'ಪ್ರೀತಿ ಅಂದ್ರೆ ಉಸಿರು' ಅಂತಾರೆ. ಆದರೆ ಇಂದಿನ ಕೆಲವರ ಪ್ರೇಮ ಕಥೆಗಳು ಕೇಳಿದರೆ ಉಸಿರೇ ನಿಂತುಹೋಗುವಂತಿದೆ. ಪ್ರೀತಿಯ ನೋವನ್ನು ಸಹಿಸಿಕೊಳ್ಳಲಾಗದೆ ಯುವಕನೊಬ್ಬ ದುರಂತ ಅಂತ್ಯ ಕಂಡ ಘಟನೆ ತುಮಕೂರಿನಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದ ಸುರೇಶ್ (20) ಎಂಬ ಯುವಕ, ತುಮಕೂರಿನ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದ. ಕಾಲೇಜಿನ ಹಿರಿಯ ವಿದ್ಯಾರ್ಥಿನಿಯೊಬ್ಬಳ ಜೊತೆ ಪ್ರೀತಿಯಲ್ಲಿ...
ಕೊಲ್ಲಾಪುರದ ಕನ್ನೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾ ಆಡಳಿತ ಆದೇಶಕ್ಕೆ ಹೊರಡಿಸಿದೆ. ಈ ಸಂಬಂಧ ಕನ್ನೇರಿ ಶ್ರೀಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಅವರನ್ನೊಳಗೊಂಡ ಪೀಠವು ಈ ವಿಚಾರಣೆ ವೇಳೆ ಕನ್ನೇರಿ ಸ್ವಾಮೀಜಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣೆ...
ರಾಜ್ಯ ರಾಜಕೀಯದಲ್ಲಿ ಇದೀಗ ಆರ್ಎಸ್ಎಸ್ ವಿಚಾರ ರಾಜಕೀಯ ರಂಗು ಪಡೆದುಕೊಂಡಿದೆ. ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ಆರೋಪ–ಪ್ರತ್ಯಾರೋಪಗಳು ತಾರಕಕ್ಕೇರಿವೆ. ಈ ಹಿನ್ನೆಲೆ, ಆರ್ಎಸ್ಎಸ್ನಿಂದ ಬಂದಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ನಡೆದ ಅಚ್ಚರಿ ಕ್ಷಣವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, ರವಿಕುಮಾರ್ ಅವರು ಇಂದು ಸಿಎಂ ನಿವಾಸ...
ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮೂಲದ ಬಾಬಾಸಾಹೇಬ್ ಕೋಳೇಕರ್ ಎಂಬಾತ ಹಲವಾರು ಮಹಿಳೆಯರಿಂದ ಸುಮಾರು 12 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿದ್ದಾನೆ.
ಮಹಿಳೆಯರಿಗೆ ಅಗರಬತ್ತಿ ಪ್ಯಾಕಿಂಗ್ ಕೆಲಸ ಕೊಡಲಾಗುತ್ತದೆ ಎಂದು ನಂಬಿಸಿ, ಬಾಬಾಸಾಹೇಬ್ ಕೋಳೇಕರ್ ಮಹಿಳಾ ಗೃಹ ಉದ್ಯೋಗ ಸಮೂಹ ಬೆಳಗಾವಿ ಎಂಬ ಹೆಸರಿನಲ್ಲಿ...
RSS ಸಂಘಟನೆಯ ಪಥಸಂಚಲನದಲ್ಲಿ ಭಾಗಿಯಾಗಿದ್ದ ನಾಲ್ವರು ಶಿಕ್ಷಕರಿಗೆ ನೋಟಿಸ್ ಜಾರಿಯಾಗಿದೆ. ರಾಜ್ಯ ಸರ್ಕಾರವು ಆರ್ಎಸ್ಎಸ್ ಚಟುವಟಿಕೆಗಳ ಮೇಲೆ ಪರೋಕ್ಷವಾಗಿ ಅಂಕುಶ ಹಾಕಲು ಯತ್ನಿಸುತ್ತಿದ್ದ ವೇಳೆಯಲ್ಲೇ, ಈ ಬೆಳವಣಿಗೆ ನಡೆದಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಅಕ್ಟೋಬರ್ 7 ಮತ್ತು 13ರಂದು ಆರ್ಎಸ್ಎಸ್ ಪಥಸಂಚಲನ ನಡೆದಿತ್ತು. ಈ ಪಥಸಂಚಲನದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾದ ಮಹದೇವ, ಶಾಲಿವಾನ್, ಪ್ರಕಾಶ್...
ಸಚಿವ ಜಮೀರ್ ಅಹಮದ್ ಭಾಗಿಯಾಗಿದ್ದ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮ ನಡೆದಿದೆ. ಹೈದರಾಬಾದ್ ಮೂಲದ ವ್ಯಾಪಾರಿ ಮೋಸ ಮಾಡಿದ್ದಾನೆ ಅಂತಾ, ಸಚಿವ ಜಮೀರ್ ಅಹಮದ್ ಎದುರು, ಜೋಳದ ವ್ಯಾಪಾರಿಯೊಬ್ರು ಕಣ್ಣೀರು ಹಾಕಿದ್ದಾರೆ. ವಂಚನೆ ಮಾಡಿರುವ ವ್ಯಾಪಾರಿಗಳ ಪರ ಜಮೀರ್ ಅಹಮದ್ ನಿಂತಿರುವುದಾಗಿ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಶಾದಿಮಹಲ್ಗೆ ಸಚಿವ ಜಮೀರ್ ಬಂದಿದ್ರು. ಆ ವೇಳೆ ಪಾಪ್...
ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಕಾರ್ಯಕ್ರಮ ಮಾಡಲು, ಅನುಮತಿ ನೀಡಬೇಕಂದ್ರೆ, ಮೊದಲು ವಾತಾವರಣ ಸರಿ ಇರಬೇಕು. ಕಾನೂನು ಸುವ್ಯವಸ್ಥೆ ಕಾಪಾಡೋದು ಸರ್ಕಾರದ ಜವಾಬ್ದಾರಿ. ಅನುಮತಿ ಕೇಳುವ ವಿಚಾರದಲ್ಲಿ ಸಂಘರ್ಷ ಇದ್ರೆ ಪರ್ಮಿಷನ್ ಕೊಡೋದಕ್ಕೆ ಅಗಲ್ಲ.
ಆರ್ಎಸ್ಎಸ್ನವರು ಮೊದಲು ಶಾಂತಿಯುತವಾದ ವಾತಾವರಣ ನಿರ್ಮಾಣ ಮಾಡಲಿ. ನಾನೆಲ್ಲೂ...
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಪವರ್ ಶೇರಿಂಗ್ ವಿಚಾರವಾಗಿ ಕೋಲ್ಡ್ ವಾರ್ ನಡೀತಿದೆ. ಈ ಮಧ್ಯೆ ಡಿಕೆಶಿ ತಮ್ಮ ಮಾಜಿ ಸಂಸದ ಡಿ.ಕೆ ಸುರೇಶ್ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ.
98-95 ವಯಸ್ಸು ಆಗಿರುವವರೂ ರಾಜಕೀಯದಲ್ಲಿ ಇದ್ದಾರೆ. ಹೀಗಾಗಿ 2028ರಲ್ಲಿ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದರೆ ತಪ್ಪೇನಿಲ್ಲ. ಅವರು ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಮುಂದಿನ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹಿಂದ ಸಂಘಟನೆಗಳ ಬೆಂಬಲ ಮತ್ತಷ್ಟು ಗಟ್ಟಿಯಾಗುತ್ತಿದೆ. ಈಗ ಅಹಿಂದ ಮತ್ತು ದಲಿತ ಸಂಘಟನೆಗಳು ಸಿದ್ದರಾಮಯ್ಯ 5 ವರ್ಷಗಳ ಕಾಲ ಸಿಎಂ ಆಗಿರಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿ ಪತ್ರ ಚಳವಳಿ ಆರಂಭಿಸಿವೆ.
ಸಂಘಟನೆಗಳು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿಗೆ ಪತ್ರ ಬರೆದು, ರಾಜ್ಯದ ಪವರ್ ಶೇರಿಂಗ್ ಕುರಿತು ನಡೆಯುತ್ತಿರುವ ಗೊಂದಲಕ್ಕೆ ತಕ್ಷಣ...
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆಯಂತೆ. ಹಿರಿಯ ನಾಯಕರೊಬ್ಬರು ಸಿಎಂ ಆಗ್ತಾರಂತೆ. ಡಿಕೆಶಿ, ಜಾರಕಿಹೊಳಿ ಯಾರಿಗೂ ಸಿಎಂ ಪಟ್ಟ ಸಿಗೋದಿಲ್ವಂತೆ. ಹೀಗಂತ ಬೆಳಗಾವಿಯಲ್ಲಿ ಶಾಸಕ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನವೆಂಬರ್ನಲ್ಲಿ ಬ್ಲಾಕ್ ಹಾರ್ಸ್ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆಯವರೇ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ನನ್ನ ಜೀವನದಲ್ಲಿ ಒಂದು ದಿನವಾದ್ರೂ ಸಿಎಂ ಅಗಬೇಕೆಂದು ಖರ್ಗೆ ಕುಳಿತಿದ್ದಾರೆ....