ಅಭ್ಯಾಸಕ್ಕಿಳಿದ ನಾಯಕು ರೋಹಿತ್ ಶರ್ಮಾ 

ಲಂಡನ್: ಕೊರೋನಾದಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್ ಶರ್ಮಾ ಎಡ್ಜ್‍ಬಾಸ್ಟನ್ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಕೊರೋನಾ ಹಿನ್ನಲೆಯಲ್ಲಿ ಆಂಗ್ಲರ ವಿರುದ್ಧದ 5ನೇ ಟೆಸ್ಟ್ ನಿಂದ ದೂರ ಉಳಿದಿದ್ದರು.

ಮುಂಬರುವ ಟಿ20 ಸರಣಿಗೆ ಲಭ್ಯವಿರುವ ರೋಹಿತ್ ಶರ್ಮಾ ಸೋಮವಾರ ನೆಟ್ಸ್‍ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿ ಉಮೇಶ್ ಯಾದವ್ ಹಾಗೂ ಆರ್.ಅಶ್ವಿನ್ ಅವರ ಬೌಲಿಂಗ್ ಎದುರಿಸಿದರು.

ನಾರ್ಥ್‍ಂಪ್ಟನ್‍ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿಲ್ಲ. ಸೀಮಿತ ಓವರ್‍ಗಳ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ. ಆದರೆ ವಿರಾಟ್ ಕೊಹ್ಲಿ, ರಿಷಬ್ ಪಂತ್, ರವೀಂದ್ರ ಜಡೇಜಾ ಹಾಗೂ ಬುಮ್ರಾ ಎರಡನೆ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.

 

About The Author