Saturday, April 19, 2025

Latest Posts

ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್‌ಗೆ ಸಿಬಿಐ ಸಮನ್ಸ್

- Advertisement -

National Political News: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್‌ಗೆ ಸಮನ್ಸ್ ಜಾರಿ ಮಾಡಿದೆ. ಗುರುವಾರ ದೆಹಲಿಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದೆ.

2016ರಲ್ಲಿ ಹಮೀರ್‌ಪುರ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆಂದು ಆರೋಪಿಸಿ, ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣದ ವಿಚಾರಣೆ, ಗುರುವಾರದಂದು ದೆಹಲಿಯಲ್ಲಿ ನಡೆಯಲಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಅಖಿಲೇಶ್ ಯಾದವ್, ನಾವು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದು, ಇಂಡಿಯಾ ಮೈತ್ರಿ ಬಲಗೊಳ್ಳುತ್ತಿರುವ ಕಾರಣ, ಈ ರೀತಿ, ಸಮನ್ಸ್ ನೀಡಲಾಗಿದೆ. ಇದು ಬಿಜೆಪಿಯದ್ದೇ ಕೆಲಸ ಎಂದು ಆರೋಪಿಸಿದರು.

ಅಲ್ಲದೇ ಉತ್ತರಪ್ರದೇಶ ರಾಜ್ಯಸಭಾ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಬಿಜೆಪಿ 8, ಎಸ್‌ಪಿ 2 ಸ್ಥಾನಗಳನ್ನು ಗೆದ್ದುಕೊಂಡಿದೆ. ಎಸ್‌ಪಿಯ 7 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಹಾಗಾಗಿ ಬಿಜೆಪಿ ಗೆದ್ದಿದೆ. ನಮ್ಮ ನಾಯಕರನ್ನು ಸೆಳೆದು ಬಿಜೆಪಿ ಅಡ್ಡತದಾನ ಮಾಡಿಸಿಕೊಂಡಿದೆ ಎಂದು ಅಖಿಲ್ ಆರೋಪಿಸಿದ್ದಾರೆ.

ದೇಶದ್ರೋಹಿಗಳಿಗೆ ವಿಧಾನಸಭೆಯಲ್ಲಿ ಜಾಗ ಕೊಟ್ಟಿರುವುದು ಆತಂಕಕಾರಿ ಬೆಳವಣಿಗೆ: ಬಸವರಾಜ್ ಬೊಮ್ಮಾಯಿ

ರಾಜ್ಯದ ರಕ್ಷಣೆಗಾಗಿ ಕಾಂಗ್ರೆಸ್ಸಿಗರೇ ವಿಧಾನಸೌಧ ಬಿಟ್ಟು ತೊಲಗಿ: ಬಿಜೆಪಿ ನಾಯಕರ ಆಕ್ರೋಶ

ಪಾಕ್‌ ಪರ ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಿ -ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹ

- Advertisement -

Latest Posts

Don't Miss