- Advertisement -
www.karnatakatv.net: ರಾಷ್ಟ್ರೀಯ- ದೆಹಲಿ- ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರದಿಂದ ನಿಂತು ಹೋಗಿದ್ದ ಅಲಾವೆನ್ಸ್ ನೀಡಲು ಸರ್ಕಾರ ಮುಂದಾಗಿದೆ. ಹೀಗಾಗಿ, ಒಂದು ಕೋಟಿಗೂ ಅಧಿಕ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಡಬಲ್ ಲಾಭ ಸಿಗುವಂತಾಗಿದೆ. ಕಳೆದ ವರ್ಷ ಫ್ರೀಜ್ ಮಾಡಿದ್ದ ಡಿಎ ಜುಲೈನಿಂದ ಮತ್ತೆ ಆರಂಭಗೊಳ್ಳಲಿದೆ. ಆದ್ರೆ, ಅದರ ಹಣ ನೌಕರರಿಗೆ ಜುಲೈ ತಿಂಗಳಿನಲ್ಲಿ ಸಿಗುವುದಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ಅವರ ಖಾತೆ ಸೇರಲಿದೆ ಎಂದು ಅಧಿಸೂಚನೆ ಹೊರಡಿಸಿದೆ. ನ್ಯಾಷನಲ್ ಆಫ್ ಜೆಸಿಎಂ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರ ಕಚೇರಿ ವತಿಯಿಂದ ನೀಡಲಾಗಿದೆ. ಜೂನ್ 20, 2021ರಂದು ಕ್ಯಾಬಿನೆಟ್ ಕಾರ್ಯದರ್ಶಿಯೊಂದಿಗೆ ನಡೆದ ಸಭೆ ಬಹಳ ಸಕಾರಾತ್ಮಕವಾಗಿತ್ತು. ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಹಿತದೃಷ್ಠಿಯಿಂದ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
- Advertisement -