ಇಂದಿನ ಕಾಲದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೊಬೈಲ್ ಬಳಕೆ ಮಾಡುತ್ತಾರೆ. ಜಾಲತಾಣಗಳಲ್ಲಿ ಒಳ್ಳೆಯದ್ದು ಇರುತ್ತದೆ ಕೆಟ್ಟದ್ದೂ ಇರುತ್ತದೆ. ಅದರಲ್ಲೂ ಅಶ್ಲೀಲ ಫೋಟೋಗಳು ಕೂಡ ಇರುತ್ತದೆ. ಇದು ಇಂದಿನ ಯುವಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದ್ದರಿಂದ ಜಾಲತಾಣದಲ್ಲಿರುವ ಇಂಥ ಕೊಳಕನ್ನ ತೆಗೆದು ಹಾಕಿ, ಕ್ಲೀನ್ ಮಾಡುವ ನಿರ್ಧಾರ ಮಾಡಿದ್ದಾರೆ.

ಯಾವುದಾದರೂ ನಗ್ನ ಫೋಟೋ, ತಿರುಚಿದ ಫೋಟೋಗಳಿದ್ದರೆ, ಅದನ್ನು ಸಾಮಾಜಿಕ ಜಾಲತಾಣದಿಂದ 36 ಗಂಟೆಯೊಳಗೆ ತೆಗೆದು ಹಾಕಲಾಗುತ್ತದೆ ಎಂದು ಕೇಂದ್ರ ಸಚಿವ, ರವಿಶಂಕರ್ ಪ್ರಸಾದ ನಿರ್ಧಾರ ಮಾಡಿದ್ದಾರೆ. ಸಾಮಾಜಿಕ ಜಾಲತಾಣವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ ನಮಗೇನು ತೊಂದರೆ ಇಲ್ಲ. ಆದ್ರೆ ಅದನ್ನ ದುರುಪಯೋಗಪಡಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಅಲ್ಲದೇ, ಚುನಾವಣೆ ಸಮಯದಲ್ಲಿ ಸುಳ್ಳು ಸುದ್ದಿ ಹರಡುವುದು ಮಾಮೂಲು. ಆದ್ರೆ ಇದೀಗ ಅಂಥ ಸುದ್ದಿಗಳಿಗೂ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೆಲವು ವೆಬ್‌ಸೈಟ್, ಯ್ಯೂಟ್ಯೂಬ್ ಅವರು ಸುಳ್ಳು ಸುಳ್ಳು ಸುದ್ದಿಯನ್ನು ಹರಡಿಸುತ್ತದೆ. ಅಂಥ ವೆಬ್‌ಸೈಟ್, ಯ್ಯೂಟ್ಯೂಬ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
