ನರಾಚಿ ಕೋಟೆಯ ಕಹಾನಿಯನ್ನು ಬರೀ ಕರ್ನಾಟಕವಷ್ಟೇ ಅಲ್ಲ ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ರಾಕಿಭಾಯ್ ಉಗ್ರಾವತಾರಕ್ಕೆ, ಸ್ವಾಗ್ ಎಂಟ್ರಿಗೆ ಅಭಿಮಾನಿಗಳು ಉಘೇ ಉಘೇ ಅಂತಿದ್ದಾರೆ. ಕೆಜಿಎಫ್-2 ಸಿನಿಮಾ ರಿಲೀಸಾದ ಒಂದು ವಾರಕ್ಕೇನೇ ಲೆಕ್ಕವಿಲ್ಲದಷ್ಟು ದಾಖಲೆಗಳನ್ನ ಮಾಡಿ, ಭಾಕ್ಸಾಫೀಸನ್ನ ಧೂಳೆಬ್ಬಿಸುತ್ತಿದೆ. ಒಂದೇ ವಾರದಲ್ಲಿ ವಿಶ್ವದಾದ್ಯಂತ 800 ಕೋಟಿ ಗಳಿಕೆ ಕಂಡು ಕನ್ನಡ ಚಿತ್ರರಂಗವನ್ನ ಅತೀ ಎತ್ತರಕ್ಕೆ ಕೊಂಡೊಯ್ಯುತ್ತಿದೆ...
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲಾ ಅಗಲಿ ೬ ತಿಂಗಳುಗಳೇ ಕಳೆದೋಗಿದೆ. ಆದರೂ ಅಪ್ಪು ತಮ್ಮ ಮುಂದಿನ ಸಿನಿಮಾ ಅಪ್ಡೇಟ್ ಕೊಡ್ತಾರೆ, ಶೂಟಿಂಗ್ ಟೈಮ್‌ನಲ್ಲಿ ಅವರನ್ನ ಮುಂದಿನ ದಿನಗಳಲ್ಲಿ ಕಣ್ತುಂಬಿಕೊಳ್ಬೋದು ಅನ್ನೋ ಅಪರಿಮಿತ ಆಸೆಯನ್ನ ಇಟ್ಕೊಂಡಿದ್ದಾರೆ ಪವರ್ ಸ್ಟಾರ್ ಫ್ಯಾನ್ಸ್. ಜೇಮ್ಸ್ ಸಿನಿಮಾ ಬಳಿಕ ಅಪ್ಪು ಹಲವು ಸಿನಿಮಾಗಳನ್ನ ಒಪ್ಕೊಂಡಿದ್ರು.
ಇದರ ಜೊತೆಯಲ್ಲಿ ಸಂತೋಷ್ ಆನಂದ್‌ರಾಮ್...
ಶೋಕ್ದಾರ್ ಖ್ಯಾತಿಯ ಧನ್ವೀರ್ ಗೌಡ ಶೂಟಿಂಗ್ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಶಂಕರ್ ರಾಮನ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ವಾಮನ ಸಿನಿಮಾದ ಫೈಟಿಂಗ್ ದೃಶ್ಯಗಳನ್ನು ಬೆಂಗಳೂರಿನ ಯಲಹಂಕದಲ್ಲಿ ಚಿತ್ರೀಕರಿಸಲಾಗ್ತಿತ್ತು. ಈ ವೇಳೆ ರೋಪ್ ನಿಂದ ಕೆಳಗೆ ಬಿದ್ದ ಧನ್ವೀರ್ ಕೈಗೆ ಪೆಟ್ಟಾಗಿದೆ. ತಕ್ಷಣ ಆಸ್ಪತ್ರೆಗೆ ತೆರಳಿ ಧನ್ವೀರ್ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ವಾಮನ ಶೂಟಿಂಗ್ ವೇಳೆ ಆದ...
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ "ಪ್ರಾರಂಭ" ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೀರ್ತಿ ಕಲ್ಕೇರಿ ಈ ಚಿತ್ರದ ನಾಯಕಿ.
ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಮನುರಂಜನ್ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.
ವಿಭಿನ್ನ...
೧೦ ಪಟ್ಟು ಲಾಭದತ್ತ ಕೆಜಿಎಫ್ ಚಾಪ್ಟರ್ ೨
ಕೆಜಿಎಫ್ ಚಾಪ್ಟರ್ ೨ ಅಲೆ ದೇಶ ವಿದೇಶಗಳಲ್ಲಿ ಸುನಾಮಿಯಂತೆ ಅಬ್ಬರಿಸುತ್ತಿದೆ. ನಿರೀಕ್ಷೆಯಂತೆಯೇ ಒಂದೇ ವಾರದಲ್ಲಿ ಚಿತ್ರ ದಿನಕ್ಕೆ ನೂರು ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆ. ಮೊದಲ ದಿನ ೧೬೪ ಕೋಟಿ ಬಾಕ್ಸಾಫೀಸ್ ಧೂಳಿಪಟ ಮಾಡಿದ ಕನ್ನಡದ ಹೆಮ್ಮೆಯ ಕೆಜಿಎಫ್ ನಿರೀಕ್ಷೆಯಂತೇ ದೊಡ್ಡ ಮೊತ್ತದತ್ತ ಮುನ್ನುಗಿದೆ. ಹಾಗೆ ನೋಡಿದ್ರೆ...
ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ "ಹೊಯ್ಸಳ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.
ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ "ಕ್ಲಾಪ್" ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ "ಕ್ಯಾಮೆರಾ" ಚಾಲನೆ...
ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ಬರಲಿದೆ ಈ ನೂತನ ಸಿನಿಮಾ.
‘ಹೊಂಬಾಳೆ ಫಿಲಂಸ್’ ಈಗ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ.
ಈ ಸಂಸ್ಥೆಯ ನಿರ್ಮಾಣದ "ಕೆ ಜಿ ಎಫ್ 2" ವಿಶ್ವದೆಲ್ಲೆಡೆ ಯಶಸ್ಸಿನ ಜಯಭೇರಿ ಬಾರಿಸುತ್ತಿದೆ. ಗಳಿಕೆಯಲ್ಲೂ ಮೇಲುಗೈ ಸಾಧಿಸಿದೆ.
ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸಾಹಸಕ್ಕೆ ಜನ ಬಹುಪರಾಕ್ ಹೇಳುತ್ತಿದ್ದಾರೆ.
ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ನಿರ್ಮಾಣ ಮಾಡಿರುವ ಈ ಸಂಸ್ಥೆಯಿಂದ...
ನವರಸ ನಾಯಕ ಜಗ್ಗೇಶ್ ನಟಿಸಿರುವ 'ತೋತಾಪುರಿ' ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಹಾಗೂ ಹಾಡಿನ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ 'ತೋತಾಪುರಿ' ಟ್ರೇಲರ್ ಏಪ್ರಿಲ್ 21ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್ ತೋತಾಪುರಿ ಟ್ರೇಲರ್ ರಿಲೀಸ್...
ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ನಿರ್ದೇಶಕ ರಾಮಚಂದ್ರ ವೈದ್ಯ..!
ಜೊತೆ ಜೊತೆಯಲಿ, ಶುಭ ವಿವಾಹ, ಮಾನಸ ಸರೋವರ ಸೇರಿದಂತೆ ಹಲವು ಧಾರಾವಾಹಿಗಳ ನಿರ್ದೇಶಿಸಿ.. ಕಳೆದ ಹದಿನೈದು ವರ್ಷಗಳಿಂದ ಕಿರುತೆರೆ ಲೋಕದಲ್ಲಿ ಛಾಪೂ ಮೂಡಿಸಿರುವ ನಿರ್ದೇಶಕ ರಾಮಚಂದ್ರ ವೈದ್ಯ ಈಗ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. 'ಒಂದಂಕೆ ಕಾಡು' ಸಿನಿಮಾ ಮೂಲಕ ಚಂದನವನದ ಅಂಗಳ ಪ್ರವೇಶಿಸಿದ್ದಾರೆ.
'ಒಂದಂಕೆ ಕಾಡು' ಮೋಷನ್ ಪೋಸ್ಟರ್...
ಒಂದು ಕಾಲದಲ್ಲಿ ಹಿರಿತೆರೆ ಹಾಗೂ ಕಿರುತೆರೆಗೆ ಸಾಕಷ್ಟು ವ್ಯತ್ಯಾಸವಿತ್ತು. ಈಗ ಹಾಗಲ್ಲ. ಕಿರುತೆರೆಯಲ್ಲಿ ಸಾಕಷ್ಟು ಅದ್ದೂರಿ ಹಾಗೂ ಅಪಾರವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಅಷ್ಟೇ ಜನಪ್ರಿಯತೆ ಆಗುತ್ತಿದೆ.
ಜನಮನ್ನಣೆ ಪಡೆದ ಧಾರಾವಾಹಿಗಳಲ್ಲಿ ಕಿರಣ್ ರಾಜ್ ಅಭಿನಯದ " ಕನ್ನಡತಿ" ಕೂಡ ಒಂದು. ಇಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಈ ಧಾರಾವಾಹಿ ಈಗ ಹಿಂದಿಗೆ ಡಬ್ ಆಗಲಿದೆ. "ಅಜ್ನಾಬಿ ಬನೇ...