ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು, ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಬುರುಡೆ ಗ್ಯಾಂಗಿನ ಜನ್ಮ ಜಾಲಾಡ್ತಿದ್ದು, ಸುದೀರ್ಘ ವಿಚಾರಣೆಗೆ ಮುಂದಾಗಿದ್ದಾರೆ. ಮಾಸ್ಕ್‌ಮ್ಯಾನ್ ಚಿನ್ನಯ್ಯ ಬಹಳ ಸ್ಪಷ್ಟವಾಗಿ ಕೆಲವರ ಹೆಸರುಗಳನ್ನು ಹೇಳಿದ್ದಾನೆ. ಮಟ್ಟಣ್ಣವರ್, ತಿಮರೋಡಿ, ಜಯಂತ್, ಸಮೀರ್, ವಿಠಲ ಗೌಡ, ಪ್ರದೀಪ್ ಗೌಡ ಸೇರಿದಂತೆ, ಹಲವು ಯೂಟ್ಯೂಬರ್‌ಗಳ ಹೆಸರನ್ನೂ ಬಾಯ್ಬಿಟ್ಟಿದ್ದಾನೆ.
ಪ್ರತಿಯೊಬ್ಬರಿಗೂ ಬುಲಾವ್ ಕೊಟ್ಟಿದ್ದು, ತನಿಖೆಯನ್ನು ತೀವ್ರಗೊಳಿಸಿದೆ....
ಧರ್ಮಸ್ಥಳ ಪ್ರಕರಣವನ್ನೇ ಅಸ್ತ್ರ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು, ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವುದು ಬಿಜೆಪಿಯವರು. ಬುರುಡೆ ಗಿರಾಕಿ ಯಾರು?. ಬಿಜೆಪಿ ಕಾರ್ಯಕರ್ತರಲ್ಲವೇ? ಧರ್ಮಸ್ಥಳಕ್ಕೆ ಅಪಮಾನ ಆಗಿದ್ದರೆ ಅದು ಬಿಜೆಪಿ ನಾಯಕರು ಹಾಗೂ ಅದರ ಸಂಘಟನೆಯವರಿಂದ ಮಾತ್ರ. ಹೀಗಂತ ಡಿಸಿಎಂ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.
ಬಿಜೆಪಿಯ ಎರಡು ಗುಂಪುಗಳ ನಡುವಿನ ತಿಕ್ಕಾಟಕ್ಕೆ, ಧರ್ಮಸ್ಥಳವನ್ನು...
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಗ್ಗೆ, ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದ್ದಾರೆ. ನಿನಗಾಗಿ ಪಶ್ಚಿಮದಲ್ಲಿ ಸೂರ್ಯ ಮೂಡುತ್ತಾನಾ? ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ ಅಂತಾ ಮಾರ್ಮಿಕ ಮಾತುಗಳನ್ನಾಡಿದ್ದಾರೆ.
ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಕುಟುಂಬದ ವಿರುದ್ಧ ಭಾರೀ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವೀರೇಂದ್ರ ಹೆಗ್ಗಡೆಯವ್ರು ಕೂಡ ಪ್ರತಿಕ್ರಿಯಿಸಿದ್ದು, ಆರೋಪ ನಿರಾಧಾರ ಅಂತಾ...
ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪ್ರತಿಭಟನಾಕಾರರ ಮೇಲೆ, ಲಾಠಿಚಾರ್ಜ್ ಮಾಡಲಾಗಿದೆ. ಸೆಪ್ಟೆಂಬರ್ 7ರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ, ಕಲ್ಲು ತೂರಾಟ ಮಾಡಲಾಗಿತ್ತು. ಇದ್ರಿಂದ ರೊಚ್ಚಿಗೆದ್ದ ಜನರು, ಪೇಟೆ ಬೀದಿ ಮಾರ್ಗವಾಗಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ರು.
ಸೋಮವಾರ ಬೆಳಗ್ಗೆಯೇ ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ರು. ಹಿಂದೂ ಸಂಘಟನೆಗಳ...
ಮಂಡ್ಯ ಜಿಲ್ಲೆ ಮದ್ದೂರಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಮದ್ದೂರಿನ ಚನ್ನೇಗೌಡ ಬಡಾವಣೆಯಲ್ಲಿ ಸೆಪ್ಟೆಂಬರ್ 7ರ ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ.
ಗಣೇಶನ ಮೆರವಣಿಗೆ ಮಸೀದಿ ಬಳಿ ಬಂದಾಗ ಯಾವುದೇ ಘೋಷಣೆ ಕೂಗಬಾರದು. ಮೈಕ್ ಹಾಕಬಾರದು ಎಂದು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಪೊಲೀಸರ ಸೂಚನೆಯಂತೆ ಮೈಕ್...
ಧರ್ಮಸ್ಥಳದ ವಿರುದ್ಧ ಕಳೆದ 1 ವರ್ಷದಿಂದ, ವ್ಯವಸ್ಥಿತ ಪಿತೂರಿ ನಡೆಸಲಾಗಿತ್ತಂತೆ. 2024ರ ಡಿಸೆಂಬರ್ 24ರಂದು ಕೊಡಗಿಗೆ ಟಿ.ಜಯಂತ್ ತಂಡ ಬಂದಿತ್ತಂತೆ. ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬುರುಡೆ ಗ್ಯಾಂಗ್ ಓಡಾಡಿದೆ. ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದು ಕಟ್ಟಲಾಗದೆ, ಸಮಸ್ಯೆಗೆ ಸಿಲುಕಿದ್ದ ಮಹಿಳೆಯರನ್ನು ಭೇಟಿಯಾಗಿ ಪ್ರತ್ಯೇಕ ಸಭೆ ನಡೆಸಲಾಗಿದೆ. ಆ ಮಹಿಳೆಯರನ್ನು ಬಳಸಿಕೊಂಡು ಧರ್ಮಸ್ಥಳ ಮತ್ತು...
ಧರ್ಮಸ್ಥಳ ಪ್ರಕರಣದಲ್ಲಿ ಪ್ರಾರಂಭದಿಂದಲೂ ಮೌನವಹಿಸಿದ್ದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಬಿಜೆಪಿ ನಿಯೋಗದ ಭೇಟಿ ಬಳಿಕ ಮೌನಮುರಿದಿದ್ರು. ಮೊದಲ ಬಾರಿಗೆ ಬಹಿರಂಗವಾಗಿ ತಮಗಾಗುತ್ತಿರುವ ಅಸಮಾಧಾನ, ನೋವುಗಳ ಬಗ್ಗೆ ಮಾತನಾಡಿದ್ರು. ತಮ್ಮ ಮತ್ತು ಕುಟುಂಬದವರ ಮೇಲಿನ ಆರೋಪಗಳೆಲ್ಲಾ ಆಧಾರ ರಹಿತ ಅಂತಾ ಹೇಳಿದ್ರು. ಈಗ ಮತ್ತೊಮ್ಮೆ, ಧರ್ಮಸ್ಥಳದಲ್ಲಿ ನಡೆದ ಧರ್ಮ ಜಾಗೃತಿ ಸಮಾವೇಶದಲ್ಲಿ, ವೀರೇಂದ್ರ ಹೆಗ್ಗಡೆಯವರು ಮನಬಿಚ್ಚಿ...
ಧರ್ಮಸ್ಥಳ ಪ್ರಕರಣದ ಬಗ್ಗೆ, ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಯಾಗ್ತಿದೆ. ಈ ವಿಚಾರ ಕೇಂದ್ರ ಸರ್ಕಾರದ ಅಂಗಳ ಮುಟ್ಟಿದ್ದು, ಎನ್‌ಐಎ ತನಿಖೆಗೆ ಆಗ್ರಹ ಹೆಚ್ಚಾಗ್ತಿದೆ. ರಾಜ್ಯದ ಸ್ವಾಮೀಜಿಗಳ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಾಗೂ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಗೆ ರಾಜ್ಯ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ...
ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು, ಹಣದ ಆಮಿಷ ನೀಡಲಾಗ್ತಿದೆ ಅನ್ನೋ ಆರೋಪ ಸಂಚಲನ ಸೃಷ್ಟಿಸಿದೆ. ಯೂಟ್ಯೂಬ್‌ನಲ್ಲಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದ ಆರೋಪದಡಿ, ಯೂಟ್ಯೂಬರ್ ಅಭಿಷೇಕ್‌ನನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಬೆನ್ನಲ್ಲೇ ಮಂಡ್ಯದ ಯೂಟ್ಯೂಬರ್ ಸುಮಂತ್ ಎಂಬಾತ ಎಂಟ್ರಿ ಕೊಟ್ಟಿದ್ದಾನೆ.
ಮಾಧ್ಯಮವೊಂದರ ಜೊತೆ...
ಹಾಸನ ಜಿಲ್ಲೆಯಲ್ಲಿ ಹೊಯ್ಸಳ ಉತ್ಸವದ ಕೂಗು ಜೋರಾಗಿದೆ. ವಿಶ್ವವಿಖ್ಯಾತ ಹಂಪಿ ಉತ್ಸವ , ಚಿತ್ರದುರ್ಗದಲ್ಲಿ ಕರುನಾಡ ಉತ್ಸವ ಸೇರಿದಂತೆ, ಹಲವು ಜಿಲ್ಲೆಗಳಲ್ಲಿ ಉತ್ಸವಗಳು ನಡೀತಿವೆ. ಆದರೆ, ಕಳೆದ 8 ವರ್ಷಗಳಿಂದ ಹೊಯ್ಸಳ ಉತ್ಸವ ಮಾಡದೇ, ಹಾಸನ ಜಿಲ್ಲಾಡಳಿತ, ಸರ್ಕಾರ ಬೇಲೂರಿನಲ್ಲಿ ನಿರ್ಲಕ್ಷ್ಯ ವಹಿಸಿದೆ.
ಶಿಲ್ಪಕಲೆಗಳ ತವರೂರು ಬೇಲೂರು, ಹಳೇಬೀಡು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಂಡ ಸಂಭ್ರಮದಲ್ಲಿಯಾದ್ರೂ, ಹೊಯ್ಸಳ...