ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಬಂಪರ್ ಆರ್ಥಿಕ ಉಡುಗೊರೆ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಶುದ್ಧ ಇಂಧನ ಮತ್ತು ಸುಸ್ಥಿರ ಚಲನಶೀಲತೆಯತ್ತ ಮುಂದಾಗುತ್ತಿದೆ. ಈ ಸಂದರ್ಭ ಕೇಂದ್ರ ಹಣಕಾಸು ಸಚಿವಾಲಯವು ದೇಶದ ಎಲ್ಲಾ 28 ರಾಜ್ಯಗಳಿಗೆ ಒಟ್ಟಾರೆ ₹1,01,603 ಕೋಟಿ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ...
ದೀಪಾವಳಿ ಹಬ್ಬದ ಬೆನ್ನಲ್ಲೇ ಲಕ್ಷಾಂತರ ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ದೀಪಾವಳಿಗೆ ಮುನ್ನವೇ ಬಂಪರ್ ಉಡುಗೊರೆಯಾಗಿ 3% ತುಟ್ಟಿ ಭತ್ಯೆ (Dearness Allowance) ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ಹೆಚ್ಚಳವಾಗಲಿದೆ.
ಅಕ್ಟೋಬರ್ 1, 2025 ರಂದು...
RSS 100 ವರ್ಷಗಳ ಪೂರೈಕೆಯನ್ನು ದೇಶಾದ್ಯಂತ ಭಾರೀ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದೆ. 1925 ಸೆಪ್ಟೆಂಬರ್ 27ರಂದು ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವವನ್ನು ತ್ಯಾಗ, ಭಕ್ತಿ ಮತ್ತು ಸ್ಥಿತಿಸ್ಥಾಪಕತ್ವದ ನಿದರ್ಶನವಾಗಿ ಆಚರಿಸುವಂತೆ ಸಂಘದ ಹಿರಿಯರು ತಿಳಿಸಿದ್ದಾರೆ. ಅಕ್ಟೊಬರ್ 1 ರಂದು ನವದೆಹಲಿಯ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ RSS ಶತಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮ ನಡೆದಿದೆ.
ಪ್ರಧಾನಮಂತ್ರಿ...
ದಸರಾ ಹಬ್ಬದ ಸಂಭ್ರಮದಲ್ಲಿರುವ ದೇಶದ ಜನರಿಗೆ ಬೆಲೆ ಏರಿಕೆಯ ಶಾಕ್ ಸಿಕ್ಕಿದೆ. ತೈಲ ಕಂಪನಿಗಳು ದೇಶಾದ್ಯಂತ ಎಲ್‌ಪಿಜಿ ದರವನ್ನು ಪರಿಷ್ಕರಿಸಿ, ನೂತನ ಪಟ್ಟಿ ಘೋಷಣೆ ಮಾಡಿದೆ. ಚಿನ್ನದ ಬೆಲೆ ಏರಿಕೆಯಿಂದ ಸುಸ್ತಾಗಿರುವ ಜನರಿಗೆ ಈಗ ಎಲ್‌ಪಿಜಿ ದರ ಏರಿಕೆಯ ಬಿಸಿ ಕೂಡ ತಟ್ಟಲಿದೆ.
ದಸರಾ ಹಬ್ಬದ ಜೋಶ್‌ಗೆ ಸರಿಯಾಗಿ ಬೆಲೆ ಏರಿಕೆ ಮಾಡುವ ಮೂಲಕ ಪೆಟ್ರೋಲಿಯಂ...
ಬಿಹಾರ ವಿಧಾನಸಭೆ ಚುನಾವಣೆ ಮಹತ್ವಪೂರ್ಣ ಬೆಳವಣಿಗೆಯಾಗಿದೆ. ಬಿಹಾರದ ಎಲೆಕ್ಷನ್ ಯಾವಾಗ? ಚುನಾವಣೆ ಡೇಟ್ ಯಾವಾಗ ಅನೌನ್ಸ್ ಆಗತ್ತೆ ಅಂತ ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ರಾಜ್ಯದ ಮತದಾರರ ಅಂತಿಮ ಪಟ್ಟಿ ಸೆ.30 ಚುನಾವಣಾ ಆಯೋಗದಿಂದ ಅಧಿಕೃತವಾಗಿ ಪ್ರಕಟಿಸಲಾಗಿದೆ. 7.25 ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಂಡಿರುವ ಈ ಪಟ್ಟಿ, ರಾಜ್ಯದ ಮುಂದಿನ ಚುನಾವಣಾ ಪ್ರಕ್ರಿಯೆಗೆ ದಿಕ್ಕು ನೀಡಲಿದೆ.
ಈ...
ಕರೂರ್‌ನಲ್ಲಿ ವಿಜಯ್ ಅವರ ಟಿವಿಕೆ ರ್‍ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ 40 ಮಂದಿ ಮೃತಪಟ್ಟಿದ್ರು. ಅತಿ ಹೆಚ್ಚು ಜನ ಗಾಯ ಗೊಂಡಿದ್ರು. ವಿಜಯ್ ಆಪ್ತರ ವಿರುದ್ಧ ಕೊಲೆ ಯತ್ನ ಸೇರಿ ಹಲವು ಪ್ರಕರಣ ದಾಖಲಿಸಲಾಗಿದೆ. ಸಿಎಂ ಸ್ಟಾಲಿನ್ ತನಿಖೆಗೆ ಆಯೋಗ ರಚಿಸಿದೆ. ವಿಜಯ್ ಮತ್ತು ಸರಕಾರಗಳು ಮೃತರ ಕುಟುಂಬಗಳಿಗೆ ಒಟ್ಟು 32 ಲಕ್ಷ ರೂ....
ಶಾರದಾ ಪೀಠದಲ್ಲಿ ಚೈತನ್ಯಾನಂದ ಸರಸ್ವತಿ ಹದಿನೇಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಅವರನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ವಿಚಾರಣೆಯ ಭಾಗವಾಗಿ ಅವರನ್ನು ನೈಋತ್ಯ ದೆಹಲಿಯಲ್ಲಿರುವ ಖಾಸಗಿ ಸಂಸ್ಥೆಗೆ ಕರೆದೊಯ್ಯಲಾಗಿದೆ.
ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ, ವಿದ್ಯಾರ್ಥಿನಿಯರಿಗೆ ಹಿಂಸೆ ನೀಡಲಾಗುತ್ತಿದ್ದ ಕೊಠಡಿ ಪತ್ತೆಯಾಗಿದೆ. ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳೂ...
ನೆರೆಯ ಬಾಂಗ್ಲಾದೇಶ, ನೇಪಾಳದ ಬಳಿಕ ಈಗ ಪಾಕಿಸ್ತಾನದಲ್ಲಿಯೂ ಸರ್ಕಾರ ವಿರೋಧಿ ಚಳುವಳಿ ತೀವ್ರಗೊಂಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಂದರೆ ಪಿಒಕೆಯಲ್ಲಿ ಸಾವಿರಾರು ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ ಆರಂಭಿಸಿದ್ದು, ಸರ್ಕಾರದ ತಾರತಮ್ಯ ನೀತಿಗಳ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ಏಳು ದಶಕಗಳಿಂದಲೂ ಜನತೆಯ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವ ಆಡಳಿತದ ವಿರುದ್ಧ ಹೋರಾಟಕ್ಕೆ ಪಿಒಕೆಯಾದ್ಯಂತ ವ್ಯಾಪಾರ ಬಂದ್, ಸಾರಿಗೆ...
ವಿಶ್ವದ ಶ್ರೀಮಂತ ದೇವಾಲಯವೆನಿಸಿಕೊಂಡಿರುವ ತಿರುಮಲ ತಿರುಪತಿ ದೇವಸ್ಥಾನದ ಹುಂಡಿ ಹಣವನ್ನು ದುರುಪಯೋಗ ಮಾಡಿಕೊಂಡು, ಅಲ್ಲಿನ ಸಿಬ್ಬಂದಿಯೊಬ್ಬ 140 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
2023ರ ಏಪ್ರಿಲ್ 29ರಂದು ಸಿಸಿಟಿವಿ ಪರಿಶೀಲನೆಯ ವೇಳೆ, ರವಿಕುಮಾರ್ ಎಂಬ ಸಿಬ್ಬಂದಿ ಲೆಕ್ಕ ಹಾಕುವ ವೇಳೆ ಹುಂಡಿ ಹಣ ಕದ್ದಿರುವುದು ಬಯಲಾಗಿತ್ತು. ತಪಾಸಣೆಯಲ್ಲಿ ಆತನ...
ಕರೂರು ಕಾಲ್ತುಳಿತದಿಂದ ಮನನೊಂದು, ಟಿವಿಕೆ ಪಕ್ಷದ ಮುಖಂಡರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿರ್ಪಟ್ಟು ಗ್ರಾಮ ಶಾಖೆಯ ಕಾರ್ಯದರ್ಶಿ 52 ವರ್ಷದ ಅಯ್ಯಪ್ಪನ್, ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಭೀಕರ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ. ಪೊಲೀಸರು ಸೂಕ್ತ ವ್ಯವಸ್ಥೆಯನ್ನು ಒದಗಿಸಿಲ್ಲ ಎಂದು, ಡೆತ್‌ನೋಟ್‌ನಲ್ಲಿ ಅಯ್ಯಪ್ಪನ್ ಬರೆದಿದ್ದಾರೆ.
ಸೆಪ್ಟೆಂಬರ್...