ಧರ್ಮಸ್ಥಳ ಪ್ರಕರಣದ ಬುರುಡೆ ಗ್ಯಾಂಗ್‌ಗೆ ಎಸ್‌ಐಟಿ ಅಧಿಕಾರಿಗಳು ಸಖತ್ ಗ್ರಿಲ್ ಮಾಡ್ತಿದ್ದಾರೆ. ನಿರಂತರವಾಗಿ ಹಲವರ ವಿಚಾರಣೆ ನಡೀತಿದೆ. 7ನೇ ದಿನ ಮಟ್ಟಣ್ಣವರ್ ವಿಚಾರಣೆಗೆ ಬಂದಿದ್ರೆ, 8ನೇ ದಿನವೂ ಸಾಮಾಜಿಕ ಕಾರ್ಯಕರ್ತ ಜಯಂತ್ ವಿಚಾರಣೆ ನಡೆಸಲಾಗ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ, ವಿಚಾರಣೆ ನಡೀತಿದೆ.
ಮಹೇಶ್ ತಿಮರೋಡಿ, ಮಟ್ಟಣ್ಣವರ್, ಜಯಂತ್, ಪ್ರದೀಪ್, ಯೂಟ್ಯೂಬರ್ ಅಭಿಷೇಕ್,...
ನಾಡಹಬ್ಬ ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಇದನ್ನ ವಿರೋಧಿಸಿ, ಹೈಕೋರ್ಟ್‌ಗೆ ಮತ್ತೆರಡು ಪಿಐಎಲ್ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ತಮ್ಮ ಆಹ್ವಾನ ಹಿಂಪಡೆಯುವಂತೆ ಸೂಚಿಸಲು ಮನವಿ ಮಾಡಿ, ಮಾಜಿ ಸಂಸದ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿದ್ರು. ಇದೀಗ ಪ್ರತ್ಯೇಕವಾಗಿ 2 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು...
ಕಲ್ಲು ತೂರಾಟದ ಘಟನೆ ಬಳಿಕ ಮದ್ದೂರಿನಲ್ಲಿ ಇಂದು ಸಾಮೂಹಿಕವಾಗಿ ಗಣೇಶ ಮೂರ್ತಿಗಳನ್ನ ವಿಸರ್ಜನೆ ಮಾಡಲಾಗುತ್ತಿದೆ. ಸುಮಾರು 3 ಕಿಲೋ ಮೀಟರ್ ದೂರ ಮೆರವಣಿಗೆ ಮಾಡಿ, 28 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು, ಹಿಂದೂ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ. ಪಟ್ಟಣದ ಐಬಿ ಸರ್ಕಲ್‌ನಿಂದ ಶುರುವಾಗಿ ಪೇಟೆ ಬೀದಿ, ಕೊಲ್ಲಿ ಸರ್ಕಲ್ ಮಾರ್ಗವಾಗಿ ಮೆರವಣಿಗೆ ಸಾಗಲಿದೆ. ಬಳಿಕ...
ಗಣೇಶ ವಿಸರ್ಜನೆಯ ಗಲಾಟೆ, ಕಲ್ಲು ತೂರಾಟಕ್ಕೆ ತುತ್ತಾದ ಮದ್ದೂರು ನಿಶ್ಯಬ್ಧವಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ರೂ ಮದ್ದೂರು ಪಟ್ಟಣ ಬೂದಿ ಮುಚ್ಚಿದ ಕೆಂಡದಂತೆ ಇದೆ. ಸೆಪ್ಟೆಂಬರ್ 10ರ ಬೆಳಗ್ಗೆ 6ಗಂಟೆವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ.
ಸೆಪ್ಟೆಂಬರ್ 7ರ ರಾತ್ರಿ ನಡೆದ ಕಲ್ಲು ತೂರಾಟದ ಬಳಿಕ, ಹಿಂದೂ ಸಂಘಟನೆಗಳ ಕಿಚ್ಚು ಸ್ಫೋಟಗೊಂಡಿದೆ. 144 ಸೆಕ್ಷನ್ ಜಾರಿಯಲ್ಲಿದ್ರೂ ನಿನ್ನೆ ಸಾವಿರಾರು ಜನರು ಸೇರಿದ್ರು....
ಮದ್ದೂರಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶದ ಬೆನ್ನಲ್ಲೇ ಮೈಸೂರಿಲ್ಲಿ ಧರ್ಮ ದಂಗಲ್ ಜೋರಾಗಿದೆ. ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆಗೆ ಮುಂದಾಗಿದ್ದ, ಬಿಜೆಪಿಗರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಸರಾ ಉದ್ಘಾಟಕರಾಗಿ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ, ಭಾರೀ ವಿರೋಧ ವ್ಯಕ್ತಪಡಿಸಲಾಗ್ತಿದೆ.
ಸೆಪ್ಟೆಂಬರ್ 9ರ ಬೆಳ್ಳಂಬೆಳಗ್ಗೆಯೇ ಪಾದಯಾತ್ರೆ ಮಾಡಲು ಮುಂದಾಗಿದ್ರು. ಮಾಜಿ ಶಾಸಕ ಎಲ್....
ಮದ್ದೂರು ಕಲ್ಲು ತೂರಾಟದ ಆರೋಪಿಗಳು, ಕಿಂಗ್‌ಪಿನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪಕ್ಕಾ ಪ್ರೀ ಪ್ಲಾನ್ ಮಾಡಿಕೊಂಡೇ, ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ಮಾಡಲಾಗಿದೆ ಎನ್ನಲಾಗಿದೆ. ಐದಾರು ಮಂದಿ ಅನ್ಯಕೋಮಿನ ಯುವಕರಿಂದಲೇ ಕಲ್ಲು ತೂರಾಟ ಮಾಡಿರುವುದು, ತನಿಖೆಯಲ್ಲಿ ಗೊತ್ತಾಗಿದೆ. ಇದಕ್ಕೆಲ್ಲಾ ಮೂಲ ಕಾರಣವೇ ಜಾಫರ್, ಇರ್ಫಾನ್. ಜಾಫರ್ ಮಾತುಗಳಿಂದ ಪ್ರಚೋದನೆಗೊಂಡಿದ್ದ ಇರ್ಫಾನ್, ಕಲ್ಲು ತೂರಾಟಕ್ಕೆ ಸಂಚು ರೂಪಿಸಿದ್ದ...
ಕಲ್ಲು ತೂರಾಟದಿಂದ, ಮದ್ದೂರು ಪಟ್ಟಣ ರಣಾಂಗಣವಾಗಿ ಬದಲಾಗಿತ್ತು. ಆರೋಪಿಗಳ ವಿಚಾರಣೆಯಲ್ಲಿ ಮದ್ದೂರು ಗಲಾಟೆ ಪ್ರೀ ಪ್ಲ್ಯಾನ್ ಅನ್ನೋ ಮಾಹಿತಿ ಗೊತ್ತಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ಲೈಟ್ ಆಫ್ ಮಾಡಿದ ಬಗ್ಗೆ ಮಾಹಿತಿ ಪಡೆದಿದ್ದೇವೆ. ಕಲ್ಲು ತೂರಾಟ ನಡೆಸಿರೋದು ರಾಜಕೀಯ ಪ್ರೇರಿತನಾ? ಅಥವಾ ಇದರ ಹಿಂದೆ ಯಾರಿದ್ದಾರೆ?...
ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಘಟನೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಪಾಕ್ ಪರ ಘೋಷಣೆ ಕೂಗಿರುವ ವಿಡಿಯೋ ಬಿರುಗಾಳಿ ಎಬ್ಬಿಸಿದೆ. ತರೀಕೆರೆ ರಸ್ತೆಯಲ್ಲಿರುವ ಗಾಂಧಿ ವೃತ್ತದಲ್ಲಿ ನಡೆದಿದೆ ಎನ್ನಲಾದ, ಘಟನೆಯ ವಿಡಿಯೋ ಇದಾಗಿದೆ.
ಸೆಪ್ಟೆಂಬರ್ 8ರಂದು ರಾತ್ರಿ 8 ಗಂಟೆ ಸುಮಾರಿಗೆ, ಈದ್ ಮಿಲಾದ್ ಮೆರವಣಿಗೆ ನಡೆದಿದೆ....
ಮದ್ದೂರು ಕಲ್ಲು ತೂರಾಟ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಉನ್ನತ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ. ಹಿಂದೂಗಳಾಗ್ಲಿ ಮುಸಲ್ಮಾರೇ ಆಗ್ಲಿ, ಯಾರೇ ಮಾಡಿದ್ರೂ ತಪ್ಪು ತಪ್ಪೇ.. ಉಸ್ತುವಾರಿ ಸಚಿವರ ವರದಿ ಆಧರಿಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಮದ್ದೂರಿನಲ್ಲಿ ಪೊಲೀಸ್‌ನವರು ಇಲ್ಲಿಯವರೆಗೆ ತಪ್ಪುಗಳನ್ನು ಮಾಡಿಲ್ಲ. ಕಾನೂನು ರೀತಿ ನಡೆದುಕೊಂಡಿದ್ದಾರೆ. ಮಸೀದಿ...
ಮದ್ದೂರಿನಲ್ಲಾದ ಕಲ್ಲು ತೂರಾಟ ಪ್ರಕರಣಕ್ಕೆ, ಸಿಎಂ ಸಿದ್ದರಾಮಯ್ಯನವರೇ ಕಾರಣ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ್ಮೇಲೆ, ರಾಜ್ಯದಲ್ಲಿ ಹಿಂದೂಗಳಿಗೆ ಗ್ರಹಣ ಹಿಡಿದಿದೆ. ಧರ್ಮಸ್ಥಳ ಆಯ್ತು. ಚಾಮುಂಡೇಶ್ವರಿ ಆಯ್ತು. ಕಳೆದ ಬಾರಿಯೂ ನಾಗಮಂಗಲದಲ್ಲಿ ಗಲಾಟೆ ಆಯ್ತು. ಈಗ ಮದ್ದೂರಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಮದ್ದೂರಿನಲ್ಲಿ, ಮಸೀದಿಯಲ್ಲಿ, ಧರ್ಮಾಂಧರು...