Dharwad Political News: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡಲು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ಆಗಮಿಸಿದ್ದರು. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಗೊವಿಂದ ಕಾರಜೋಳ, ನಾವು ಸರ್ಕಾರ ಬಿಳಿಸೋಕೆ ಹೋಗುವುದಿಲ್ಲ. ಹಾಲು ಕುಡಿದು ಸಾಯೋವರಿಗೆ ವಿಷ ಹಾಕಿ ಯಾರಾದ್ರೂ ಸಾಯಿಸ್ತಾರಾ?. ಕಾಂಗ್ರೆಸನವರು ಹಾಲು ಕುಡಿದು ಸಾಯೋಕೆ ತಯಾರಾಗಿದ್ದಾರೆ. ಬಿಜೆಪಿ ಅವರು ನಾವು ಸರ್ಕಾರ ಬೀಳಿಸುವ ಪಾಪದ ಕೆಲಸ ಮಾಡೊದಿಲ್ಲಾ ಎಂದು ಖಾರವಾಗಿ ಹೇಳಿದ್ರು.
ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರು 2 ದರ್ಜೆ ನಾಯಕರಾಗಿ ಕೆಲಸ ಮಾಡ್ತಾ ಇದ್ದಾರೆ. ಲಿಂಗಾಯತ ಶಾಸಕರದು ಪರಿಸ್ಥಿತಿ ಕಾಂಗ್ರೆಸ ಸರ್ಕಾರದಲ್ಲಿ, ಗೌಡ್ರ ಲೆಕ್ಕದಲ್ಲಿಯೂ ಇಲ್ಲಾ, ಇತ್ತ ಕುಲಕರ್ಣಿ ಪುಸ್ತಕದಲ್ಲಿಯೂ ಇಲ್ಲಾ ಎನ್ನುವಂತೆ ಆಗಿದೆ ಎಂದರು.
ರಾಜ್ಯ ಕಾಂಗ್ರೆಸ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ದಲಿತರು, ಹಿಂದುಳಿದವರು, ಗೌಡರ 3 ಗುಂಪುಗಳು ಕಾಂಗ್ರೆಸ ಸರ್ಕಾರದಲ್ಲಿವೆ. ಸಿದ್ದರಾಮಯ್ಯಾ ಅವರು ಕೆವಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಟ್ಟು, ಪುರುಷರಿಗೆ ಫ್ರೀ ಬಸ ಪಾಸ ಕೊಡದೇ ಪಾಪದ ಕೆಲಸ ಮಾಡ್ತಾ ಇದ್ದಾರೆ. ರಾಜ್ಯ ಸರ್ಕಾರ 5 ತಿಂಗಳಲ್ಲಿ ಸಂಪೂರ್ಣ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ರು.
ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಸಿಎಂ ಸಿದ್ದರಾಮಯ್ಯಾ ಅವರು ಭಂಡತನಕ್ಕೆ ಬಿದ್ದಿದ್ದಾರೆ. ಸುಳ್ಳು ಗ್ಯಾರಂಟಿಗಳನ್ನು ನೋಡಿ ಸರ್ಕಾರಕ್ಕೆ , ಜನರು ಕಲ್ಲು ಹೊಡೆಯುವ ಕಾಲ ಬರುತ್ತೆ. ಸಿಎಂ ಸಿದ್ದರಾಮಯ್ಯಾ ಅವರ ಮಾತನ್ನು ಯಾರು ಕೇಳುತ್ತಿಲ್ಲಾ. ಮಂತ್ರಿಗಳಿಗೆ ಊಟ-ತಿಂಡಿ ಕೊಟ್ಟು ಗದ್ದಾ – ತುಟಿ ಸವರುವ ಪರಿಸ್ಥಿತಿ ಸಿಎಂ ಸಿದ್ದರಾಮಯ್ಯಾ ಅವರಿಗೆ ಬಂದಿದೆ ಎಂದು ಕಾರಜೋಳ ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದ್ರು.
ಕಾಂಗ್ರೆಸ್’ನವರು ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ: Govind Karajola
ಕಮಲ ಪಡೆಗೆ ಮತ್ತೊಂದು ಶಾಕ್ ಕೊಟ್ಟ ಜಗದೀಶ್ ಶೆಟ್ಟರ್; ಬಿಜೆಪಿಯ ಮತ್ತೊಬ್ಬ ಮಾಜಿ ಶಾಸಕ ಕಾಂಗ್ರೆಸ್ಗೆ