Dharwad News: ಧಾರವಾಡ : ಸಿಲೆಂಡರ್ ಸೋರಿಕೆಯಿಂದ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೇ ವೇಳೆ ಗಾಯಗೊಂಡಿದ್ದ ರೋಗಿಗಳನ್ನನು ವಿಚಾರಿಸಲು, ಧಾರವಾಡ ಜಿಲ್ಲಾಸ್ಪತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದ್ದಾರೆ.
ಧಾರವಾಡ ಜಿಲ್ಲೆಯ ಕಲ್ಲೆ ಗ್ರಾಮದಲ್ಲಿ ಸಿಲಿಂಡರ್ ಸ್ಪೋಟವಾಗಿ ಓರ್ವ ಮಹಿಳೆ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರೋಗಿಗಳ ಆರೋಗ್ಯ ವಿಚಾರಿಸಿ, ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಜೋಶಿ, ನಾನು ನಿನ್ನೆ ಇಲ್ಲಿ ಇರಲಿಲ್ಲ. ಹೀಗಾಗಿ ಇವತ್ತು ಬಂದೆ. ಸಂಬಂಧಪಟ್ಟವರಿಗೆ ಸೂಕ್ತ ಪರಿಹಾರ ನೀಡಲು ಹೇಳಿದ್ದೇನೆ. ಸುಮಾರು 6 ಲಕ್ಷ ರೂ. ಪರಿಹಾರ ಸಿಗಬಹುದು. ಮನೆಗೆ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದಿದ್ದಾರೆ.
ಟಿಕೆಟ್ ವಂಚಿತರ ಪಕ್ಷ ಬಿಡುವ ವಿಚಾರದ ಬಗ್ಗೆ ಮಾತನಾಡಿದ ಜೋಶಿ, ಈ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರದ ನಾಕರು ಮಾತನಾಡಿದ್ದಾರೆ. ಯಾರು ಪಕ್ಷ ಬಿಡಲ್ಲ ಎಂಬ ನಂಬಿಕೆ ಇದೆ, ಎಲ್ಲವು ಸರಿ ಹೋಗುತ್ತೆ ಎಂದಿದ್ದಾರೆ.
ರಾಮನಗರ MLA ಇಕ್ಬಾಲ್ ಹುಸೇನ್ ಮತ್ತು ಸಂಸದ DK ಸುರೇಶ್ ವಿರುದ್ದ ಸಿಡಿದೆದ್ದ ರಾಮನಗರದ ದಲಿತ ಮುಖಂಡರು.
ನಟ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರಿದ ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ..