ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸದಾ ಆಕ್ಟೀವ್ ಪರ್ಸನ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ..ಆದರೆ ಇಂದು ದಿಢೀರಂತ ಬೆಳಿಗ್ಗೆ ಶಿವಣ್ಣನ ಅಭಿಮಾನಿಗಳ ವಲಯದಲ್ಲಿ ಸುದ್ದಿಯೊಂದು ಹರಿದಾಡಿತು.
ಸದ್ಯ ವೇದಾ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೊ ಶಿವಣ್ಣ ಚಿತ್ರೀಕರಣದ ವೇಳೆಯಲ್ಲಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸೆಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಜನರಲ್ ಚೆಕಪ್...
ಮೈಸೂರು: ವೇದಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಜ್ವರ ಕಾಣಿಸಿಕೊಂಡು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮರಳಿದ್ದಾರೆ ಎನ್ನಲಾಗಿದೆ.
ಮೈಸೂರಿನಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವಂತ ವೇದಾ ಸಿನಿಮಾ ಶೂಟಿಂಗ್ ನಲ್ಲಿ ಅವರು ಬ್ಯುಸಿಯಾಗಿದ್ದರು. ಶೂಟಿಂಗ್ ನಲ್ಲಿ ಇದ್ದಂತ ಸಂದರ್ಭದಲ್ಲಿಯೇ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ, ಆಸ್ಪತ್ರೆಗೆ ಚಿಕಿತ್ಸೆಗಾಗಿ...
ಪ್ರೀತಿ ಎಸ್ ಬಾಬು ನಿರ್ದೇಶನದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಪ್ರೀತಿ ಎಸ್ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ "ರಾಜಿ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಶ್ರೀನಗರ ಕಿಟ್ಟಿ ಹಾಗೂ ವಿಜಯ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.
ಈ ಸಿನಿಮಾ ನನಗೆ ವಿಶೇಷ. ಏಕೆಂದರೆ, ಇದರ ಮುಹೂರ್ತ ಕಳೆದವರ್ಷ...
ಕನ್ನಡದ ಭರವಸೆಯ ಮ್ಯೂಸಿಕ್ ಸಂಸ್ಥೆ ಲಹರಿ ಮಡಿಲಿಗೆ ಮತ್ತೊಂದು ಗರಿ ಮೂಡಿದೆ. ಹೌದು, ಭಾವಗೀತೆ ಮತ್ತು ಜಾನಪದ ಗೀತೆ ಚಾನೆಲ್ ನಲ್ಲಿ ಈವರೆಗೆ ೧೧.೫೫ ಲಕ್ಷ ಸಬ್ ಸ್ಕ್ರೈಬರ್ ಇದ್ದು, ಈ ಚಾನೆಲ್ ಈಗ ಹೊಸದೊಂದು ದಾಖಲೆ ಬರೆದಿದೆ. ಆ ದಾಖಲೆ ಬೇರೇನೂ ಅಲ್ಲ,
ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಗೋಲ್ಡ್ ಅವರ‍್ಡ್ ಲಭಿಸಿದೆ.
ಶುಭ ಸೋಮವಾರ...
ಮಾರ್ಚ್ ಹದಿನೇಳರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಯಶಸ್ಸು ಕಾಣುತ್ತಿರುವ ಚಿತ್ರ ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್". ದುರಾದೃಷ್ಟವಶಾತ್ ಚಿತ್ರಕ್ಕೆ ಡಬ್ಬಿಂಗ್ ನೀಡುವುದಕ್ಕೆ ಮೊದಲೇ ಅಪ್ಪು ಎಲ್ಲರನ್ನೂ ಬಿಟ್ಟು ದೂರವಾದರು. ನಂತರ ಶಿವರಾಜಕುಮಾರ್, ಪುನೀತ್ ಅವರ ಪಾತ್ರಕ್ಕೆ ಧ್ವನಿ ನೀಡಿದ್ದರು. ಶಿವಣ್ಣ ಧ್ವನಿ ನೀಡಿದಾಗ ಅಭಿಮಾನಿಗಳು ಸಂತಸ ಪಟ್ಟಿದ್ದರು.
ಇದೇ 22 ರ ಶುಕ್ರವಾರದಿಂದ "ಜೇಮ್ಸ್" ಚಿತ್ರದಲ್ಲಿ...
ಶ್ರೀಮತಿ ಬಿ.ಜಿ.ಗೀತಾ ಅವರು ಜನಮಿತ್ರ ಮೂವೀಸ್ ಮೂಲಕ ನಿರ್ಮಿಸಿ, ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‍ಗಾಂಧಿ’ ಕನ್ನಡ ಚಿತ್ರವು 12ನೇ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ಅಲ್ಲದೆ, ಈಗಾಗಲೇ ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದೆ.
ದೆಹಲಿಯ ಸಂಸ್ಥೆಯೊಂದು ದಾದಾ ಸಾಹೇಬ್ ಫಾಲ್ಕೆ ಅವರ ಜನ್ಮದಿನದಂದು ಹನ್ನೊಂದು ವರ್ಷಗಳಿಂದ ಈ...
ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದ ದುನಿಯಾ ವಿಜಯ್, "ಸಲಗ" ಮೂಲಕ ನಿರ್ದೇಶಕರಾಗೂ ಯಶಸ್ವಿಯಾದರು.
ವಿಜಯ್ ಅವರ ಎರಡನೇ ನಿರ್ದೇಶನದ "ಭೀಮ" ಚಿತ್ರದ ಮುಹೂರ್ತ ಸಮಾರಂಭ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ನಾಗಿ ಮುಂತಾದ ಗಣ್ಯರು ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
"ಸಲಗ" ನಂತರ...
ಧ್ರುವ ಸರ್ಜಾ ಯುದ್ಧಕ್ಕಿಳೀತಿದ್ದಾರೆ. ಯುದ್ಧದಲ್ಲಿ ಧ್ರುವ ಅರ್ಜುನನಾದ್ರೆ ಪ್ರೇಮ್ ಶ್ರೀಕೃಷ್ಣ. ಯಾವ ಪ್ರೇಮ್ ಅನ್ಕೊತಿದ್ದೀರಾ..? ಇನ್ಯಾರು ನಮ್ಮ ಜೋಗಿ ಪ್ರೇಮ್. ಹೌದು ಧ್ರುವ ಸರ್ಜಾ ಮುಂದಿನ ಸಿನಿಮಾ ಅನೌನ್ಸ್ ಆಗಿದೆ. ಟೈಟಲ್ ಫಿಕ್ಸ್ ಆಗದಿದ್ರೂ ಹಿಂದಿನಿAದಲೂ ಈ ಸಿನಿಮಾದ ಟೈಟಲ್ ಯುದ್ಧ ಅನ್ನೋ ಸುದ್ದಿ ಚಾಲ್ತಿಯಲ್ಲಿದೆ.
ಇಲ್ಲಿ ಯುದ್ಧ ಮಾಡೋಕೆ ಧ್ರುವ ಸರ್ಜಾ ಇನ್ನೂ ತಯಾರಾಗಬೇಕು,...
ಸಿನಿಮಾ ಪತ್ರಕರ್ತನಾಗಿ ಗುರುತಿಸಿಕೊಂಡಿರುವ ಯತಿರಾಜ್, ಈಗ ನಿರ್ದೇಶಕ ಹಾಗೂ ಕಲಾವಿದನಾಗೂ ಚಿರಪರಿಚಿತ. ಪ್ರಸ್ತುತ ಯತಿರಾಜ್ ನಿರ್ದೇಶಿಸಿ , ನಾಯಕನಾಗೂ ನಟಿಸುತ್ತಿರುವ "ಮಾಯಾಮೃಗ" ಚಿತ್ರದ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ಆರಂಭವಾಯಿತು. ಸ್ಥಳೀಯ ಮುಖಂಡರಾದ ರಾಜಣ್ಣ, ಜಯಣ್ಣ ಮುಂತಾದವರು ಚಿತ್ರೀಕರಣ ಆರಂಭದ ವೇಳೆ ಉಪಸ್ಥಿತರಿದ್ದು, ಶುಭ ಕೋರಿದರು. ಶ್ರೀರಂಗಪಟ್ಟಣದ ಸುತ್ತಮುತ್ತ ಇಪ್ಪತ್ತೈದು ದಿನಗಳ ಒಂದೇ ಹಂತದ...
ಏಪ್ರಿಲ್ 24 ವರನಟ ಡಾ||ರಾಜಕುಮಾರ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಏಪ್ರಿಲ್ 28 ಗರುವಾರ ಸಂಜೆ 6.30ಕ್ಕೆ ಗಾನಗಂಧರ್ವ ಡಾ||ರಾಜಕುಮಾರ್ ನೆನಪಿನಲ್ಲಿ "ಮೈ ನೇಮ್ ಇಸ್ ರಾಜ್" ಎಂಬ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಕೆಲವು ವರ್ಷಗಳ ಹಿಂದೆ "ಸರಿಗಮಪ" ಮೂಲಕ ಮರಿ ಅಣ್ಣವ್ರು ಅಂತಲೇ ಹೆಸರಾಗಿದ್ದ ಮನೋಜವಂ ಅತ್ರೇಯ ಸಾರಥ್ಯದಲ್ಲಿ ಈ ಸಂಗೀತ ಕಾರ್ಯಕ್ರಮ...