Wednesday, May 6, 2026

ರಾಜ್ಯ

ದೆಹಲಿಯ ಕಾರು ಸ್ಫೋಟದ ಬೆನ್ನಲ್ಲೇ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್, ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ವಿಶೇಷ ಸೂಚನೆ!

ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟದಿಂದ ದೇಶದಾದ್ಯಂತ ಭದ್ರತಾ ಇಲಾಖೆಗಳಲ್ಲಿ ಚಟುವಟಿಕೆ ಹೆಚ್ಚಾಗಿದೆ. ಈ ಘಟನೆಯ ಬಳಿಕ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅದರ ಭಾಗವಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ವಿಶೇಷ ಸೂಚನೆ ನೀಡಿದೆ. ಬೆಂಗಳೂರು ವಿಮಾನ ನಿಲ್ದಾಣ ಆಡಳಿತ ಮಂಡಳಿಯ ಪ್ರಕಟಣೆಯ ಪ್ರಕಾರ, ಹೆಚ್ಚುವರಿ ಭದ್ರತಾ...

ಬಿಡದಿ ಟೌನ್‌ಶಿಪ್‌ ವಿರುದ್ಧ HDK ರಣಕಹಳೆ

ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಕಹಳೆ ಮೊಳಗಿಸಿದ್ದಾರೆ. ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದಿಂಚು ಭೂಮಿ ಕೊಡಬೇಡಿ. ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜತೆ ನಾನಿದ್ದೇನೆ. ಹೀಗಂತ ಬಿಡಗಿ ರೈತರಿಗೆ ದು ಕೇಂದ್ರ ಸಚಿವ ಹೆಚ್.ಡಿ....

Mandya: ಮತ್ತೆ ಮುನ್ನಲೆಗೆ ಬಂದ ದಲಿತ ಸಿಎಂ ಕೂಗು: ಮಂಡ್ಯದಲ್ಲಿ ದಲಿತ ಸಂಘಟನೆಯಿಂದ ಜನ ಜಾಗೃತಿ

Mandya News: ಮಂಡ್ಯ: ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಮುನ್ನಲೆಗೆ ಬಂದಿದೆ. ದಲಿತರನ್ನು ಸಿಎಂ ಮಾಡಿ ಎಂದು ಮಂಡ್ಯದಲ್ಲಿ ದಲಿತ ಸಂಘಟನೆಗಳು ಜಾನ ಜಾಗೃತಿಗಿಳಿದಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆಯಾಗೋದಾದ್ರೆ, ಅದನ್ನು ದಲಿತ ನಾಯಕರಿಗೇ ನೀಡಿ ಎಂದು ಮಂಡ್ಯದಲ್ಲಿ ದಲಿತ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ವೆಂಕಟಸ್ವಾಮಿ ಆಗ್ರಹಿಸಿದ್ದಾರೆ. ಇದೇ ತಿಂಗಳ 21 ಕ್ಕೆ ಸಿ.ಎಂ.ಬದಲಾವಣೆ ಮಾಡಲಾಗ್ತಿದೆ ಎಂಬ...

ಐರನ್‌ಮ್ಯಾನ್ ಸ್ಪರ್ಧೆ ಗೆದ್ದುಬೀಗಿದ ತೇಜಸ್ವಿ ಸೂರ್ಯಗೆ ‘ಮ್ಯಾನ್ ಆಫ್ ಸ್ಟೀಲ್’ ಎಂದ ಪತ್ನಿ ಶಿವಶ್ರೀ!

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸತತ ಎರಡನೇ ವರ್ಷವೂ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಬಾರಿ ಅವರು ಹಿಂದಿನ ವರ್ಷಕ್ಕಿಂತ 40 ನಿಮಿಷ ವೇಗವಾಗಿ, ಕೇವಲ 7 ಗಂಟೆ 49 ನಿಮಿಷಗಳಲ್ಲಿ ಗುರಿ ತಲುಪಿದ್ದಾರೆ. ಪತಿಯ ಈ ಸಾಧನೆ ಕುರಿತು ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ತಮ್ಮ ಸಂತಸವನ್ನು ಸಾಮಾಜಿಕ...

ರಾಜ್ಯಾದ್ಯಂತ ಖಾಕಿ ಪಡೆ ಹೈಅಲರ್ಟ್‌

ದೆಹಲಿಯಲ್ಲಿ ಸ್ಫೋಟ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಖಾಕಿಪಡೆ ಕಟ್ಟೆಚ್ಚರ ವಹಿಸಿದೆ. ನಾಕಾಬಂದಿ ಹಾಕಿ ಪೊಲೀಸರು, ವಾಹನಗಳ ತಪಾಸಣೆ ನಡೆಸಿದ್ದಾರೆ. ಕೆಆರ್ ಮಾರುಕಟ್ಟೆ, ಮೆಜೆಸ್ಟಿಕ್, ಸಿನಿಮಾ ಮಂದಿರ, ಮಾಲ್‌ಗಳು, ದೇವಾಲಯಗಳು, ವಿಮಾನ ನಿಲ್ದಾಣ, ಮೆಟ್ರೋ ಸ್ಟೇಷನ್​​ ಸೇರಿದಂತೆ ನಗರದೆಲ್ಲೆಡೆ ತಪಾಸಣೆ ಹಾಗೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಎಲ್ಲಾ...

ನ. 20ರ ಬಳಿಕ ಕಾಂಗ್ರೆಸ್ಸಲ್ಲಿ ಮಹಾಪ್ರಳಯ!

ನವೆಂಬರ್‌ 20ರ ನಂತರ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಏನಾಗಲಿದೆ. ಯಾವೆಲ್ಲಾ ಬದಲಾವಣೆ ಸಂಭವಿಸಲಿದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರಾ? ಸಚಿವ ಸಂಪುಟ ವಿಸ್ತರಣೆಯಾಗುತ್ತಾ? ಅಥವಾ ನಾಯಕತ್ವ ಬದಲಾವಣೆಯಾಗಿ, ಹೊಸ ಸಿಎಂ ಬರ್ತಾರಾ? ಹೀಗೆ ಹತ್ತಾರು ಪ್ರಶ್ನೆಗಳು ಒಮ್ಮೆಲೆ ಹುಟ್ಟಿಕೊಳ್ಳುತ್ತಿವೆ. ಇದಕ್ಕೆಲ್ಲಾ ಕಾರಣವಾಗಿದ್ದು, ಗೃಹ ಸಚಿವ ಜಿ. ಪರಮೇಶ್ವರ್‌ ಮತ್ತು ಶಾಸಕ ಸುರೇಶ್‌ ಗೌಡ ಅವರ...

ಗೋಲ್ಡ್ ಪ್ರಿಯರಿಗೆ ಬಿಗ್‌ ಶಾಕ್‌!

ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆಯ ಹೆಚ್ಚಳ ಆಗಿದೆ. ಇಂದು ಬರೋಬ್ಬರಿ 2460 ರೂಪಾಯಿ ಏರಿಕೆ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಭಾರಿ ನಿರಾಸೆ ಉಂಟಾಗಿದೆ. ಈ ವಾರದ ಆರಂಭದಿಂದಲೇ ಗರಿಷ್ಠ ಹೆಚ್ಚಳವನ್ನು ಚಿನ್ನದ ಬೆಲೆ ದಾಖಲಿಸುತ್ತಿದೆ. ನವೆಂಬರ್ 11ರ ಮಂಗಳವಾರದಿಂದ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,628 ರೂಪಾಯಿ ಇದ್ದು, ಇಂದು 246...

ಸರ್ಕಾರದ ಹೊಸ AI ವ್ಯವಸ್ಥೆ : 21 ದಿನಗಳಲ್ಲಿ ಪರಿಹಾರ!

ಕರ್ನಾಟಕದಲ್ಲಿ ಸಾರ್ವಜನಿಕ ದೂರು ಸಲ್ಲಿಸುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗುತ್ತಿದೆ. ನೀರು ಸರಬರಾಜಿನ ತೊಂದರೆ, ವಿದ್ಯುತ್ ವ್ಯತ್ಯಯ, ಹದಗೆಟ್ಟ ರಸ್ತೆಗಳು ಅಥವಾ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಎದುರಾಗುವ ಯಾವುದೇ ಸಮಸ್ಯೆಗೂ ಇದೀಗ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್ ಮೂಲಕ ದೂರು ಸಲ್ಲಿಸಲು ಅವಕಾಶ ದೊರೆಯಲಿದೆ. ಕರ್ನಾಟಕ ಇ-ಗವರ್ನೆನ್ಸ್ ಕೇಂದ್ರವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು...

ಮೈಸೂರಿನ ಅಧಿಕಾರಿಗಳಿಗೆ ಸಿಎಂ ಕಠಿಣ ಎಚ್ಚರಿಕೆ ಕೊಟ್ಟಿದ್ಯಾಕೆ ?

ಜನರನ್ನು ಕಚೇರಿಗಳಲ್ಲಿ ಅಲೆದಾಡಿಸುವುದನ್ನು ನಾನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಕೇಂದ್ರದಲ್ಲೇ ಕುಳಿತುಕೊಳ್ಳದೆ ತಾಲ್ಲೂಕು ಮಟ್ಟದಲ್ಲಿ ಜನರ ಅಹವಾಲು ಕೇಳಿ ತಕ್ಷಣ ಪರಿಹರಿಸಿ. ಸೂಚನೆ ಪಾಲಿಸದ ಅಧಿಕಾರಿಗಳ ಬಗ್ಗೆ ವರದಿ...

ಮೈಸೂರಿಗೆ ರಾಷ್ಟ್ರ ಪ್ರಶಸ್ತಿಯ ಗರಿ : ‘ಧ್ವನಿ ಸ್ಪಂದನ’ಗೆ ಕೇಂದ್ರದ ಗೌರವ!

ಮೈಸೂರಿನ ಗೌರವಕ್ಕೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ. ಕೆಎಸ್‌ಆರ್‌ಟಿಸಿ ಮೈಸೂರು ನಗರ ಸಾರಿಗೆ ವಿಭಾಗಕ್ಕೆ ಕೇಂದ್ರ ಸರ್ಕಾರದಿಂದ 2025ರ “ಅವಾರ್ಡ್ ಆಫ್ ಎಕ್ಸಲೆನ್ಸ್ ಇನ್ ಅರ್ಬನ್ ಟ್ರಾನ್ಸ್‌ಪೋರ್ಟ್” ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ನಗರ ಸಾರಿಗೆಯಲ್ಲಿ ಕೈಗೊಂಡ ಅತ್ಯುತ್ತಮ ಯೋಜನೆಗಳ ವರ್ಗದಲ್ಲಿ ದೊರೆತಿದ್ದು, ಮೈಸೂರು ವಿಭಾಗದ ‘ಧ್ವನಿ ಸ್ಪಂದನ’ ಯೋಜನೆ ಅದಕ್ಕೆ ಕಾರಣವಾಗಿದೆ. ಈ ಯೋಜನೆ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img