ರಾಮನಗರ: ಭಾಷೆ, ಜಲ, ರಾಜ್ಯದ ಬಗ್ಗೆ ಅನ್ಯಾಯವಾದ ವೇಳೆ ಸಂಘಟನೆಗಳು ಬಂದ್ ಮಾಡುವುದು ಸಹಜ. ಹೀಗಾಗಿ ಅವರಿಗೆ ನಮ್ಮಿಂದ ಯಾವುದೇ ಧಕ್ಕೆ ಉಂಟಾಗುವುದಿಲ್ಲ.ಮಳೆ ಬರುವುದಕ್ಕೂ ಸರಕಾರಕ್ಕೂ ಸಂಬಂಧ ಇದೆಯಾ.?
ಇದು ನೈರ್ಸಗಿಕ ವಿಕೋಪ.ಕಳೆದ ವರ್ಷ 660 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೆವೆ. ಈಗ ರಾಜ್ಯದಲ್ಲಿ ಮಳೆ ಇಲ್ಲ. ಈ ಬಗ್ಗೆ ಮಾನಿಟರಿಂಗ್ ವಿಂಗ್ ಗೆ ಎಲ್ಲವು ಗೊತ್ತಿದೆ. ಸುಪ್ರೀಂ ಕೋರ್ಟ್ ಗೂ ಸಹ ನೀರು ಇಲ್ಲದಿರುವ ಬಗ್ಗೆ ಮಾಹಿತಿ ಇದ್ದರೂ, ಸ್ಟೇ ನೀಡಿಲ್ಲ. ಪ್ರಧಾನಿಗಳಿಗೆ ಮಾಹಿತಿ ಇದ್ದರೂ, ಮಧ್ಯ ಪ್ರವೇಶ ಮಾಡುತ್ತಿಲ್ಲ.
ನೀರಿಗಾಗಿ ಬೊಬ್ಬೊ ಹೊಡೆಯುತ್ತಿರುವ ಬಿಜೆಪಿ ನಾಯಕರು, ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಆ ಕೆಲಸ ಮಾಡದೇ ಸುಮ್ಮನೆ ಸರ್ಕಾರದ ವಿರುದ್ಧ ಆರೋಪ ಮಾಡ್ತಿದ್ದಾರೆ. ನಮ್ಮ ಸರ್ಕಾರ ರೈತರಿಗೆ ಮಾತ್ರವಲ್ಲದೇ ಯಾವುದೇ ವರ್ಗಕ್ಕೆ ಮೋಸ ಮಾಡಿಲ್ಲ. ಸುಳ್ಳು ಹೇಳುವುದು, ಮೋಸ ಮಾಡುವುದು ಬಿಜೆಪಿ ಕೆಲಸ. ನಾವು ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಿದ್ದೆವೆ.
ಬಿಜೆಪಿಗೆ ಮೋಸ ಮಾಡುವುದು ಅವರ ರಕ್ತದಲ್ಲಿಯೇ ಇದೆ. INDIA ಒಕ್ಕೂಟದ ಬಗ್ಗೆ ಮಾತನಾಡುವ ಮೊದಲು, ಅವರ ಎನ್ ಡಿಎ ಮೈತ್ರಿ ಕೂಟದಲ್ಲಿ ಅಣ್ಣ ಡಿಎಂಕೆ ಇದ್ದಾರೆ. ಅವರಿಗೆ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿತ್ತು. ಬಿಜೆಪಿ ನಾಯಕರಿಗೆ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ನೀಡಿದ್ದಾರೆ
ಬೆಂಗಳೂರು ಬಂದ್ ಗೆ ಬಿಎಂಟಿಸಿ ಬೆಂಬಲ ವಿಚಾರ.
ಬಿಎಂಟಿಸಿ, ಕೆಎಸ್ ಆರ್ ಟಿಸಿ ಯೂನಿಯನ್ ಗಳಿವೆ.ಅವರು ಬಂದ್ ಬಗ್ಗೆ ನಿರ್ಣಯ ಮಾಡ್ತಾರೆ. ಬಂದ್ ಗೆ ನಮ್ಮ ವಿರೋಧ ಇಲ್ಲ. ಆದರೆ ಎರಡು ದಿನ ಬಂದ್ ಮಾಡೋದ್ರಿಂದ ಜನರಿಗೆ ಸಮಸ್ಯೆ ಆಗಲಿದೆ.
3 ಡಿಸಿಎಂ ಹುದ್ದೆ ಬಗ್ಗೆ ಕಾಂಗ್ರೆಸ್ ನಲ್ಲಿ ಚರ್ಚೆ ವಿಚಾರ.
ಈ ಸಮಯದಲ್ಲಿ ಡಿಸಿಎಂ ಹುದ್ದೆ ಬಗ್ಗೆ ಚರ್ಚೆ ಅನಾವಶ್ಯಕ. ವೇಣುಗೋಪಾಲ್ ಅವರು ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅನಾವಶ್ಯಕ ಗೊಂದಲ ಸೃಷ್ಟಿಸುವುದು ಬೇಕಿಲ್ಲ. ಡಿಸಿಎಂ ಆಯ್ಕೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಯಾರೂ ಡಿಸಿಎಂ ವಿಚಾರವಾಗಿ ಮಾತನಾಡಬಾರದು ಎಂದು ಸ್ವಪಕ್ಷೀಯ ಸಚಿವರಿಗೆ ರಾಮಲಿಂಗಾರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
Gadag ; ಬರಪಿಡಿತ ಪ್ರದೇಶದಿಂದ ಕೈ ಬಿಟ್ಟ ಹಿನ್ನೆಲೆ ಮುಂಡರಗಿಯಲ್ಲಿ ಪ್ರತಿಭಟನೆ..!
Bhadra dam: ಭದ್ರಾ ಆಣೆಕಟ್ಟಿನಿಂದ ನೀರು ಬಿಡಲು ಮೀನಾಮೇಶ; ದಾವಣಗೆರೆ ರೈತರಿಂದ ಬಂದ್ ಗೆ ಕರೆ