Sunday, November 16, 2025

Latest Posts

ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಢವಢವ -15 ಸಚಿವರ ದೊಡ್ಡ ಬದಲಾವಣೆ!

- Advertisement -

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ನವೆಂಬರ್‌ನಲ್ಲಿ ಎರಡೂವರೆ ವರ್ಷ ಪೂರೈಸಲಿದ್ದು, ಆ ವೇಳೆಗೆ ರಾಜ್ಯ ರಾಜಕೀಯದಲ್ಲಿ ‘ಮಹಾಕ್ರಾಂತಿ’ ಸಂಭವಿಸಲಿದೆ ಎಂಬ ಚರ್ಚೆ ಕೈಪಾಳಯದಲ್ಲಿ ಜೋರಾಗಿದೆ. ಈ ನಡುವೆ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್‌ರಚನೆ ಕುರಿತ ಊಹಾಪೋಹಗಳು ಮತ್ತಷ್ಟು ಬಲ ಪಡೆದಿವೆ.

ಬಹು ದಿನಗಳಿಂದ ಸಚಿವ ಸಂಪುಟ ‘ಸರ್ಜರಿ’ ಕುರಿತು ಕಾಯುತ್ತಿದ್ದ ಶಾಸಕರ ನಿರೀಕ್ಷೆಗೆ ಕೊನೆಗೂ ಅಂತ್ಯ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ನವೆಂಬರ್‌ ವೇಳೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಬೃಹತ್ ಬದಲಾವಣೆ ಸಂಭವಿಸಲಿದೆ.
ದೀಪಾವಳಿ ಹಬ್ಬದ ವೇಳೆಗೆ ಸಿದ್ದರಾಮಯ್ಯ ಸಂಪುಟದ ಸುಮಾರು 15 ಮಂದಿ ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಪಕ್ಷದಲ್ಲಿ ಒಳಮಾತುಗಳು ಕೇಳಿಬರ್ತಾಯಿವೆ.

ಹೈಕಮಾಂಡ್‌ ಹೊಸ ಮುಖಗಳು ಹಾಗೂ ಹಿರಿಯ ನಾಯಕರಿಗೆ ಅವಕಾಶ ನೀಡಲು ತಯಾರಿ ನಡೆಸುತ್ತಿದೆ. ಮುಂದಿನ 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಸಮಾಧಾನಿತ ಶಾಸಕರಿಗೆ ಮಂತ್ರಿ ಪಟ್ಟದ ಮೂಲಕ ತೃಪ್ತಿ ನೀಡುವ ಯೋಜನೆ ರೂಪಿಸಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆ ಮುಗಿದ ಬಳಿಕ, ನವೆಂಬರ್‌ ಎರಡನೇ ವಾರದಲ್ಲಿ ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್‌ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕ ತಕ್ಷಣ ಸಂಪುಟ ಪುನರ್‌ರಚನೆಯ ಕಸರತ್ತು ಅಧಿಕೃತವಾಗಿ ಪ್ರಾರಂಭವಾಗಲಿದೆ.ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ. ನವೆಂಬರ್‌ 21ಕ್ಕೆ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ, ಹೈಕಮಾಂಡ್‌ ಹೊಸಬರಿಗೆ ಅವಕಾಶ – ಹಳೆಯವರಿಗೆ ವಿಶ್ರಾಂತಿ ಎಂಬ ನೀತಿಯಲ್ಲಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ಹಾಗಾದ್ರೆ ಸಚಿವ ಸಂಪುಟದಲ್ಲಿ ಯಾರಿಗೆ ಚಾನ್ಸ್‌ ಸಿಗಲಿದೆ ಅನ್ನೋದನ್ನ ನೋಡೋದಾದ್ರೆ, ಬಿ.ಕೆ.ಹರಿಪ್ರಸಾದ್, ಆರ್‌.ವಿ.ದೇಶಪಾಂಡೆ, ಸಲೀಂ ಅಹಮದ್, ನಾಗೇಂದ್ರ, ಬಸವರಾಜ ರಾಯರೆಡ್ಡಿ, ಅಪ್ಪಾಜಿ ನಾಡಗೌಡ, ಲಕ್ಷ್ಮಣ ಸವದಿ, ರೂಪ ಶಶಿಧರ್, ತರೀಕೆರೆ ಶ್ರೀನಿವಾಸ್, ಲೇಔಟ್ ಕೃಷ್ಣಪ್ಪ,ಟಿ.ಬಿ. ಜಯಚಂದ್ರ,

ರಿಜ್ವಾನ್ ಅರ್ಷದ್ /ಯು.ಟಿ.ಖಾದರ್, ಕೆ.ಎನ್. ರಾಜಣ್ಣ/ರಘುಮೂರ್ತಿ, ಶಿವಲಿಂಗೇಗೌಡ/ಎಚ್.ಸಿ. ಬಾಲಕೃಷ್ಣ, ಪಿ.ಎಂ.ನರೇಂದ್ರ ಸ್ವಾಮಿ/ಶಿವಣ್ಣ ಸಿಗುವ ಸಾಧ್ಯತೆ ಹೆಚ್ಚಿದೆ. ಒಟ್ಟಾರೆ, ನವೆಂಬರ್‌ನಲ್ಲಿ ನಡೆಯಲಿರುವ ಈ ಸಂಪುಟ ಸರ್ಜರಿ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳನ್ನು ಸೃಷ್ಟಿಸಲಿದೆ ಎನ್ನುವುದು ಖಚಿತವಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss