Saturday, April 19, 2025

Latest Posts

ಜಾತಿ ಗಣತಿ ವರದಿ ದೋಷ ಪೂರಿತ ವರದಿಯಾಗಿದೆ: ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಶ್ರೀ

- Advertisement -

Gadag News: ಗದಗ: ಜಾತಿ ಗಣತಿ ವರದಿ ದೋಷ ಪೂರಿತ ವರದಿಯಾಗಿದೆ ಎಂದು ಗದಗನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರ ಇನ್ನೊಮ್ಮೆ ಸಮೀಕ್ಷೆ ನಡೆಸಿ ಮತ್ತೊಮ್ಮೆ ಜಾತಿ ಗಣತಿ ವರದಿ ಸಿದ್ದ ಪಡಿಸಬೇಕು ಅಂತ ಸ್ವಾಮೀಜಿ ಒತ್ತಾಯಿಸಿದ್ದಾರೆ. ಜಾತಿ ಗಣತಿಯ ವರದಿ ಸಾರ್ವಜನಿಕರಲ್ಲಿ ಸಂದೇಹ ಹುಟ್ಟುಹಾಕಿದೆ. ಆ ಜಾತಿ ಗಣತಿ ವರದಿ ಸಮರ್ಪಕವಾಗಿ ಇಲ್ಲ. ಶಿಕ್ಷಣ, ರಾಜಕಾರಣ, ಉದ್ಯೋಗ ಹಾಗೂ ವ್ಯವಸಾಯ ಸೇರಿದಂತೆ ಅನೇಕ ಜಾತಿ ಉಪಜಾತಿಗಳಿಗೆ ಅನ್ಯಾಯ ವಾಗಬಹುದು. ನೂರಾರು ಉಪಜಾತಿಗಳನ್ನು ವರದಿಯಲ್ಲಿ ಕೈ ಬಿಟ್ಟಿರೋದು ಅತ್ಯಂತ ಆಘಾತಕಾರಿಯಾಗಿದೆ ಎಂದು ಮಠಾಧೀಶರಾದ ಡಾ. ಸಿದ್ದರಾಮ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.

ಲಿಂಗಾಯತರು ಜನ ಸಂಖ್ಯೆ ಅಂದಾಜಿನ ಪ್ರಕಾರ 1 ಕೋಟಿ 50 ಕ್ಕೂ ಹೆಚ್ಚು ಇದ್ದಾರೆ. ಆದ್ರೆ ಲಿಂಗಾಯತ ಸಂಖ್ಯೆ ವರದಿಯಲ್ಲಿ 72 ಲಕ್ಷಕ್ಕೆ ಇಳಿಸಿದ್ದು ಅತ್ಯಂತ ಆಘಾತಕಾರಿಯಾಗಿದೆ. ಬೇರೆ ಬೇರೆ ಜಾತಿಯವರು ಮುನ್ನಲೆಗೆ ಬಂದಿದ್ದಾರೆ. ಒಳಗಡೆ ಯಾವುದೋ ಒಂದು ಉದ್ದೇಶ ಇಟ್ಟಿಕೊಂಡು ಮಾಡಿರಬಹುದು. ಜಾತಿ ಗಣತಿ ವರದಿ ಬಹುತೇಕ ಲಿಂಗಾಯತರ ವಿರೋಧವಿದೆ. ಸಚಿವ ಸಂಪುಟದಲ್ಲಿರುವಂತಹ ಕಾಂಗ್ರೆಸ್ ನ ಮಂತ್ರಿಗಳ ವಿರೋಧವಿದೆ. ಸಮಾಜದ ಪ್ರಮುಖರು,ಗಣ್ಯ ವ್ಯಕ್ತಿಗಳು, ಮಠಾಧೀಶರು ಸಮಾಲೋಚನೆ ಮಾಡಿ ಮುಂದಿನ ತೀರ್ಮಾನ ತಗೆದುಕೊಳ್ಳುತ್ತೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.

ತೋಂಟದಾರ್ಯ ಮಠದ ನಿಲುವು ಯಾವ ಜಾತಿಗು ಅನ್ಯಾಯವಾಗಬಾರದು. ರಾಜಕೀಯ ಉದ್ದೇಶದಿಂದ ಜಾತಿ ಗಣತಿ ಜಾರಿ ತರುತ್ತಿರಬಹುದು. ಕಾಂಗ್ರೆಸ್ ಪಕ್ಷದ ಸಚಿವ ಸಂಪುಟದ ಪ್ರಮುಖ ಸಚಿವರೇ ಹೇಳಿದ್ದಾರೆ. ಸಂಪುಟದಲ್ಲಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಈ ವರದಿಯಲ್ಲಿ ದೋಷವಿದೆ. ವರದಿ ಸಮರ್ಪಕವಾಗಿಲ್ಲ.. ಇದನ್ನು ಮರಳಿ ಪರಿಶೀಲನೆ ಮಾಡಬೇಕು ಎಂದು ಆ ಸಚಿವರು ಹೇಳಿದ್ದಾರೆ. 17 ನೇ ತಾರೀಖಿನಂದು ನಡೆಯುವ ವಿಶೇಷ ಸಚಿವ ಸಂಪುಟದಲ್ಲಿ ಏನ್ನು ತೀರ್ಮಾನ ಆಗುತ್ತೇ ಕಾದು ನೋಡೋಣ ಎಂದು ಶ್ರೀಗಳು ಹೇಳಿದ್ದಾರೆ.

- Advertisement -

Latest Posts

Don't Miss