ಹಾಸನ: ಲಿಂಗಾಯತ ಸಿಎಂಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಪ್ರಾಮಾಣಿಕವಾಗಿ ರಾಜ್ಯಭಾರ ಮಾಡಿದ ನಿಜಲಿಂಗಪ್ಪನವರಿಗೆ, ವೀರೇಂದ್ರ ಪಾಟೀಲ್ ರಿಗೆ ಅವರು ಅಪಮಾನ ಮಾಡ್ತಿದ್ದಾರೆ. ಇತಿಹಾಸ ಮರೆತಿದ್ದಾರೆ ಅಂತಾ ಕಾಣ್ಸುತ್ತೆ. ಪಾಟೀಲ್ ರು, ನಿಜಲಿಂಗಪ್ಪನವರಾಗಲೀ ಕಾಂಗ್ರೆಸ್ ನಲ್ಲಿದ್ದಿದ್ದು. ಆ ಮೂಲಕ ಅವರು ಕಾಂಗ್ರೆಸ್ ಅನ್ನೇ ಅಪಮಾನ ಮಾಡೋ ಕೆಲಸ ಮಾಡ್ತಿದ್ದಾರೆ. ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಮಾತಾಡ್ತಾ ಇದ್ದಾರೆ. ಅದು ಅವರಿಗೆ ಆ ಸಮುದಾಯದ ಬಗ್ಗೆ ಇರುವಂತಹ ಅಸಹನೆ, ದ್ವೇಷವನ್ನು ತೋರಿಸುತ್ತದೆ ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.
ಹಿಂದೆ ಅಧಿಕಾರದಲ್ಲಿದ್ದಾಗ ಜಿಲೆಬಿ ಕಂಡ್ರೆ ಆಗ್ತಾ ಇರಲಿಲ್ಲ ಅಂತಾ ಅಪಾದನೆ ಇತ್ತು. ಜಿಲೆಬಿ ಅಂದ್ರೆ ಗೌಡ, ಲಿಂಗಾಯುತ, ಬ್ರಾಹ್ಮಣ ಅಂತಾ. ಈ ಮೂರು ಸಮಯದಾಯದ ಅಧಿಕಾರಿಗಳನ್ನು ಕಂಡ್ರೆ ದ್ವೇಷ ಕಾಡುತ್ತಿದ್ದರು ಅಂತಾ ಇತ್ತು. ಈಗ ಬಹಿರಂಗವಾಗಿ ಈ ರೀತಿ ಹೇಳುವ ಮೂಲಕ ಒಂದು ಸಮುದಾಯದ ಬಗ್ಗೆ ಇರುವಂತಹ ಅಸಹನೆಯನ್ನು ಹೊರಹಾಕುತ್ತಿದ್ದಾರೆ ಎಂದು ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಕಳೆದ ಚುನಾವಣೆಯಲ್ಲಿ ಲಿಂಗಾಯುತ – ವೀರಶೈವ ಅಂತಾ ಒಡೆಯೋ ಪ್ರಯತ್ನ ಮಾಡಿದ್ರು. ಅದರಲ್ಲಿ ವಿಫಲರಾದ್ರು, ಈಗ ಲಿಂಗಾಯುತ ಮುಖಂಡರನ್ನ ಸೆಳೆದು ಬಿಜೆಪಿಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಿದ್ರು. ಈಗ ಸಮುದಾಯಗಳನ್ನ ಟಾರ್ಗೆಟ್ ಮಾಡಿ ಮಾತನಾಡುತ್ತಿರುವುದು ಅವರಿಗೆ ಇರುವಂತಹ ಅಸಹನೆ ಮತ್ತು ದ್ವೇಷವನ್ನು ತೋರಿಸುತ್ತದೆ. ಅವರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಒಳ ಮಿಸಲಾತಿ ವಿಚಾರಕ್ಕೆ ಸುಪ್ರಿಂಕೋರ್ಟ್ ತಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕಾನೂನಿನ ಮೂಲಕ ಪರಿಶೀಲನೆ ನಡೆಸುತ್ತೇವೆ. ಯಾವ ರೀತಿ ಸಮಗ್ರವಾಗಿ ಮೀಸಲಾತಿಯನ್ನು ಕೊಡೋದಕ್ಕೆ ಸಾಧ್ಯವಿದೆ ಎಂಬುದನ್ನ. ಮೇಲ್ಮನವಿಯನ್ನೂ ಸಲ್ಲಿಸುತ್ತೇವೆ, ಸಮಗ್ರವಾಗಿ ಕಾನೂನು ಸಾಧ್ಯತೆಯನ್ನೂ ಪರಿಶೀಲಿಸುತ್ತೇವೆ ಎಂದು ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ.
ಸಿ.ಟಿ.ರವಿಯನ್ನು ಸೋಲಿಸಲು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರವಿ, ಜನರ ಜೊತೆಗೆ ನಾನಿದ್ದೇನೆ, ನನ್ನ ಜೊತೆ ಜನರಿದ್ದಾರೆ. ನನಗೆ ಜೆಡಿಎಸ್ ಮುಖಂಡರು ಸ್ಪಷ್ಟಪಡಿಸಬೇಕು. ಕುಮಾರಸ್ವಾಮಿಯವರು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ಯಾ.?. ಮೈತ್ರಿ ಮಾಡಿಕೊಂಡಿಲ್ಲ ಅಂದ್ರೆ ನಿಮ್ಮ ಪಕ್ಷದ ಮುಖಂಡ ಎಸ್ಎಲ್.ಬೋಜೇಗೌಡ್ರು, ಕಾಂಗ್ರೆಸ್ ಪರವಾಗಿ ಕ್ಯಾಂಪೇನ್ ಮಾಡ್ತಿದ್ದಾರೆ, ಹಾಗಿದ್ರೆ ಅವರ ಮೇಲೆ ಏನ್ ಕ್ರಮತೆಗೆದುಕೊಂಡಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಮೈತ್ರಿ ಮಾಡಿಕೊಂಡಿದ್ರೆ ಸ್ಪಷ್ಟವಾಗಿ ಹೇಳಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ ಅಂತಾ. ಕಳೆದ ಪಾರ್ಲಿಮೆಂಟ್ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿಯೇ ಬಂದಿತ್ತು. ನಾವು ಅವರನ್ನು ದಾಖಲೆ ಮತಗಳ ಅಂತರದಿಂದ ಸೋಲಿಸಿದ್ದೋ. ದಾಖಲೆ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಜನ ಗೆಲ್ಲಿಸಿದ್ರು. ಈಗಲೂ ಅಷ್ಟೇ ದಾಖಲೆಗಳ ಅಂತರದಲ್ಲಿ ಬಿಜೆಪಿಯನ್ನು ಜನ ಗೆಲ್ಲಿಸುತ್ತಾರೆ ಎಂದು ರವಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರೀತಂಗೌಡರನ್ನ ಸೋಲಿಸಿ ಹಾಸನದಿಂದ ಕಳಿಸೇಕು ಎಂಬ ಜೆಡಿಎಸ್ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಪ್ರಜಾಪ್ರಭುತ್ವದಲ್ಲಿ ಬೆದರಿಕೆ ಹಾಕುವ ರಾಜಕಾರಣ ನಡೆಯಲ್ಲ. ಇಲ್ಲಿ ಎಲ್ಲವನ್ನೂ ವಿಶ್ವಾಸದಲ್ಲಿ ಗಳಿಸಿಕೊಳ್ಳಬೇಕು. ಇದು ಯಾರ ಜಹಗೀರಲ್ಲ, ಪ್ರೀತಂಗೌಡ್ರನ್ನ ಓಡಿಸೋದಕ್ಕೆ ಯಾರದ್ದಾದ್ರೂ ಜಹಗೀರಾ ಇದು ಎಂದು ರವಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲುಗೈ..
ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನದ್ದೇ ಮೈಲುಗೈ