ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಮಾತೃವಂದನಾ ಯೋಜನೆ, ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸಬಲರಾಗಬೇಕು ಎಂದು ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ಅವರು ತಿಳಿಸಿದರು.
ಅವರು ಇಂದು ಮದ್ದೂರಿನ ತಾಲ್ಲೂಕಿನ ಸರ್ಕಾರಿ ಕ್ರೀಡಾಂಗಣದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಹಿಳಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಮೊದಲು ವ್ಯಕ್ತಿಗಳ ಹೆಸರಿನಲ್ಲಿ ಯೋಜನೆಗಳು ಪ್ರಾರಂಭವಾಗುತ್ತಿತು. ಇಂದು ಪ್ರಧಾನ ಮಂತ್ರಿಯ ಹೆಸರಿನಲ್ಲಿ ಯೋಜನೆ ಪ್ರಾರಂಭವಾಗುತ್ತಿದೆ ಎಂದರು.
ಶಿವಪುರ ಸತ್ಯಾಗ್ರಹ ಸೌಧದಲ್ಲಿ ಮೊಳಗಿದ ಕೋಟಿ ಕಂಠ ಗಾಯನ..
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಬಾರಿ ಗರ್ಭಿಣಿ ಯಾಗುವ ಮಹಿಳೆಯರಿಗೆ ಪೌಷ್ಠಿಕ ಆಹಾರ ಒದಗಿಸಲು ಮೂರು ಕಂತುಗಳಲ್ಲಿ 5000/- ರೂ ಸಹಾಯಧನ ನೀಡಲಾಗುತ್ತಿತ್ತು, ಈ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು ಎರಡನೇ ಬಾರಿ ಗರ್ಭಿಣಿಯಾಗುವ ಮಹಿಳೆಗೂ ಮಾತೃ ವಂದನಾ ಯೋಜನೆಯನ್ನು ವಿಸ್ತರಿಸಲು ಅಧಿಸೂಚನೆ ಹೊರಡಿಸಲಿದ್ದಾರೆ ಎಂದರು.
ಕರೋನಾ ಸಂದರ್ಭದಲ್ಲಿ ದೇಶದ 80 ಕೋಟಿ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಪ್ರತಿ ಮಾಹೆ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತವಾಗಿ 5 ಕೆ.ಜಿ ಅಕ್ಕಿ/ ಇತರೆ ಧಾನ್ಯ ನೀಡಲಾಗಿದೆ. ದೇಶದ ಜನರಿಗೆ ಉಚಿವಾಗಿ ಕೋವಿಡ್ ಲಸಿಕೆ ನೀಡಲಾಗಿದೆ ಎಂದರು.
ಮನರೇಗಾ ಯೋಜನೆಯಡಿ ಕೆಲಸ, ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ, ಆಯುಷ್ಮಾನ ಯೋಜನೆಯಡಿ ಬಿ.ಪಿ.ಎಲ್ ಕಾರ್ಡ್ ದಾರರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ಜಲ ಜೀವನ್ ಯೋಜನೆಯಡಿ ಮನೆಗಳಿಗೆ ನೆಲ್ಲಿ ವ್ಯವಸ್ಥೆ ಹಾಗೂ ನೀರು ನೀಡಲಾಗಿದೆ ಎಂದರು.
ಮದ್ದೂರಿನಲ್ಲಿ ಜಯಭೇರಿ ಬಾರಿಸಲೇಬೇಕೆಂದು ಪಣತೊಟ್ಟ ಬಿಜೆಪಿ: ಕ್ಷೇತ್ರಕ್ಕೆ ಕೇಂದ್ರ ಸಚಿವರ ಭೇಟಿ..
ಫಲಾನುಭವಿಗಳೊಂದಿಗೆ ಸಂವಾದ
ಒಂದು ದೇಶ ಒಂದು ಪಡಿತರ ಯೋಜನೆಯ ಫಲಾನುಭವಿಯಾದ ಬೆಸಗರಹಳ್ಳಿ ಸಯ್ಯದ್ ಲುಕ್ಮನ್ ಅವರು ತಾವು ಕೇರಳದಿಂದ ಕೆಲಸಕ್ಕಾಗಿ ಮದ್ದೂರಿಗೆ ಬಂದಿದ್ದು, ಕೇರಳದಲ್ಲಿ ಪಡೆದ ಪಡಿತರ ಚೀಟಿಯ ಸಹಾಯದಿಂದ ಮಂಡ್ಯ ಜಿಲ್ಲೆಯಲ್ಲಿ ಪಡಿತರ ಆಹಾರ ಪಡೆಯುತ್ತಿದ್ದೇನೆ. ಈ ಯೋಜನೆಯಿಂದ ಬೇರೆ ಬೇರೆ ಸ್ಥಳಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಟಾಂಡ್ ಅಪ್ ಇಂಡಿಯಾ ಯೋಜನೆಯಡಿ ಚಂದ್ರಕಲಾ ಎಂಬುವವರು ಕ್ರಷರ್ ಕೆಲಸಕ್ಕಾಗಿ 45 ಲಕ್ಷ ರೂ ಸಾಲ ಪಡೆದಿದ್ದು, 20 ಜನರಿಗೆ ಕೆಲಸ ನೀಡುವುದರೊಂದಿಗೆ ಪ್ರತಿ ಮಾಹೆ 5 ಲಕ್ಷ ಲಾಭಗಳಿಸುತ್ತಿರುವುದಾಗಿ ತಿಳಿಸಿದರು.
ಅಕ್ಷತಾ ಎಂಬ ವಿದ್ಯಾರ್ಥಿನಿಗೆ ಹೃದಯದಲ್ಲಿ ಸಮಸ್ಯೆ ಕಂಡು ಬಂದಿದ್ದು.ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಕೊಂಡಿದ್ದೇನೆ. ಈ ಹಿನ್ನಲೆ ಸರ್ಕಾರಕ್ಕೆ ಧನ್ಯವಾದವನ್ನು ತಿಳಿಸುತ್ತನೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಶಿವಪುರದ ಮಮತಾ , ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಚಾಮನಹಳ್ಳಿ ಪಲ್ಲವಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಹದೇವಮ್ಮ, ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆಯಡಿ ಪ್ರಮೀಳಾ (ಟೈಲರ್), ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ವಿದ್ಯಾಶ್ರೀ, ಜಲ್ ಜೀವನ್ ಮಿಷನ್ ಯೋಜನೆಯಡಿ ಸಿಂಧು ಶ್ರೀ, ಸೇರಿದಂತೆ ಇನ್ನಿತರ ಯೋಜನೆಗಳನ್ನು ಕುರಿತಂತೆ ಫಲಾನುಭವಿಗಳು ಸಚಿವರೊಂದಿಗೆ ಸಂವಾದ ನಡೆಸಿದರು.
ಬಳಸಿದ ಎಣ್ಣೆಯನ್ನು ಮತ್ತೆ ಬಳಸಿದರೆ ಜೀವಕ್ಕೆ ಅಪಾಯ…?
ಚೆಕ್ ವಿತರಣೆ
ಸ್ಟಾಂಡ್ ಆಫ್ ಇಂಡಿಯಾ ಯೋಜನೆಯಿಂದ ಸಾಲಕ್ಕಾಗಿ ಚಂದ್ರಕಲಾ ಎಂಬುವವರಿಗೆ 45 ಲಕ್ಷ, ಶೋಭ ಮತ್ತು ಸ್ವರ್ಣಗೌರಿ ರವರಿಗೆ ತಲಾ 10 ಲಕ್ಷ ಚೆಕ್ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಯಾಡಿ ಕುಮಾರ್ ಮತ್ತು ಸಂದೀಪ್ ರವರಿಗೆ ತಲಾ 2 ಲಕ್ಷದ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್,ಮಾಜಿ ಸಚಿವ ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಹೆಚ್.ಎನ್. ಗೋಪಾಲ ಕೃಷ್ಣ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಎಲ್. ಹುಲ್ಮನಿ, ಉಪ ವಿಭಾಗಾಧಿಕಾರಿ ಆರ್.ಐಶ್ವರ್ಯ, ತಹಶೀಲ್ದಾರ್ ನರಸಿಂಹಮೂರ್ತಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರ ಕೃಷ್ಣ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

