National News : 2024ರ ಲೋಕಸಭೆ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ.. ಎನ್ಡಿಎ ಹಾಗೂ ಇಂಡಿಯಾ ಕೂಟದ ನಾಯಕರು, ತಟಸ್ಥವಾಗಿ ಉಳಿದಿರುವ ಪಕ್ಷಗಳು ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ.. ಇದ್ರ ಮಧ್ಯೆ ಮೋದಿ ಸರ್ಕಾರ ಮತ್ತೆ ಸಿಎಎ ಜಾರಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬರೋಬ್ಬರಿ 4 ವರ್ಷದ ಬಳಿಕ ಸಿಎಎ ಜಾರಿ ಮಾಡಲು ಮೋದಿ ಸರ್ಕಾರ ಮನಸ್ಸು ಮಾಡಿದ್ಯಂತೆ. ಸಿಎಎ ಜಾರಿಯಾದ ಬಳಿಕ ಭಾರತ ಜನಗಣತಿ ಕಾರ್ಯಕ್ಕೂ ಮೋದಿ ಸರ್ಕಾರ ಚಾಲನೆ ನೀಡಲಿದೆ..
ಏನಿದು ಸಿಎಎ ?
– ಧರ್ಮದ ಕಾರಣಕ್ಕೆ ಕಿರುಕುಳ ಅನುಭವಿಸಿ 2014ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಿದೇಶಿಯರಿಗೆ ಮಾತ್ರ ಇದು ಅನ್ವಯ.
– ಈ ಮೂರು ದೇಶ ಸೇರಿದಂತೆ ಯಾವುದೇ ದೇಶದಿಂದ ಭಾರತಕ್ಕೆ ವಲಸೆ ಬರುವ ಮುಸ್ಲಿಮರು ಸೇರಿದಂತೆ ಬೇರೆ ಯಾವುದೇ ವಿದೇಶಿಯರಿಗೆ ಇದು ಅನ್ವಯಿಸುವುದಿಲ್ಲ.
– ಭಾರತದಿಂದ ಯಾವುದೇ ವಿದೇಶಿಯರನ್ನು ಗಡೀಪಾರು ಮಾಡುವುದಕ್ಕೂ ಸಿಎಎಗೂ ಯಾವುದೇ ಸಂಬಂಧವಿಲ್ಲ.
– ಆದರೆ, ಭಾರತದಲ್ಲಿ ಉಳಿದುಕೊಂಡಿರುವ ಯಾವುದೇ ಅಕ್ರಮ ವಿದೇಶಿಯರಿಗೆ ಸಿಎಎ ಅನ್ವಯಿಸುತ್ತದೆ.
‘ಅಬ್ಬಕ್ಕ, ಓಬವ್ವ,ರಾಣಿ ಚೆನ್ನಮ್ಮಂಥವರ ರಾಜ್ಯದಿಂದ ನಾನು ಬಂದಿದ್ದೇನೆ’
Cauvery Meeting : ದೆಹಲಿಯಲ್ಲಿ ಕಾವೇರಿ ಸಭೆ : ಸಭೆಯಲ್ಲಿ ಸಿದ್ದರಾಮಯ್ಯ ಏನಂದ್ರು?