Bengaluru News: ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಒಂದು ಕಡೆ ಅಕ್ರಮ ಬಾಂಗ್ಲಾ ವಲಸಿಗರ ಮನೆಗಳ ಮೇಲೆ ಎನ್ಐಎ(NIA) ದಾಳಿ ಮಾಡಿದ್ದರೆ, ಮತ್ತೊಂದೆಡೆ ರೌಡಿಶೀಟರ್ಗಳಿಗೆ (rowdy sheeters) ಸಿಸಿಬಿ (CCB) ಶಾಕ್ ಕೊಟ್ಟಿದೆ. ಬೆಂಗಳೂರು ನಗರದ 20ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆ ಮೇಲೆ ಏಕಕಾಲಕ್ಕೆ ಸಿಸಿಬಿ ದಾಳಿ ಮಾಡಿದೆ. ವಾರೆಂಟ್ ಜಾರಿ ಮಾಡಿದ್ದರೂ ಸಹ ರೌಡಿ ಶೀಟರ್ಗಳು ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡು ಓಡಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸಿಸಿಬಿ ರೌಡಿ ಶೀಟರ್ಗಳ ಮೇಲೆ ದಾಳಿ ಮಾಡಿದ್ದು, ಮನೆಯಲ್ಲಿ ಲಾಂಗ್ ,ಮಚ್ಚು,ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸುತ್ತಿದ್ದಾರೆ.
ರೌಡಿಶೀಟರ್ ರಮೇಶ್ ಅಲಿಯಾಸ್ ,ಜಗದೀಶ್ ಅಲಿಯಾಸ್ ಟಾಮಿ ಸೇರಿದಂತೆ ನಗರದಾದ್ಯಂತ ಇರುವ 20ಕ್ಕೂ ಹೆಚ್ಚು ನಟೋರಿಯಸ್ ರೌಡಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೇಟ್ ಮೇಲೆಯೇ ಬಟ್ಟೆ ಒಣ ಹಾಕಿದ ಮಹಿಳೆ, ಫೋಟೋ ವೈರಲ್
ಅನುಮಾನಕ್ಕೆ ಬಾಣಂತಿ ಪತ್ನಿಯನ್ನೇ ಕೊಂದ ಪತಿ: ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪೊಲೀಸಪ್ಪ
ಹಾಸನಾಂಬೆಯ ದರ್ಶನ ಪಡೆದ ಸಿಎಂ: ಹೆಚ್ಡಿಕೆ, ಯತ್ನಾಳ್ ವಿರುದ್ಧ ವಾಗ್ದಾಳಿ