ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ 1 ಲಕ್ಷ, 01 ಸಾವಿರದ 603 ಕೋಟಿ ರೂಪಾಯಿ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕಕ್ಕೆ ₹3,705 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯಗಳ ಅಭಿವೃದ್ಧಿ ವೆಚ್ಚಗಳಿಗೆ ಹಣಕಾಸು ಒದಗಿಸುವುದು, ಬಂಡವಾಳ ವೆಚ್ಚವನ್ನು ವೇಗಗೊಳಿಸುವುದು ಮತ್ತು ಮುಂಬರುವ ಹಬ್ಬಗಳ ಋತುವಿನ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು...
ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭವಾದ ಎಸ್ಐಟಿ ತನಿಖೆ, ಬೇರೆಯದ್ದೇ ತಿರುವು ಪಡೆದುಕೊಂಡಿದೆ. ಮಾಸ್ಕ್ಮ್ಯಾನ್ ಚಿನ್ನಯ್ಯ, ತಿಮರೋಡಿ, ಮಟ್ಟಣ್ಣವರ್, ಜಯಂತ್ ವಿಚಾರಣೆ ಬಳಿಕ, ಅಧಿಕಾರಿಗಳು ಯೂಟ್ಯೂಬರ್ಗಳ ಬೆನ್ನು ಬಿದ್ದಿದ್ದಾರೆ.
ಎಂ.ಡಿ. ಸಮೀರ್, ಹಾಸನ ಮೂಲದ ಅಭಿಷೇಕ್ ಸೇರಿದಂತೆ 5ಕ್ಕೂ ಹೆಚ್ಚು ಯೂಟ್ಯೂಬರ್ಗಳ ವಿಚಾರಣೆ ನಡೀತಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ, ಈ...
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಹೊಸ ವರದಿ ಸ್ಪಷ್ಟಪಡಿಸಿದೆ. 2023ರ NCRB ವರದಿ ಪ್ರಕಾರ, ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಕಳೆದ ಎರಡು ವರ್ಷಗಳಲ್ಲಿ ಶೇ.40ರಷ್ಟು ಹೆಚ್ಚಾಗಿವೆ ಎಂಬ ಆಘಾತಕಾರಿ ಅಂಕಿ-ಅಂಶ ಹೊರಬಿದ್ದಿದೆ.
ಇದರ ನಡುವೆಯೇ, ಬೆಂಗಳೂರಿನಲ್ಲಿ ಕಳೆದ ತಿಂಗಳ 10ರಂದು ಒಂದೇ...
ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಣಮುಖರಾಗಿದ್ದು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಖರ್ಗೆ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ವಯೋಸಹಜ ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಯಿಂದಾಗಿ, ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಮಲ್ಲಿಕಾರ್ಜುನ ಖರ್ಗೆ ದಾಖಲಾಗಿದ್ರು. ಸದ್ಯ, ಖರ್ಗೆ ಅವರಿಗೆ ಫೇಸ್ ಮೇಕರ್ ಅಳವಡಿಕೆ ಯಶಸ್ವಿಯಾಗಿದ್ದು, ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಹೃದಯ...
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು, ಕುಣಿಗಲ್ ಶಾಸಕ ರಂಗನಾಥ್ ಉಪವಾಸ ಮಾಡಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ವಗರಗೆರೆ ಗ್ರಾಮದ, ದಲಿತ ಮಹಿಳೆ ಜಯಮ್ಮ ಎಂಬುವರ ಮನೆಯಲ್ಲಿ, ಮುದ್ದೆ ಸಾರು ಊಟ ಮಾಡಿ ಉಪವಾಸ ಅಂತ್ಯಗೊಳಿಸಿದ್ದಾರೆ.
ಉಪವಾಸ ಮುಗಿದ ಬಳಿಕ ಮಾತನಾಡಿದ ಶಾಸಕ ರಂಗನಾಥ್, ನವರಾತ್ರಿ ದಿನ ಹಲವರು ಸಂಕಲ್ಪ ಮಾಡಿ ಉಪವಾಸ ಮಾಡುವ ಮೂಲಕ, ಶಕ್ತಿ...
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಕಿಚ್ಚು, ಮತ್ತೆ ಧಗಧಗಿಸ್ತಿದೆ. ನಿಗಮ ಮಂಡಳಿಗಳ ನೇಮಕಾತಿ ಬಳಿಕ, ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತ ಸಚಿವರು, ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಮಧ್ಯೆ ಅಧಿಕಾರ ಹಂಚಿಕೆ ಅಥವಾ ಬದಲಾವಣೆ ಸೂತ್ರ, ಕೇವಲ ನಿಗಮ ಮಂಡಳಿಗಳ ಮಟ್ಟಕ್ಕೆ ಮಾತ್ರ ಸೀಮಿತ ಅಂತಾ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ...
ಹಾವು ಎಂದರೇ ಹೌಹಾರಿಬಿಡ್ತೀವಿ. ಎದ್ನೋ ಬಿದ್ನೋ ಅಂತ ಓಡಿಬಿಡ್ತೀವಿ. ಆದರೇ, ಇಲ್ಲೊಬ್ಬ ವ್ಯಕ್ತಿ ಹಾವುಗಳನ್ನ ಸ್ನೇಹಿತರಂತೆ ನೋಡ್ತಾರೆ. ಅದ್ಯಾವುದೇ ಜಾತಿಯ ಹಾವೇ ಇರ್ಲಿ, ಸಂಕಷ್ಟದಲ್ಲಿದ್ದರೇ ಈತನೇ ಅವುಗಳ ಪಾಲಿಗೆ ವೆಂಕಟರಮಣ ಆಗಿದ್ದಾನೆ. ಹೀಗೆ ರೋಜ್ ಹಿಡಿಯೋ ರೀತಿ ಹಾವು ಹಿಡಿಯೋ ಉರಗ ಪ್ರೇಮಿ ಯಾರು ಗೊತ್ತಾ? ಇವರೇ ವಸಂತ್..
ವಸಂತ್ ಶಿಳ್ಳೆಕ್ಯಾತವರ.. ಕೊಪ್ಪಳ ಜಿಲ್ಲೆಯ ಕೆರಳ್ಳಿ...
ರಾಜ್ಯದ ರಾಜಧಾನಿ ಬೆಂಗಳೂರಿನ ಭಾಗವೇ ಆಗಿ ಕಾಣೋ ತುಮಕೂರು ಜಿಲ್ಲೆಗೂ ನಮ್ಮ ಮೆಟ್ರೋ ಸಾಗಲಿದೆ ಅನ್ನೋ ವಿಷಯ ಕೇಳಿಯೇ ತುಮಕೂರಿನ ಮಂದಿ ಖುಷಿಪಟ್ಟಿದ್ದಾರೆ. ಸದ್ಯ, ಕರ್ನಾಟಕ ಸರ್ಕಾರವು ಬೆಂಗಳೂರು - ತುಮಕೂರು ಮೆಟ್ರೋ ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಅನುಮೋದನೆ ನೀಡಿದೆ. ಸದ್ಯ ಯೋಜನೆಯ 2ನೇ ಹಂತವಾದ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧ...
ಕಳೆದ 7 ದಿನಗಳಿಂದ ಈ ಸ್ವಾಮಿಯ ಮಾತಿಲ್ಲ... ಊಟವಿಲ್ಲ..! ಎಲ್ಲದಕ್ಕೂ ಕಾರಣ 'ಲೋಕ ಶಾಂತಿ'ಯ ಸಂಕಲ್ಪ! ಸಕ್ಕರೆನಾಡು ಮಂಡ್ಯದಲ್ಲಿ ಒಂದು ಅದ್ಭುತ ದೃಶ್ಯ ನಡೆಯುತ್ತಿದೆ. ಪ್ರತಿ ನಿತ್ಯ ಒಂದಿಲ್ಲೊಂದು ಕಾರಣದಿಂದ ಈ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗುತ್ತಿದೆ. ಈ ಅನಾಹುತ ತಡೆಯುವ ನಿಟ್ಟಿನಲ್ಲಿ ಲೋಕ ಕಲ್ಯಾಣಾರ್ಥವಾಗಿ ಇಲ್ಲೊಬ್ಬರು ಸ್ವಾಮೀಜಿ ತಮ್ಮ ಮಾತನ್ನೇ ನಿಲ್ಲಿಸಿದ್ದಾರೆ.
ಹೌದು...