Tuesday, August 5, 2025

Latest Posts

‘ಶಾಸಕರಿಗೂ ವಯಸ್ಸಾಗಿದ್ದು ವಿಶ್ರಾಂತಿಯ ಅಗತ್ಯವಿದೆ, ಹಾಗಾಗಿ ಬಿಜೆಪಿಗೆ ಓಟ್ ಹಾಕಿ’

- Advertisement -

ಸಕಲೇಶಪುರ: ಕಾಫಿ ಬೆಳೆಗಾರರ ಒತ್ತುವರಿ ಜಮೀನನ್ನು ಗುತ್ತಿಗೆ ನೀಡುವ ಯೋಜನೆ ಜಾರಿಗೊಳಿಸಿರುವ ಭಾರತೀಯ ಜನತಾ ಪಾರ್ಟಿ ಸರ್ಕಾರವನ್ನು ಮತ್ತೊಮ್ಮೆ ಗದ್ದುಗೆಗೆ ತರಲು ತಾಲೂಕಿನ ಕಾಫಿ ಬೆಳೆಗಾರರು ಒಂದಾಗ ಬೇಕು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

ಮಂಗಳವಾರ ತಾಲೂಕಿನ ವಳಲಹಳ್ಳಿ, ಹೆತ್ತೂರು, ವನಗೂರು ಕೂಡಿಗೆ ಹಾಗೂ ಚಂಗಡಿಹಳ್ಳಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಸಿಮೆಂಟ್ ಮಂಜು ಪರ ಬಿರುಸಿನ ಪ್ರಚಾರ ನಡೆಸಿದ ನಂತರ ಮಾತನಾಡಿ, 2018 ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವೇಳೆ ಭೂಕಬಳಿಕೆ ನಿಯಮ ಜಾರಿಗೊಳಿಸಿದ ಫಲವಾಗಿ ಸಾಕಷ್ಟು ಕಾಫಿಬೆಳೆಗಾರರು ಒತ್ತುವರಿ ಭೂಮಿಯಲ್ಲಿ ಬೆಳೆದಿದ್ದ ಕಾಫಿತೋಟಗಳನ್ನು ಭೂ ಕಬಳಿಕೆ ಕಾಯ್ದೆುಂದಾಗಿ ಕಳೆದಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿತ್ತು. ಇಂದಿಗೂ ಚಿಕ್ಕಮಗಳೂರು-ಕೂಡಗು-ಸಕಲೇಶಪುರ ತಾಲೂಕಿನ ಸಾಕಷ್ಟು  ಬೆಳೆಗಾರರು ದುಗಡದಲ್ಲೆ ದಿನಕಳೆಯುತ್ತಿದ್ದರೆ. ಮತ್ತೊಮ್ಮೆ ಜೆಡಿಎಸ್ ಸರ್ಕಾರ ಬಂದರೆ ಮತ್ತೆ ಭೂಕಬಳಿಕೆ ನಿಮಯ ಜಾರಿಗೊಳಿಸುವುದರಲ್ಲಿ ಯಾವುದೆ ಅನುಮಾನವಿಲ್ಲ. ಆದ್ದರಿಂದ, ಒತ್ತುವರಿ ಜಮೀನು ಗುತ್ತಿಗೆ ನೀಡುವ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳ್ಳ ಬೇಕಾದರೆ ಬೆಳೆಗಾರರು ಬಿಜೆಪಿ ಬೆಂಬಲಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಅಭಿವೃದ್ದಿ ಹೆಸರಿನಲ್ಲಿ ಮತ ಕೇಳುತ್ತಿರುವುದು ಬಿಜೆಪಿ ಮಾತ್ರ. ಸ್ಥಳೀಯ ಶಾಸಕರಿಗೆ ಅಭಿವೃದ್ದಿ ಮುನ್ನೂಟವೆ ತಿಳಿಯದಾಗಿದ್ದು ಹಾಯುವುದಿಲ್ಲ ಒದೆಯುವುದಿಲ್ಲ ಎಂಬ ಕಾರಣಕ್ಕೆ ಆರು ಬಾರಿ ಶಾಸಕರನ್ನಾಗಿ ಮಾಡಿದ್ದಿರ, ಆದರೆ ಹಾಲು ಕೊಡದ ಹಸುವಿನಿಂದ ಏನು ಉಪಯೋಗ ಸಗಣಿ ಹಾಕಿದರೆ  ಅದನ್ನು ಹೊಳೆನರಸೀಪುರದ ಮುಖಂಡರು ಎತ್ತಿಕೊಂಡು ಹೋಗುತ್ತಾರೆ. ಶಾಸಕರಿಗೂ ವಯಸ್ಸಾಗಿದ್ದು ವಿಶ್ರಾಂತಿಯ ಅಗತ್ಯವಿದೆ ಎಂದರು.

ಜೆಡಿಎಸ್ ರಮ್ಮಿ ಆಟದಲ್ಲಿನ ಜೋಕರ್ ತರಹ ಚಿಕ್ಕಮಗಳೂರಿನಲ್ಲಿ ಪಕ್ಷದ ವಿಧಾನಪರಿಷತ್ ಸದಸ್ಯ ಭೋಜೆಗೌಡ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚಿಸುತ್ತಾರೆ. ಆದ್ದರಿಂದ, ಜೆಡಿಎಸ್ ನಿಲುವು ಏನು ಎಂಬದನ್ನು ಎಚ್.ಡಿ ಕುಮಾರಸ್ವಾಮಿ ಸ್ವಷ್ಟಪಡಿಸ ಬೇಕು ಎಂದರು.  ಚಿಕ್ಕಮಗಳೂರಿನಲ್ಲಿರುವ ಸಮಸ್ಯೆಗಳೆ ಸಕಲೇಶಪುರದಲ್ಲು ಇದ್ದು ಮಲೆನಾಡಿ ನೈಜ  ಸಮಸ್ಯೆಗಳ ನಿವಾರಣೆಗೆ ಪ್ರಮಾಣಿಕ ಪ್ರಯತ್ನ ನಡೆಸ ಬೇಕಿದೆ ಆದರೆ, ಶಾಸಕರಿಂದ ಅಂತಹ ಪ್ರಯತ್ನಗಳು ನಡೆಯುತ್ತಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೆ ಸರ್ಕಾರವಿದ್ದಾಗ ಮಾತ್ರ ಅಭಿವೃದ್ಧಿ ಸಾದ್ಯ. ಉತ್ತರಪ್ರದೇಶದಂತೆ ಇಲ್ಲೂ ಆಡಳಿತ ನಡೆಸ ಬೇಕಾದರೆ ಸಂಪೂರ್ಣ ಬಹುಮತದ ಅಗತ್ಯವಿದೆ ಎಂದರು.

ಇದೆ ವೇಲೆ ಚಂಗಡಿಹಳ್ಳಿ ಗ್ರಾಮದಲ್ಲಿ ಜೆಡಿಎಸ್,ಕಾಂಗ್ರೆಸ್ ತ್ಯಜಿಸಿ ಸಿ.ಟಿ ರವಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಈ ವೇಳೆ ಪಕ್ಷದ ಅಭ್ಯರ್ಥಿ ಸಿಮೆಂಟ್ ಮಂಜು ,ಮಾಜಿ ಶಾಸಕರಾದ ಬಿ.ಆರ್  ಗುರುದೇವ್, ಎಚ್.ಎಂ ವಿಶ್ವನಾಥ್, ಬಿಜೆಪಿ ಮುಖಂಡ ಸಿದ್ದೇಶ್ ನಾಗೇಂದ್ರ, ಎ.ವಿ ನರೇಶ್, ಹೆತ್ತೂರು ವಿಜಿಕುಮಾರ್, ಅಶ್ವತ್, ಮಂಡಲ ಮಾಜಿ ಅಧ್ಯಕ್ಷ ಪ್ರತಾಪ್, ಪ್ರಧಾನ ಕಾರ್ಯದರ್ಶಿ ಬಾಲರಾಜ್, ಸೇರಿದಂತೆ ಮುಂತಾದವರಿದ್ದರು. 25 ಎಸ್ಕೆಪಿಪಿ 1 ಬಿಜೆಪಿ ಅಭ್ಯರ್ಥಿ ಪರವಾಗಿ ಸಿ.ಟಿ ರ” ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಮಧ್ಯ ಕರ್ನಾಟಕ ಯಾರ ಪಾಲು..?

ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನದ್ದೇ ಮೈಲುಗೈ

- Advertisement -

Latest Posts

Don't Miss