Kolar Political News: ಕೋಲಾರ: ಡಿ.ಕೆ.ಶಿವಕುಮಾರ್‌ಗೆ ನಾವು ಪೈಪೋಟಿ ಕೊಡಲು ಸಾಧ್ಯವಿಲ್ಲ. ಅವರ ಹಣ ಬಲಕ್ಕೆ ಜೆಡಿಎಸ್ ಪಕ್ಷ ಸರಿಸಮವಿಲ್ಲ . ದಮ್ಕಿಯಲ್ಲಿ , ಸೆಟಲ್ ಮೆಂಟ್ ನಲ್ಲಿ ಅವರಿಗೆ ಪೈಪೋಟಿ ಸಾದ್ಯವಿಲ್ಲ. ನನ್ನ ಜೀವನವೇ ಬೇರೆ ಡಿಕೆಶಿ ಅವರ ಜೀವನವೆ ಬೇರೆ ಎಂದು ಡಿಕೆಶಿ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಅವರಂಗೆ ನಾನು ಸಾಕಷ್ಟು ಕುಟುಂಬಗಳನ್ನ ಬೀದಿಗೆ ತಳ್ಳಿ ಅದರಲ್ಲಿ ದುಡ್ಡು ಮಾಡಿದವನಲ್ಲ. ಸರ್ಕಾರ ಗ್ಯಾರೆಂಟಿ ಯೋಜನೆಗಳ ಕನವರಿಕೆಯಲ್ಲಿ ಅಭಿವೃದ್ಧಿ ಮರೆತಿದೆ ಎಂದು ಕೋಲಾರದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಹಾಗೂ ಡಿಕೆಶಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ ನಗರದ ಸಿರಿ ಸಮೃದ್ದಿ ಗೋಲ್ಡ್ ಪ್ಯಾಲೇಸ್ ಉದ್ಘಾಟನೆ ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿ, ಕೋಲಾರದಲ್ಲಿ ಎನ್ ಡಿ ಎ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಸೀಟು ಹಚಿಂಕೆ ಅಂತಿಮವಾಗಿ ಘೋಷಣೆ ಯಾಗಬೇಕಿದೆ. ಎರಡು ಪಕ್ಷದ ನಾಯಕರು ಅಬ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಹಾಲಿ ಸಂಸದ ಮುನಿಸ್ವಾಮಿ ರವರೂ ಸಮರ್ಥರಿದ್ದಾರೆ. ನನಗೆ ಕ್ಷೇತ್ರಗಳಿಗಿಂತ ಕೆಟ್ಟ ಕಾಂಗ್ರೆಸ್ ಸರ್ಕಾರವನ್ನು ತೆಗೆಯುವುದು ಮುಖ್ಯ.
ರಾಜ್ಯ ಸರ್ಕಾರ ಜಾಹಿರಾತು ಕೊಡುವುದಕ್ಕಾಗಿ ಬಜೆಟ್ ನಲ್ಲಿ 200 ಕೋಟಿ ಹಣ ಕೊಟ್ಟಿದು ರೈತರ ಹಿತಕಾಪಾಡುವಲ್ಲಿ ಇಲ್ಲದ ಕಾಳಜಿ ಜಾಹಿರಾತಿಗೆ ನೀಡುತ್ತಿದೆ. ಕುಡಿಯಲು ನೀರಿಲ್ಲದೇ, ದನಕರುಗಳಿಗೆ ಮೇವಿಲ್ಲದೆ ಹಾಹಾಕಾರ ಇದೆ. ಇಂತಹ ಸಂದರ್ಭದಲ್ಲಿ ಜಾಹಿರಾತಿಗೆ ಕೊಡುತ್ತಿರುವುದು ಯಾರಪ್ಪನ ದುಡ್ಡು? ಅದು ಜನರ ತೆರಿಗೆ ದುಡ್ಡು, ಗ್ಯಾರೆಂಟಿ ಕಾರ್ಯಕ್ರಮಗಳ ಕನವರಿಕೆಯಲ್ಲಿ ಅಭಿವೃದ್ಧಿಯನ್ನು ಮರೆತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ .
ಡಿಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ ಎಚ್ ಡಿ ಕುಮಾರಸ್ವಾಮಿ ಡಿಕೆ ಶಿವಕುಮಾರ್ ಗೆ ನಾವು ಪೈಪೋಟಿ ಕೊಡಲು ಸಾಧ್ಯವಿಲ್ಲ ಅವರ ಹಣ ಬಲಕ್ಕೆ ಜೆಡಿಎಸ್ ಪಕ್ಷ ಸರಿಸಮವಿಲ್ಲ. ದಮ್ಕಿಯಲ್ಲಿ , ಸೆಟಲ್ ಮೆಂಟ್ ನಲ್ಲಿ ಪೈಪೋಟಿ ಸಾದ್ಯವಿಲ್ಲ ಬಾಕ್ಸ್ ಗಳಲ್ಲಿ ಫೋಟೊಗಳಾಕಿಕೊಂಡು ಚೈನದಿಂದ ತಂದಿರುವ ಕುಕ್ಕರು, ಮಿಕ್ಸಿ ಹಂಚಲು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ನಡವಳಿಕೆ ಏನ್ ಇದೆ ಅದು ಅವರ ಮಾತಿನಿಂದ ತಿಳಿಯುತ್ತೆ ಚುನಾವಣೆ ಡಿಕ್ಲರ್ ಆಗೇ ಇಲ್ಲ ಅವಗಲೆ ಗಿಫ್ಟ್ ಕೊಡುತ್ತಿದ್ದಾರೆ ಅಭಿವೃದ್ದಿ ಮಾಡಿದ್ರೆ ಯಾಕೆ ಗಿಫ್ಟ್ ಹಂಚುತ್ತಿದ್ರು ಅವರು ಕೊಳ್ಳೆ ಹೊಡೆದಿರುವ ಹಣದಲ್ಲೆ ಇದೆಲ್ಲಾ ಮಾಡುತ್ತಿದ್ದಾರೆ. ನಾನು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲೇ ಮೂರು ಲಾರಿಗಳಿದ್ದವು ಬಿಬಿಎಂಪಿ ಕಸ ತೆಗೆಯುವ ಟೆಂಡರ್ ತೆಗೆದುಕೊಂಡು ಲಾರಿ ಇಟ್ಟಿದ್ದೆ. ನನ್ನ ಜೀವನವೆ ಬೇರೆ ಡಿಕೆಶಿ ಅವರ ಜೀವನವೆ ಬೇರೆ ಅವರಂಗೆ ನಾನು ಸಾಕಷ್ಟು ಕುಟುಂಬಗಳನ್ನ ಬೀದಿಗೆ ತಳ್ಳಿ ಅದರಲ್ಲಿ ದುಡ್ಡು ಮಾಡಿದವನಲ್ಲ ಕಲ್ಲುಹೊಡೆದು ನೂರಾರು ಕುಟುಂಬಗಳಿಗೆ ಬೆದರಿಕೆ ಹಾಕಿದವರು ಯಾರು? ಎಂದು ಕಲ್ಲೋಡಿತಿವೋ ಕಸ ಎತ್ತುತ್ತಿವೋ ಅನ್ನೋ ವಿಚಾರವಾಗಿ ಡಿಕೆಶಿ ಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ.
ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಮುನಿಸು ಕುರಿತು ಮಾತನಾಡಿ ಅವನು ನನ್ನ ತಮ್ಮ, ಕುಟುಂಬದ ಸದಸ್ಯ ಮಾತನಾಡುತ್ತಾನೆ. ರಾಜ್ಯಸಭಾ ಚುನಾವಣೆ ಬಗ್ಗೆ ನಾಳೆ ಏನೂ ಅಂತ ಗೊತ್ತಾಗುತ್ತೆ. ಇನ್ನು ಕೋಲಾರಕ್ಕೆ ಎತ್ತಿನಹೊಳೆ ಯೋಜನೆ ಕೊಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಟೋಪಿ ಹಾಕಿದ್ದಾರೆ. 2014 ರಲ್ಲಿ ಎರಡು ವರ್ಷದಲ್ಲಿ ಕೋಲಾರಕ್ಕೆ ಎತ್ತಿನಹೊಳೆ ನೀರುತರುತ್ತೇನೆ ಎಂದವರು ಹತ್ತುವರ್ಷ ಕಳೆದರು ಈಗ ಅರಸಿಕೆರಿಗೆ ನೀರು ಕೊಡೋಕೆ ಇನ್ನು 2 ವರ್ಷ ಆಗುತ್ತೆ ಅಂತ ಸಿಎಂ ಹೇಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ .
ಕಾಂಗ್ರೆಸ್ ಅವನತಿಗೆ ಕಾರಣವೇನು..? ಈ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು..?
ಸಂವಿಧಾನ ಬದಲಾಯಿಸಲು ಬಂದವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಸಿಎಂ ಸಿದ್ದರಾಮಯ್ಯ




