Saturday, February 8, 2025

Latest Posts

ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಖಚಿತ: ವಿನಯ್ ಕುಲಕರ್ಣಿ

- Advertisement -

Dharwad News: ಧಾರವಾಡ : ಧಾರವಾಡದಲ್ಲಿ ಮಾತನಾಡಿದ ಗ್ರಾಮೀಣ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ, ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಬದಲಾವಣೆ ಖಚಿತ ಎಂದು ಹೇಳಿದ್ದಾರೆ.

ನಮ್ಮಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳಿದ್ದೇವೆ. 135 ಜನ ಶಾಸಕರಿದ್ದೇವೆ. ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ. ಆದರೂ ಕೆಲವರಿಗೆ ಅವಕಾಶ ಸಿಗಬೇಕಿದೆ. ಅನೇಕರು  ಸಚಿವರಾಗುವ ಅರ್ಹತೆ ಇದ್ದವರು ಇದ್ದಾರೆ. ಹೀಗಾಗಿ ಎರಡೂವರೆ ವರ್ಷದ ಬಳಿಕ ಬದಲಾವಣೆ ಆಗಲಿದೆ. ಈ ಮಾತನ್ನು ಹೈಕಮಾಂಡ್ ನವರೇ ಹೇಳಿದ್ದಾರೆ ಎಂದು ವಿನಯ್ ಕುಲಕರ್ಣಿ ಹೇಳಿದ್ದಾರೆ.

ಸಿಎಂ-ಡಿಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ವಿನಯ್ ಕುಲಕರ್ಣಿ,  ಸಿಎಂ ಡಿಸಿಎಂ ಸ್ಥಾನ ಹೈಕಮಾಂಡ್ ವಿಚಾರ. ಅದರಲ್ಲಿ ನಾವು ತಲೆ ಹಾಕುವುದು ಸೂಕ್ತವಲ್ಲ. ಅದೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ನಮ್ಮ ಪಕ್ಷದೊಳಗೆ ಅಂತಹ ಅಸಮಾಧಾನ ಇಲ್ಲ. ಏನೇ ಇದ್ದರೂ ನೇರವಾಗಿ ಸಿಎಂಗೆ ಹೇಳುತ್ತೇವೆ. ಸಿಎಂ, ಡಿಸಿಎಂ, ಸಂಬಂಧಿಸಿದ ಸಚಿವರಿಗೆ ಹೇಳುತ್ತೇವೆ. ಯಾರೇ ತಪ್ಪು ಮಾಡಿದರೂ ಅವರಿಗೆ ಹೇಳಿ ನಾವು ಸರಿ ಮಾಡುತ್ತೇವೆ. ಅಂತಹುಗಳನ್ನು ಮೊನ್ನೆ ಸರಿಪಡಿಸಿದ್ದೇವೆ. ಆದರೆ ಹೊರಗೆ ಹೋಗುವಂತಹುದು ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವೇದಿಕೆ ಮೇಲೆ ಬೇಲೂರು ಶಾಸಕ-ಅರಸಿಕೆರೆ ಶಾಸಕರ ಜಗಳ: ಸ್ಪಷ್ಟನೆ ನೀಡಿದ ಸಚಿವ ರಾಜಣ್ಣ

‘ಬಿಜೆಪಿ ಹಾಗೂ ಜನತಾದಳಕ್ಕೆ ಪರಿಸ್ಥಿತಿಗೆ ಕೆಟ್ಟಿದೆ. ಅವರು ಏನಾದ್ರೂ ಹುಡುಕ್ತಾ ಇರ್ತಾರೆ’

- Advertisement -

Latest Posts

Don't Miss