ಹೌದು ಫ್ಯಾಷನ್ ಗಳು ಕಾಲ ಕಾಲಕ್ಕೆ ಬದಲಾಗುತ್ತದೆ.90 ರ ದಶಕದಲ್ಲಿ ಬಾಲಿವುಡ್ ನಟ ನಟಿಯರಾದ ಕಾಜೋಲ್,ಐಶ್ವರ್ಯ ರೈ,ಕರಿಷ್ಮಾ ಕಪೂರ್,ಅಮಿತಾಭ್ ಬಚ್ಚನ್,ಹೃತಿಕ್ ರೋಷನ್ ಸೇರಿದಂತೆ ಹಲವರು ಸಿನಿಮಾಗಳಲ್ಲಿ ಹಾಗೂ ಪಾರ್ಟಿಗಳಲ್ಲಿ ಆಗಿನ ಟ್ರೆಂಡಿ ಫ್ಯಾಷನ್ ಉಡುಗೆಯಲ್ಲಿ ಮಿಂಚಿದ್ರು. ಆದರೆ ಕಳೆದ ಕೆಲವು ವರ್ಷಗಳಿಂದ 80 ಹಾಗೂ 90ರ ದಶಕದ ಉಡುಪುಗಳು ಇದೀಗ ಮತ್ತೆ ಹೊಸ ರೂಪ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಈ ಟ್ರೆಂಡಿ ಫ್ಯಾಷನ್ ಗಳು ಸದ್ಯ ಫ್ಯಾಷನ್ ಪ್ರಿಯರ ಮನಸ್ಸನ್ನು ಗೆಲ್ತಾಯಿದೆ.
ಹಾಗಿದ್ರೆ 90 ದಶಕದಲ್ಲಿ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದ ಉಡುಗೆಗಳು ಯಾವುದು ಅಂತಾ ನೋಡೊದಾದ್ರೆ. ಪ್ರಮುಖವಾಗಿ ವೆಲ್ವೆಟ್ ಉಡುಪುಗಳು. 90ಸ್ ನ ಸಮಯದಲ್ಲಿ ಅತೀ ಹೆಚ್ಚು ಜನಪ್ರಿಯ ಗಳಿಸಿದ ಡ್ರೆಸ್ ಗಳಲ್ಲಿ ಫ್ಯಾಬ್ರಿಕ್, ವೆಲ್ವೆಟ್ ಉಡುಪುಗಳು ಕೂಡ ಒಂದಾಗಿತ್ತು. ವೆಲ್ವೆಟ್ ಉಡುಪು ತನ್ನ ಸ್ಟೈಲೀಶ್ ಡಿಸೈನ್ ಹಾಗೂ ಫ್ಯಾಷನ್ ನಿಂದಲೇ ಜನರು ಫೇವರೇಟ್ ಆಗಿತ್ತು.
ಫ್ಯಾಷನ್ ಲೋಕದಲ್ಲಿ ಅತೀ ಹೆಚ್ಚು ಪ್ರಖ್ಯಾತಿ ಪಡೆದಿರುವ ಫ್ಯಾಷನ್ ಅಂದ್ರೆ ಅದು ಪಂಕ್ ಫ್ಯಾಷನ್.ಈ ಮಾದರಿಯ ಉಡುಗೆಗಳನ್ನು 80 ಹಾಗೂ 90 ದಶಕದ ವೇಳೆಗೆ ಫ್ಯಾಷನ್ ಪ್ರಿಯರು ಹೆಚ್ಚು ಇಷ್ಟಪಟ್ಟಿದ್ರು. ರಿಪ್ಟ್ ಜೀನ್ಸ್, ಲೆದರ್ ಜಾಕೆಟ್, ದಪ್ಪನೆಯ ಬೂಟ್ಸ್ ಹಾಗೂ ಬ್ಯಾಂಡ್ ಟೀ ಶರ್ಟ್ ಇವೆಲ್ಲಾ ಅಗಿನ ಕಾಲದ ಪಂಕ್ ಫ್ಯಾಷನ್ ಟ್ರೆಂಡ್ ಆಗಿತ್ತು.
ಇನ್ನು ಬೆಲ್ ಬಾಟಮ್ ಜೀನ್ಸ್ ಗಳು ಇದೀಗ ಅತೀ ಹೆಚ್ಚು ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿವೆ.90 ರ ದಶಕದಲ್ಲಿ ಸೆಲೆಬ್ರಿಟಿಗಳ ಫ್ಯಾಷನ್ ಉಡುಪುಗಳ ಸಾಲಿಗೆ ಈ ಬೆಲ್ ಬಾಟಮ್ ಜೀನ್ಸ್ ಗಳು ಸೇರಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ಟ್ರೆಂಡ್ ಮತ್ತೆ ಬಂದಿದೆ ,ಹೀಗಾಗಿ ಜನರು ಬಾಟಮ್ ಜೀನ್ಸ್ ಗಳಗಿ ಹೆಚ್ಚಾಗಿ ಡಿಪೆಂಡ್ ಆಗ್ತಾಯಿದ್ದಾರೆ.
ಹಿಪ್ ಹಾಪ್ ಸ್ಟೈಲ್ ಫ್ಯಾಷನ್, ಇದು 80 ಹಾಗೂ 90ರ ದಶಕದಲ್ಲಿ ಹಿಪ್ ಹಾಪ್ ಸಂಗೀತಗಾರರಿಂದ ಸ್ಫೂರ್ತಿ ಪಡೆದ ಫ್ಯಾಷನ್ ಆಗಿತ್ತು. ನಂತರ ಈ ಫ್ಯಾಷನ್ ಉಡುಗೆಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿ ಬದಲಾಯಿತು. ಇದು ಗಾಢ ಬಣ್ಣದ ಸಡಿಲವಾದ ಉಡುಗೆಗಳಿಂದ ಹೆಚ್ಚು ಆಕರ್ಷಕವಾದ ನೋಟವನ್ನು ನೀಡ್ತಿತ್ತು. ಸದ್ಯ ಈಗ ಅದೇ ಫ್ಯಾಷನ್ ಗಳು ಮರುಕಳಿಸಿದೆ. ಉದ್ದ ತೋಳಿನ ಬಣ್ಣ ಬಣ್ಣದ ಶರ್ಟ್‌ಗೆ ಜೀನ್ಸ್, ಆಮೇಲೆ ಆ ಜೀನ್ಸ್ ಗೆ ಬೆಲ್ಟ್ ಹಾಕಿ ಇನ್‌ಶರ್ಟ್ ಮಾಡಿಕೊಳ್ಳುವುದು ಆಗಿನ ಕಾಲದ ಫ್ಯಾಷನ್ ಗಳಲ್ಲಿ ಒಂದಾಗಿದ್ದು. ಆದ್ರೆ ಇದೀಗ ಮತ್ತೆ ಆ ಫ್ಯಾಷನ್ ಟ್ರೆಂಡ್ ನಲ್ಲಿದೆ.