Monday, September 9, 2024

Latest Posts

ಮಾತೃತ್ವ ರಜೆ ಪಡೆದು, ಮತ್ತೆ ಕೆಲಸಕ್ಕೆ ಹಾಜರಾಗಬಹುದು: ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ

- Advertisement -

Dharwad News: ಹೊರಗುತ್ತಿಗೆಯಲ್ಲಿ ಮಾತೃತ್ವ ರಜೆ ಪಡೆದು ನಂತರ ಮತ್ತೆ ಕೆಲಸಕ್ಕೆ ಹಾಜರಾಗಬಹುದು ಎಂದು ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಚಾಂದ್ಬಿ ಬಳಿಗಾರ್ ಎನ್ನುವವರಿಂದ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಚಾಂದ್ವಿ ಕಳೆದ 2014 ರಲ್ಲಿ ಹೂವಿನಹಡಗಲಿಯಲ್ಲಿ ರೈತ ಸಂಪರ್ಕ ಕೇಂದ್ರದ ಅಕೌಂಟೆಂಟ್ ಆಗಿ ಗುತ್ತಿಗೆ ನೌಕರಿ ಪಡೆದಿದ್ದ‌ರು. ಅಲ್ಲಿಂದ 2023ರ ವರೆಗೆ ಖಾಸಗಿ ಕಂಪನಿಯ ಆಧಾರದ ಮೇಲೆ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದರು. ನಂತರ ಮಾತೃತ್ವ ರಜೆಗೆ ಅರ್ಜಿ ಕೊಟ್ಟು ತೆರಳಿದ್ದ‌ರು. ಆದರೆ ಇಲಾಖೆ ಮಾತೃತ್ವ ರಜೆ ಮುಗಿಸಿ ಬಂದ ಮೇಲೆ ಅವರ ಸ್ಥಾನಕ್ಕೆ ಬೇರೆಯವರನ್ನ ನೇಮಕ ಮಾಡಿತ್ತು.

ಇದನ್ನ ವಿಜಯನಗರ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಉಪಯೋಗವಾಗಿರಲಿಲ್ಲ. ಇದನ್ನ ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಗೆ ಮನವಿಯನ್ನು ಸಲ್ಲಿಸಿದ್ದರು. ಇದರ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಪೀಠ, ಮಾತೃತ್ವ ರಜೆ ಗುತ್ತಿಗೆ ಆಧಾರದಲ್ಲಿ ಸಹ ನೀಡಬೇಕು. ಅವರನ್ನು ಮತ್ತೆ ಕೆಲಸದಲ್ಲಿ ಮುಂದುವರೆಸುವಂತೆ ಆದೇಶಿಸಿದ್ದಲ್ಲದೇ, ಚಾಂದ್ಬಿಗೆ ಆಗಿರುವ ನಷ್ಟವನ್ನು ಭರಸುವಂತೆ ಸೂಚನೆ ನೀಡಿದೆ.

ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದ್ದು, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಹೆಣ್ಣು ಮಗಳಿಗೆ ಮಾತೃತ್ವ ರಜೆ ನೀಡಬೇಕು. ಬಳಿಕ ಅವಳು ಕೆಲಸಕ್ಕೆ ಹಾಜರಾಗಬಹುದು ಎಂದು, ಧಾರವಾಡದ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ.

- Advertisement -

Latest Posts

Don't Miss