Political News: ಮಾಜಿ ಶಾಸಕ ಪ್ರೀತಂಗೌಡ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಲೋಕಾಯುಕ್ತ ಕೋರ್ಟ್‌ಗೆ ಸಿಎಂ ಹಾಜರಾಗಬೇಕಾದ ಬಗ್ಗೆ ಮಾತನಾಡಿದ್ದಾರೆ.
ತಾವು ಮಾಡುವ ಅಕ್ರಮ, ಅನಾಚಾರಗಳಿಗೆ ಅಡ್ಡಿಯಾಗಿದ್ದ ಲೋಕಾಯುಕ್ತಕ್ಕೆ ಬೀಗ ಜಡಿದಿದ್ದ ಸಿಎಂ ಸಿದ್ದರಾಮಯ್ಯ ಅವರು ಈಗ ಅದೇ ಲೋಕಾಯುಕ್ತ ಕೋರ್ಟ್ ಮುಂದೆ ಬರಬೇಕಾಗಿರುವುದು ಅವರು ಮಾಡಿದ ಪಾಪದ ಫಲ. ಆದರೆ ಸತ್ಯಕ್ಕೆಂದಿಗೂ ಜಯ ಇದ್ದೇ ಇದೆ ಎಂದು ಪ್ರೀತಂ ಗೌಡ ಹೇಳಿದ್ದಾರೆ.
ಚುನಾವಣೆ ಸಮಯದಲ್ಲಿ ಕಾಂಗ್ರೆಸ್ಸಿಗರು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕೆ ಈಗ ಪ್ರತಿಫಲ ಅನುಭವಿಸುವ ಕಾಲ ಸನಿಹದಲ್ಲಿದೆ. ಇದರೊಂದಿಗೆ ಬೆಂಗಳೂರು ಟರ್ಫ್ ಕ್ಲಬ್ ಗೆ ಸದಸ್ಯರನ್ನಾಗಿಸಲು ಉದ್ಯಮಿಯೊಬ್ಬರಿಂದ ₹1.3 ಕೋಟಿ ಹಣ ಪಡೆದಿದ್ದ ಕೇಸಿನಲ್ಲೂ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ನ್ಯಾಯಾಲಯ ಚಾಟಿ ಬೀಸಿದೆ. ಇಷ್ಟೆಲ್ಲಾ ಆದಮೇಲೆ ಯಾವ ನೈತಿಕತೆಯಿಂದ ಇನ್ನೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿದ್ದೀರಿ? ಎಂದು ಪ್ರೀತಂ ಗೌಡ ಖಾರವಾಗಿ ಪ್ರಶ್ನಿಸಿದ್ದಾರೆ.
ಕಳೆದ ಬಾರಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ, ಬೊಮ್ಮಾಯಿ ಸರ್ಕಾರದ ವಿರುದ್ಧ 40%ಕಮಿಷನ್ ತೆಗೆದುಕೊಳ್ಳುತ್ತಾರೆಂದು ಕಾಂಗ್ರೆಸ್ ಆರೋಪಿಸಿದ್ದು, ಈ ಬಗ್ಗೆ ಕೇಸ್ ದಾಖಲಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಯನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಲೋಕಾಯುಕ್ತ ಕೋರ್ಟ್‌ನಲ್ಲಿ ಮಾರ್ಚ್ 28ಕ್ಕೆ ಖುದ್ದು ಹಾಜರಾಗಬೇಕು ಎಂದು ಸಮನ್ಸ್ ಜಾರಿ ಮಾಡಲಾಗಿದೆ.
ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ ಕಾದಿದೆ..! ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ
ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಅರವಿಂದ ಬೆಲ್ಲದ್
ಬೈಕ್ ರೈಡ್ ಮೂಲಕ ಕಾಶ್ಮೀರಕ್ಕೆ ಸೊಲೋ ಟ್ರಿಪ್: ಹೊಸ ದಾಖಲೆ ಬರೆದ ಧಾರವಾಡ ಯುವತಿ