National News: ಹಲವು ಶ್ರೀಮಂತರು ತಾವು ಸಾಯುವ ಮುನ್ನ ವ್ಹೀಲ್ ಪೇಪರ್ ರೆಡಿ ಮಾಡಿ, ಅದರಲ್ಲಿ ಯಾರಿಗೆ ಎಷ್ಟು ಆಸ್ತಿ ಸಿಗಬೇಕು ಎಂದು ಬರೆದಿರುತ್ತಾರೆ. ಮಕ್ಕಳಿಗೆ, ಪತ್ನಿಗೆ ಆಸ್ತಿಯನ್ನು ಶೇರ್ ಮಾಡಿ ಇಟ್ಟಿರುತ್ತಾರೆ. ಆದ್ರೆ ಯಾವತ್ತಾದರೂ ಸಾಕು ನಾಯಿ, ಬೀದಿ ನಾಯಿಗಳ ಖರ್ಚು ವೆಚ್ಚಕ್ಕಾಗಿ ಆಸ್ತಿಯಲ್‌ಲಿ ಪಾಲು ಕೊಟ್ಟಿದ್ದನ್ನು ಕೇಳಿದ್ದೀರಾ.? ಇಲ್ಲಾ ನೀವು ಕೇಳಿರಲು ಸಾಧ್ಯವಿಲ್ಲ. ಆದರೆ ರತನ್ ಟಾಟಾ ತಮ್ಮ ಮುದ್ದಿನ ಶ್ವಾನಕಳಿಗಾಗಿ ಆಸ್ತಿಯಲ್ಲಿ ಪಾಲು ಕೊಟ್ಟಿದ್ದಾರೆ.
ಇದನ್ನು ಕೇಳಿ ನಿಮಗೆ ವಿಚಿತ್ರ ಎನ್ನಿಸಬಹುದು. ಆದರೆ ಇದು ಸತ್ಯ. ಉದ್ಯಮಿ ರತನ್ ಟಾಟಾ ಪ್ರಾಣಿ ಪ್ರಿಯರಾಗಿದ್ದರು. ಅವರು ಒಂದೆರಡು ನಾಯಿಗಳನ್ನು ಸಾಕಿದ್ದರು. ಬೀದಿಬದಿ ನಾಯಿಗಳಿಗಾಗಿ ಒಂದು ತಂಡವನ್ನೇ ರಚಿಸಿ, ಅವರು ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ಅಷ್ಟೇ ಯಾಕೆ, ರಸ್ತೆಯಲ್ಲಿ ಯಾವುದಾದರೂ ನಾಯಿ ಕಾಣೆಯಾಗಿದ್ದರೆ, ಅಂಥ ನಾಯಿಗಳ ಫೋಟೋ ತೆಗೆದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ, ಈ ನಾಯಿ ನಿಮ್ಮದಾಗಿದ್ದರೆ, ದಯವಿಟ್ಟು ಇಂಥ ಸ್ಥಳಕ್ಕೆ ಬಂದು, ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದರು.
ಅಲ್ಲದೇ ಮುಿಂಬೈನಲ್ಲಿ ರತನ್ ಟಾಟಾ ನಾಾಯಿಗಳಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ. ಅಲ್ಲದೇ ಅಲ್ಲಿ ಬೀದಿ ನಾಯಿ, ಸಾಕು ನಾಯಿ ಯಾವ ನಾಯಿಗಾದರೂ ಉತ್ತಮವಾದ ಚಿಕಿತ್ಸೆ ಕೊಡಬೇಕೆಂದು ರತನ್ ಸ್ಟ್ರಿಕ್ಟ್ ವಾರ್ನಿಂಗ್ ಮಾಡಿದ್ದರಂತೆ. ಅಲ್ಲದೇ, ರತನ್ ಒಡೆತನದ ತಾಾಜ್ ಹೊಟೇಲ್ ಮುಂಭಾಗದಲ್ಲಿ ಇರುವ ಲಾಂಜ್‌ನಲ್ಲಿ ಬೀದಿ ನಾಯಿಗಳಿಗೆ ಮಲಗುವ ವ್ಯವಸ್ಥೆಯೂ ಇತ್ತಂತೆ.
ಈ ಬಗ್ಗೆ ಖುದ್ದು ರತನ್ ಅವರೇ, ಹೊಟೇಲ್ ಕಾಯುತ್ತಿದ್ದ ವಾಚ್‌ಮನ್ ಬಳಿ ಬಂದು, ಬಿರುಬೇಸಿಗೆಯಲ್ಲಿ ಬಿಸಿಲಿನ ಝಳ ತಡಿಯದೇ ಯಾವುದಾದರೂ ಬೀದಿ ನಾಯಿ ಹೊಟೇಲ್ ಒಳಗೆ ಬಂದರೆ, ಅದನ್ನು ಓಡಿಸಬಾಾರದು. ಲಾಂಜ್‌ನಲ್ಲಿ ಮಲಗಲು ಬಿಡಬೇಕು. ಗೇಟ್ ಯಾವಾಗಲೂ ಓಪನ್ ಆಗಿ ಇಡಬೇಕು ಎಂದು ಹೇಳಿದ್ದರಂತೆ.
ಅದೇ ರೀತಿ ನಿಧನದ ಬಳಿಕವೂ ರತನ್ ತಮ್ಮ ಮುದ್ದಿನ ನಾಯಿ ಟೀಟೂಗಾಗಿ 12 ಲಕ್ಷ ರೂಪಾಯಿ ಹಂಚಿಕೆ ಮಾಡಿದ್ದಾರೆ. ಪ್ರತೀ ತಿಂಗಳು ಈ ಟೀಟೂಗೆ 30 ಸಾವಿರ ರೂಪಾಯಿ ಖರ್ಚು ಮಾಡಬಹುದಾಗಿದೆ. ಅದರ ಪಾಲನೆ ಪೋಷಣೆ, ಅದನ್ನು ನೋಡಿಕೊಳ್ಳುವವರಿಗೆ ಸ್ಯಾಲರಿ, ಊಟ ತಿಂಡಿ ಎಲ್ಲ ಖರ್ಚು ಇದರಲ್ಲೇ ಆಗಬೇಕು. ರತನ್ ಟಾಟಾಗೆ ಅಡುಗೆ ತಯಾರಿಸುತ್ತಿದ್ದ ರಾಜನ್ ಶಾ ಎಂಬುವವರೇ ಈ ಟೀಟೂವನ್ನು ನೋಡಿಕೊಳ್ಳುತ್ತಾರೆ.

