Sunday, October 26, 2025

Latest Posts

Business Tips: ರೆಸ್ಟೋರೆಂಟ್‌ನಲ್ಲಿ ಯಾಕೆ ಹೆಚ್ಚು ಚೇರ್‌ಗಳು ಇರೋದಿಲ್ಲ ಗೊತ್ತಾ..?

- Advertisement -

Business Tips: ಕೆಲವು ಚಿಕ್ಕ ರೆಸ್ಟೋರೆಂಟ್‌ನಲ್ಲಿ ಕೆಲವೇ ಕೆಲವು ಚೇರ್‌ಗಳು ಇರುತ್ತದೆ. ಟೇಬಲ್ ಮಾತ್ರ ಹೆಚ್ಚಿರುತ್ತದೆ. ಅಂಥ ವೇಳೆ ಹೆಚ್ಚಿನ ಗ್ರಾಹಕರು ನಿಂತುಕೊಂಡೇ ತಿಂಡಿ ತಿಂದು ಹೋಗಬೇಕಾಗುತ್ತದೆ. ಅಥವಾ ಕಡಿಮೆ ಟೇಬಲ್ ಮತ್ತು ಚೇರ್ ಇಟ್ಟಿರುತ್ತಾರೆ. ಇದರ ಹಿಂದೆಯೂ ಉದ್ಯಮ ತಂತ್ರವಿದೆ ಅಂದ್ರೆ ನೀವು ನಂಬಲೇಬೇಕು.

ಹೀಗೆ ಟೇಬಲ್ ಚೇರ್ ಕಡಿಮೆ ಇಡಲು ಕಾರಣವೇನಂದ್ರೆ, ಹೊಟೇಲ್‌ಗೆ ಬಂದ ಗ್ರಾಹಕರು ಬೇಗ ಬೇಗ ತಿಂಡಿ ತಿಂದು ಎದ್ದು ಹೋಗಲಿ, ಬೇರೆ ಗ್ರಾಹಕರು ಬಂದು ಕೂರಲು ಅನುಕೂಲವಾಗಲಿ ಮತ್ತು ಹೆಚ್ಚು ಲಾಭ ಬರಲಿ ಎಂಬುದು ಉದ್ಯಮ ತಂತ್ರ.

ಇಲ್ಲದಿದ್ದಲ್ಲಿ, ಹೊಟೇಲ್‌ಗೆ ಬಂದ ಗ್ರಾಹಕರು, ಟೇಬಲ್ ಚೇರ್ ಹಿಡಿದು ಹರಟೆ ಹೊಡೆಯುತ್ತ, ಆರಾಮವಾಗಿ ತಿಂದು ಹೋಗುತ್ತಾರೆ. ಹೀಗಾದಾಗ, ಹೊಟೇಲ್ ಓನರ್‌ಗೆ ಲಾಸ್ ಆಗುತ್ತದೆ. ಹೊಟೇಲ್‌ಗೆ ಬಂದ ಗ್ರಾಹಕರು ಇನ್ನೆಷ್ಟು ಹೊತ್ತು ಕಾಯಬೇಕು, ಬೇರೆ ಹೊಟೇಲ್‌ಗೆ ಹೋಗೋಣವೆಂದು ಎದ್ದು ಹೋಗಬಹುದು.

ಹಾಗಾಗಿ ಕಡಿಮೆ ಚೇರ್ ಮತ್ತು ಟೇಬಲ್ ಇದ್ದಾಗ, ಬಂದ ಗ್ರಾಹಕರು, ಇನ್ನೊಬ್ಬ ಗ್ರಾಹಕರಿಗೆ ಜಾಗ ಬಿಟ್ಟುಕೊಡಬೇಕೆಂದು, ಬೇಗ ಬೇಗ ತಿಂದು, ಹೊರಟು ಹೋಗುತ್ತಾರೆ. ಹೀಗಾದಾಗ, ಹೊಟೇಲ್‌ಗೆ ಹೆಚ್ಚು ಗ್ರಾಹಕರು ಬರುತ್ತಾರೆ. ಮತ್ತು ಹೆಚ್ಚು ವ್ಯಾಪಾರವಾಗುತ್ತದೆ ಎಂಬುದು ಉದ್ಯಮ ತಂತ್ರ.

- Advertisement -

Latest Posts

Don't Miss