Friday, November 22, 2024

Latest Posts

ನಾಯಕನಾಗಿ ಜಸ್ಪ್ರೀತ್ ಬುಮ್ರಾ ಆಯ್ಕೆ ?: ರೋಹಿತ್ಗೆ ಮತ್ತೆ ಕೋವಿಡ್

- Advertisement -

ನಾಳೆಯಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ  ಆರಂಭವಾಗಲಿರುವ ಐದನೆ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ  ವೇಗಿ ಜಸ್‍ಪ್ರೀತ್ ಬುಮ್ರಾ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

35 ವರ್ಷ ಬಳಿಕ ತಂಡದ ವೇಗಿಯೊಬ್ಬರು ನಾಯಕರಾಗಿ ಆಯ್ಕೆಯಾಗು ಸಾಧ್ಯತೆ ಇದೆ.

ಕೆಲವು ದಿನಗಳ ಹಿಂದೆ ನಾಯಕ ರೋಹಿತ್ ಶರ್ಮಾ ಕೊರೋನಾ ಸೋಂಕಿಗೆ ಗುರಿಯಾಗಿದ್ದರು. ಸೋಂಕಿನಿಂದ ಚೇತರಿಸಿಕೊಂಡು ಪಂದ್ಯದ ವೇಳೆಗೆ ತಂಡಕ್ಕೆ ಮರಳಬಹುದೆಂದು ನಿರೀಕ್ಷಿಸಲಾಗಿತ್ತು.ಆದರೆ ರೋಹಿತ್ ಗುಣಮುಖರಾಗಿಲ್ಲ.

ಭಾರತ ಕ್ರಿಕೆಟ್ ದಂತೆಕತೆ ಕಪಿಲ್ ದೇವ್ ತಂಡವನ್ನು ಮುನ್ನಡೆಸಿದ್ದ ಕೊನೆಯ ವೇಗಿಯಾಗಿದ್ದರು.1987ರಲ್ಲಿ ಕಪಿಲ್ ದೇವ್ ಅವರನ್ನು ನಾಯಕತ್ವದಿಂದ ಕೆಳಗಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ತಂಡವನ್ನು ವೇಗಿ ಮುನ್ನಡೆಸಿರಲಿಲ್ಲ.

ಬುಮ್ರಾ ಅವರನ್ನು ಭವಿಷ್ಯದ ನಾಯಕ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಈ ಹಿಂದೆ ಹೇಳಿದ್ದರು.

ರೋಹಿತ್‍ಗೆ  ಮತ್ತೆ  ಕೊರೋನಾ  ಪಾಸಿಟಿವ್

ಮೊನ್ನೆ ಸೋಂಕಿಗೆ ಗುರಿಯಾಗಿದ್ದ ನಾಯಕ ರೋಹಿತ್ ಶರ್ಮಾ ಮತ್ತೆ ಸೋಂಕಿಗೆ ಗುರಿಯಾಗಿದ್ದಾರೆ. ಆರ್‍ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಬಿಸಿಸಿಐ ಹೇಳಿದೆ.

36ನೇ ಟೆಸ್ಟ್ ನಾಯಕನಾಗಿ ಬುಮ್ರಾ ?

ರೋಹಿತ್ ಅನುಪಸ್ಥಿತಿಯಲ್ಲಿ ನಾಯಕನಾಗಿ ಆಯ್ಕೆಯಾದರೆ ಬುಮ್ರಾ ತಂಡದ 36ನೇ ನಾಯಕರಾಗಲಿದ್ದಾರೆ. 1932ರಿಂದ ಈ ವರೆಗೂ `ಭಾರತ ಟೆಸ್ಟ್ ತಂಡವನ್ನು 35 ಮಂದಿ ಮುನ್ನಡೆಸಿದ್ದಾರೆ. ಬುಮ್ರಾ ಟೆಸ್ಟ್ ಆವೃತ್ತಿಯಲ್ಲಿ 29 ಪಂದ್ಯಗಳಿಂದ 123 ವಿಕೆಟ್ ಪಡೆದಿದ್ದಾರೆ. ಜೊತೆಗೆ ವಿಶ್ವದ ಶ್ರೇಷ್ಠ ಬೌಲರ್‍ರಾಗಿ ವಿಶ್ವ ಕ್ರಿಕೆಟ್‍ನಲ್ಲಿ ಗುರುತಿಸಿಕೊಂಡಿದ್ದಾರೆ.

 

 

- Advertisement -

Latest Posts

Don't Miss