- Advertisement -
www.karnatakatv.net : ದಾವಣಗೆರೆ: ಕಾರು ಮಗುವಿನ ಮೇಲೆ ಹರಿದು ಮಗು ಸಾವನ್ನಪಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ನೌಕರರೊಬ್ಬ ತನ್ನ ಬೆಜವಾಬ್ದಾರಿಯಿಂದ ಕಾರನ್ನು ಚಲಾಯಿಸಿ ನಾಲ್ಕು ವರ್ಷದ ಹನುಮಂತ ಎಂಬ ಮಗು ಮೃತಪಟ್ಟಿದೆ. ಜೊತೆಗೆ ಓರ್ವ ಗರ್ಭಿಣಿಗೆ ಗಾಯವಾಗಿದೆ. ಮೃತ ಮಗು ಕೋಟೆಪ್ಪ ಮತ್ತು ರೂಪಾ ದಂಪತಿಯ ಸೇರಿದ್ದು, ನೌಕರನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಈ ಘಟನೆಯ ಸಂಬoಧ ಹರಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಟಿವಿ- ದಾವಣಗೆರೆ
- Advertisement -