.11 ಲಕ್ಷಕ್ಕೆ ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದೆ.
ಗುಜರಾತ್ನ ಕಚ್ ಪ್ರದೇಶದ ಸೋನಾಲ್ ನಗರದ ಮಂಗಲ್ದನ್ ಗಧ್ವಿ ಎಂಬುವರ ಓಧನ್ ಹೆಸರಿನ ಎಮ್ಮೆಯೇ ಈಗ ದುಬಾರಿ ಮೊತ್ತಕ್ಕೆ ಸೇಲ್ ಆಗಿರೋದು. ಗಾಂಧಿನಗರ ಜಿಲ್ಲೆಯ ಚಂದ್ರಕಲಾ ಗ್ರಾಮದ ಗೋವಾ ಭಾಯಿ ರಾಬರಿ ಎಂಬುವರು 7.11 ಲಕ್ಷಕ್ಕೆ ಈ ಎಮ್ಮೆಯನ್ನು ಖರೀದಿ ಮಾಡಿದ್ದಾರೆ.
ಸಾಮಾನ್ಯವಾಗಿ ಒಂದು ಎಮ್ಮೆ ರೇಟ್ ಬಹಳ ಅಂದ್ರೆ 3-4 ಇರುತ್ತೆ ಅಷ್ಟೇ.. ಆದ್ರೆ, ಈ ಎಮ್ಮೆಗೆ ಇಷ್ಟೊಂದು ಡಿಮ್ಯಾಂಡ್ ಯಾಕೆ? ಆಂತಾ ನೀವು ಒಂದು ಕ್ಷಣ ಯೋಚನೆ ಮಾಡಿಯೇ ಇರ್ತಿರಾ. ಈ ಎಮ್ಮೆ ಯಾಕೆ ಇಷ್ಟೊಂದು ದುಬಾರಿ ಅನ್ನೋದನ್ನ ನೋಡೋದಾದ್ರೆ, ಇದು ದಿನಕ್ಕೆ 20 ಲೀಟರ್ ಹಾಲು ನೀಡುತ್ತೆ. ಗುಜರಾತ್ನ ಕಚ್ ಜಿಲ್ಲೆ ಬರಪೀಡಿತ ಜಿಲ್ಲೆಯಾಗಿದ್ರೂ ಕೂಡ, 20 ಲೀಟರ್ ಹಾಲು ಕೊಡ್ತಿರೋದೇ ವಿಶೇಷ. ಹೀಗಾಗಿಯೇ, ಓಧನ್ ಎಂಬ ಎಮ್ಮೆ ದುಬಾರಿ ಮೊತ್ತೆ ಸೇಲ್ ಆಗಿದೆ.