Sarojni Diaries Part 2: ನಾವು ಭಾಗ 1ರಲ್ಲಿ ಸರೋಜ್ನಿ ಮಾರ್ಕೆಟ್ನಿಂದ ಡೆನಿಮ್ ಜಾಕೇಟ್ ಖರೀದಿಸಿ, ಯಾವ ರೀತಿ ಕಷ್ಟ ಅನುಭವಿಸಿದ್ದರು ಅಂತಾ ಹೇಳಿದ್ವಿ. ಇದೀಗ ಆರ್ಯನ್ ಎನ್ನುವ ವ್ಯಕ್ತಿಗಾದ ಅನುಭವದ ಬಗ್ಗೆ ತಿಳಿಯೋಣ.
ಆರ್ಯನ್ ಎನ್ನುವ ವ್ಯಕ್ತಿ ಸರೋಜ್ನಿ ಮಾರ್ಕೇಟ್ಗೆ ಹೋಗಿ, ಅಲ್ಲಿ ಬಟ್ಟೆ ಖರೀದಿಸಿದ್ದಾನೆ. ಬಳಿಕ ಅದನ್ನು ವಾಶ್ ಮಾಡದೇ, ಒಮ್ಮೆ ಟ್ರೈ ಮಾಡುವಾ ಹೇಳಿ, ಬಟ್ಟೆ ಹಾಕಿ ಟ್ರೈ ಮಾಡಿದ್ದಾನೆ. ಆ ತಕ್ಷಣ ಅವನ ಬೆನ್ನಲ್ಲಿ ಏನೋ 1 ರೀತಿಯ ಹುಳ ಓಡಾಡಿದ ಅನುಭವವಾಯಿತಂತೆ. ಆತ ವಾಶ್ ಮಾಡದೇ ಹಾಕಿದ್ದಕ್ಕೆ ಹೀಗಾಗಿರಬೇಕು ಎಂದು ಸುಮ್ಮನಾಗಿದ್ದಾನೆ.
ಬಳಿಕ ಬೆಡ್ ಬಳಿ ಆ ಬಟ್ಟೆ ಇರಿಸಿ, ನಿದ್ದೆ ಮಾಡಿದ್ದಾನೆ. ಆ ದಿನ ರಾತ್ರಿ ಅವನಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ಅಲ್ಲದೇ, ಬೆಡ್ ಕೆಳಗೆ ಏನೋ ಇರುವಂತೆ ಅವನಿಗೆ ಭಾಸವಾಗುತ್ತಿತ್ತು. ಆದರೆ ಬೆಡ್ ಕೆಳಗೆ ಏನೂ ಇರಲಿಲ್ಲ. ಹಾಗಾಗಿ ಆ ದಿನ ಆರ್ಯನ್ ಹೆದರಿಕೆಯಿಂದಲೇ ನಿದ್ದೆ ಮಾಡಿದ್ದ.
ಮರುದಿನ ಸಂಜೆ ಫ್ರೆಂಡ್ ಬರ್ತ್ಡೇ ಪಾರ್ಟಿ ಇತ್ತು. ಆಗ ಹೊಸ ಟೀ ಶರ್ಟ್ ಹಾಕೋಣವೆಂದು ಆರ್ಯನ್ ನಿರ್ಧರಿಸಿದ್ದ. ಆದರೆ ಅದನ್ನು ಆಗಲೂ ಆತ ವಾಶ್ ಮಾಡಿರಲಿಲ್ಲ. ಹಾಗೆಯೇ ಧರಿಸಿದ್ದ. ಟೀ ಶರ್ಟ್ ಧರಿಸಿ, ಕನ್ನಡಿ ನೋಡಿದಾಗ, 1 ಕ್ಷಣ ಅವನ ಹಿಂದೆ ಯಾವುದೋ ಆಕೃತಿ ಬಂದು ನಿಂತ ಹಾಗೆ ಆತನಿಗೆ ಅನ್ನಿಸಿದೆ. ಬಳಿಕ ತನ್ನ ಭ್ರಮೆ ಎಂದು ಆತ ಪಾರ್ಟಿಗೆ ತೆರಳಿದ್ದಾನೆ.
ಬಳಿಕ ಮನೆಗೆ ಬಂದು ಮೊಬೈಲ್ನಲ್ಲಿ ರೀಲ್ಸ್ ನೋಡುತ್ತಿದ್ದಾಗ, ಅದರಲ್ಲಿ 1 ರೀಲ್ನಲ್ಲಿ ಓರ್ವ ವ್ಯಕ್ತಿ, ನೀವು ಮಾರುಕಟ್ಟೆಯಿಂದ ತರುವ ವಸ್ತ್ರವನ್ನು ಉಪ್ಪು ನೀರಿಗೆ ಹಾಕಿ ವಾಶ್ ಮಾಡಿ, ಬಳಿಕ ಬಳಸಬೇಕು ಎಂದಿದ್ದಾರೆ. ಇದನ್ನು ಕೇಳಿದ ಆರ್ಯನ್ಗೆ, ತಾನು ತಂದ ಬಟ್ಟೆಯಿಂದ ಈ ನಕಾರಾತ್ಮಕತೆ ನನ್ನ ಬಳಿ ಸುಳಿದಿರಬಹುದು ಎಂಬ ಅನುಮಾನ ಬಂದು, ಆತ ಉಪ್ಪು ನೀರಿಗೆ ಹೊಸ ಬಟ್ಟೆಗಳನ್ನ ಹಾಕಿ, ವಾಶ್ ಮಾಡಿ, ಬಳಿಕ ಅದನ್ನು ಧರಿಸಲು ಶುರು ಮಾಡಿದ್ದಾನೆ. ಈ ಘಟನೆ ನಡೆದ ಬಳಿಕ, ಆತನಿಗೆ ಯಾವುದೇ ನಕಾರಾತ್ಮಕತೆ ಉಂಟಾಗಲಿಲ್ಲವಂತೆ.




