Saturday, May 10, 2025

Latest Posts

ರಾಮಜನ್ಮಭೂಮಿ ಹೋರಾಟಗಾರರ ಮೇಲಿನ ಕೇಸ್ ರೀ ಓಪನ್: ಬಂಧನ ಖಂಡಿಸಿ ಠಾಣೆಗೆ ಮುತ್ತಿಗೆ, ಧರಣಿ

- Advertisement -

Hubballi News: ಹುಬ್ಬಳ್ಳಿ: ರಾಮ ಜನ್ಮಭೂಮಿಯ‌ ಹೋರಾಟಗಾರರ ಮೇಲಿನ ಕೇಸ್ ರೀ ಒಪನ್ ಹಿನ್ನೆಲೆ, ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ಪೊಲೀಸ್ ಠಾಣೆಗೆ, ಹಿಂದೂ ಪರ ಸಂಘಟನೆಗಳು ಮುತ್ತಿಗೆ ಹಾಕಿದೆ.

ಹುಬ್ಬಳ್ಳಿಯಲ್ಲಿ ರಾಮ ಜನ್ಮಭೂಮಿ ಹೋರಾಟಗಾರರನ್ನು ಬಂಧಿಸಿದ್ದು, ಈ ಬಂಧನವನ್ನು ಖಂಡಿಸಿ, ಹಿಂದೂಪರ ಸಂಘಟನೆಯವರು, ಹುಬ್ಬಳ್ಳಿ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ, ಪೊಲೀಸ್ ಠಾಣೆ ಆವರಣದಲ್ಲಿ ಧರಣಿಗೆ ಕುಳಿತಿದ್ದಾರೆ.

ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧ ಪಟ್ಟವರನ್ನ ಬಿಡ್ತೀರಿ. ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡ್ತೀರಿ. ಪಿಐ ಬರುವವರೆಗೂ ಜಾಗ ಬಿಟ್ಟು ಕದಲೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಜೈಶ್ರೀರಾಮ್ ಘೋಷಣೆ ಹಾಕಿ, ಶ್ರೀರಾಮನ ಭಜನೆ ಮಾಡುತ್ತ, ಧರಣಿ ನಡೆಸಿದ್ದಾರೆ.

ಇನ್ನು ಪ್ರತಿಭಟನೆ ಸುದ್ದಿ ತಿಳಿದು, ಸ್ಥಳಕ್ಕೆ ಎಸಿಪಿ ವಿಜಯಕುಮಾರ್ ತಳವಾರ್ ಹಾಗೂ ಡಿಸಿಪಿ ರಾಜೀವ್ ಎಸ್ ಬಂದು, ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಆದರೂ ಕೂಡ, ಪ್ರತಿಭಟನಾಕಾರರು ಬಂಧಿಸಿದವರನ್ನು ಬಿಡುವವರೆಗೂ ನಾವು ಜಾಗ ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ: ಬಿ.ವೈ.ವಿಜಯೇಂದ್ರ ಆಗ್ರಹ

ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..

- Advertisement -

Latest Posts

Don't Miss