Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಾವು ಕೇಂದ್ರದಿಂದ ಈಗಾಗಲೇ ದೇಶಾದ್ಯಂತ ಐದು ಕೆಜಿ ಅಕ್ಕಿ ಕೊಡ್ತಾ ಇದ್ದೀವಿ. ನಮ್ಮದು ಬಿಟ್ಟು ಸಿಎಂ ಹತ್ತು ಕೆಜಿ ಅಕ್ಕಿ ಕೊಡ್ತಾರಾ ಮೊದಲು ಸ್ಪಷ್ಟಪಡಿಸಲಿ.
ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳನ್ನು ಸೇರಿಸಿ ಎಲ್ಲರಿಗೂ ಒಂದೇ ಕಾನೂನು ಇದೆ. ಬಫರ್ ಸ್ಟಾಕ್‌ನ್ನು ನಾವು ಇಟ್ಟುಕೊಳ್ಳಬೇಕಾಗುತ್ತೆ. ಕೇಂದ್ರದ ಅಕ್ಕಿ ಬೇಕಿದ್ರೆ ನಮ್ಮನ್ನು ಕೇಳಿಯೇ ಘೋಷಣೆ ಮಾಡ್ಬೇಕು. ಕೇಂದ್ರದಿಂದ ನಮಗೆ ಸಾಧ್ಯವಿರುವ ಎಲ್ಲಾ ಸಹಕಾರ ಕೊಡುತ್ತೇವೆ. ಟೆಂಡರ್ ಕರೆದು ಕೇಂದ್ರ ಸರ್ಕಾರ ಅಕ್ಕಿ ಖರೀದಿ ಮಾಡುತ್ತೆ. ನೀವೂ ಅಕ್ಕಿ ಖರೀದಿಸಿ ಜನರಿಗೆ ವಿತರಿಸಿ, ನಮ್ಮದೇನು ಅಭ್ಯಂತರವಿಲ್ಲ ಎಂದು ಜೋಶಿ ಹೇಳಿದ್ದಾರೆ.
ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿ ಜನರಿಗೆ ತೊಂದರೆ ಕೊಡುತ್ತಿದೆ. ಇಂಡಸ್ಟ್ರಿಗಳನ್ನು ಓಡಿಸುತ್ತಿದ್ದೀರಿ, ವ್ಯವಹಾರ ಮಾಡಲು ಬಿಡುತ್ತಿಲ್ಲ. ಕೈಗಾರಿಕೆಗಳ ಮೇಲೆ ಯಾಕೆ ಭಾರ ಹಾಕಿದ್ದೀರಿ? ಜನರಿಗೆ ಭಾಗ್ಯಗಳ ಹೆಸರಲ್ಲಿ ಮೋಸ ಮಾಡಿ ಕಂಡೀಷನ್ ಹಾಕುತ್ತಿದ್ದಾರೆ. ನಾವು ಕಾಂಗ್ರೆಸ್‌ಗೆ ಅಚ್ಛೆ ದಿನ್ ಬರುತ್ತೆ ಅಂತಾ ಹೇಳಿಲ್ಲ. ಇಡೀ ದೇಶಕ್ಕೆ ಅಚ್ಛೇ ದಿನ್ ಬರುತ್ತೆ ಅಂತಾ ಹೇಳಿದ್ವಿ. ದೇಶದಲ್ಲಿ ಆಹಾರ ಭದ್ರತೆ ಇದೆ, ಹಣದುಬ್ಬರ ಕಡಿಮೆಯಾಗಿದೆ. ಕೊವಿಡ್, ರಷ್ಯಾ- ಉಕ್ರೇನ್ ಯುದ್ಧದ ನಡುವೆಯೂ ದೇಶ ಆರ್ಥಿಕವಾಗಿ ಸುಸ್ಥಿರವಾಗಿದೆ. ಇಡೀ ದೇಶದಲ್ಲಿ ಮೋದಿಯವರ ಬಗ್ಗೆ ಗೌರವವಿದೆ. ಸಿದ್ಧರಾಮಯ್ಯ ಸುಳ್ಳು ಭಾಷಣ ಮಾಡುವುದರಿಂದ ಏನೂ ಆಗಲ್ಲಾ ಎಂದು ಜೋಶಿ ಹೇಳಿದ್ದಾರೆ.
‘ಬಿಜೆಪಿಯಲ್ಲಿ ಶಿಸ್ತು ಹೋಗಿದೆ. ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ’
‘ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ’
ಬಿಜೆಪಿಯ ಅಡಿಪಾಯವೇ ಡಿಸ್ಟರ್ಬ್ ಆಗಿ ಕುಸಿದು ಹೋಗುತ್ತಿದೆ: ಜಗದೀಶ್ ಶೆಟ್ಟರ್