Sunday, April 13, 2025

Latest Posts

‘ನಿವೃತ್ತ ನ್ಯಾಯಮೂರ್ತಿಗಳ ದಿನ ಬೆಳಗಿನ ಕೆಲಸ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಬಯ್ಯೋದು’

- Advertisement -

Hubballi News: ಹುಬ್ಬಳ್ಳಿ:  ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನ ಮಂತ್ರಿಗಳು ಬಂದಾಗ ಪ್ರೊಟೋಕಾಲ್ ಪಾಲಿಸಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಿದ್ದಾರೆ. ಅವರು ಆಕಸ್ಮಿಕವಾಗಿ ದೂರದಿಂದ ಬರೋದ್ರಿಂದ ಭಾಷಣದಲ್ಲೇ ಹೇಳಿದ್ದಾರೆ. ಅದು ವಿವಾದದ ಪ್ರಶ್ನೆ ಅಲ್ಲಾ, ಎಲ್ಲದರಲ್ಲೂ ನಾನು ವಿವಾದ ಮಾಡಲು ಬಯಸೋದಿಲ್ಲ. ಅದು ನನ್ನ ಸ್ವಭಾವನೂ ಅಲ್ಲಾ ಎಂದು ಸ್ಪಷ್ಟನೆ ನೀಡಿದ್ದಾರೆ.

ಚಂದ್ರಯಾನದ ಯಶಸ್ಸು ದೇಶದ ಯುವಜನರ ಉತ್ಸಾಹ ಇಮ್ಮಡಿಗೊಳಿಸಿದೆ. 2047 ಕ್ಕೆ ಸ್ವತಂತ್ರ ಬಂದು ನೂರು ವರ್ಷ ಆಗುವ ಸಂದರ್ಭ. ಭಾರತ ವಿಕಾಸಿತ ದೇಶ ಆಗುತ್ತೆ, ಈಗ ಅಭಿವೃದ್ಧಿ ಹೊಂದುತ್ತಿರುವ ದೇಶ. ದಕ್ಷಿಣ ದ್ರುವದಲ್ಲಿ ಮೊದಲ ಬಾರಿಗೆ ಲ್ಯಾಂಡ್ ಆಗಿದ್ದು. ಜಗತ್ತಿನಲ್ಲೇ ಹಿರಿಮೆ ಜಾಸ್ತಿ ಮಾಡಿದೆ. 350ಕ್ಕೂ ಹೆಚ್ಚು ಉಪಗ್ರಹಗಳು ಲಾಂಚ್ ಆಗಿವೆ. ನಾವು 5ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದ್ದೇವೆ. ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಪಾರ್ಟಿ ಭ್ರಷ್ಟಾಚಾರದ ರಕ್ತ ಬೀಜಾಸುರರಿದ್ದಂತೆ. ಬಿಜೆಪಿಯ ಎಲ್ಲಾ ಹಗರಣಗಳನ್ನು ತನಿಖೆ ಮಾಡಿಸುವುದಾದರೆ, ಮಾಡಿಸಲಿ.  ನೇರವಾಗಿ ಎಫ್ಐಆರ್ ಮಾಡ್ಲಿ ಏನೂ ತಕಾರಾರಿಲ್ಲ. ಆಯೋಗದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿಗಳಿದ್ದಾರೆ. ಅವರ ದಿನ ಬೆಳಗಿನ ಕೆಲಸ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಬಯ್ಯೋದು. ಬೇಕಂತಲೇ ಬಿಜೆಪಿ ವಿರೋಧಿ ನಿವೃತ್ತ ನ್ಯಾಯಾಧೀಶರನ್ನು ಇಟ್ಟು ಬಿಜೆಪಿಗೆ ಬೈಯಿಸುವ ಕೆಲಸ‌ಮಾಡುತ್ತಿದ್ದಾರೆ. ಅವರಿಂದ ದಿನ ನಮ್ಮನ್ನ ಬೈಸುವ ಕೆಲಸ ಮಾಡ್ತಿದಾರೆ ಜನ ಇದನ್ನ ನೋಡ್ತಾ ಇದ್ದಾರೆ.

ಕಾಂಗ್ರೆಸ್ ಪಾರ್ಟಿ ಭ್ರಷ್ಟಾಚಾರದ ರಕ್ತ ಬಿಜಾಸುರರಿದ್ದಂತೆ. ಇಡೀ ದೇಶದಲ್ಲಿ ನೆಹರು ಕಾಲದಿಂದ ಹಿಡಿದು ಭ್ರಷ್ಟಾಚಾರ ಮಾಡಿದಂತವರು ಕಾಂಗ್ರೆಸ್ ನವರು. ಈಗ ನಾವು ಹೇಳ್ತಿಲ್ಲ ನಿಮ್ಮ ಪಕ್ಷದ ಶಾಸಕರೇ ಹೇಳ್ತಾ ಇದ್ದಾರೆ. ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ ಅಂತ ಅವರು ಹೇಳಿದ್ದಾರೆ. ರಾಯರೆಡ್ಡಿ ಅವರು ಭ್ರಷ್ಟಾಚಾರ ಬಹಳ ಆಗಿದೆ ಅಂತ ಹೇಳಿದ್ದಾರೆ. ಇದನ್ನೆಲ್ಲಾ ಮೊದಲು ನೋಡ್ಕೊಳಿ ಎಂದು ಕಾಂಗ್ರೆಸ್ಸಿಗರ ಜೋಶಿ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಗೆ ಇನ್ನೊಂದು ಹೆಸರೇ ಭ್ರಷ್ಟಾಚಾರ. ಕಾಂಗ್ರೆಸ್ ಅವರು ಯಾಕೆ UPA ಚೇಂಜ್ ಮಾಡಿದ್ದಾರೆ ಅಂತ ಲೆಕ್ಕ ಹಾಕ್ತಾ ಇದ್ವಿ. ಅಂಗಡಿ, ಫ್ಯಾಕ್ಟರಿಗಳಲ್ಲಿ ಪ್ರೊಡಕ್ಟ್ ಅದೇ ಇರುತ್ತೆ ಹೆಸರು ಬದಲಾಯಿಸುತ್ತಾರೆ ಆ ರೀತಿ ಆಗಿದೆ. ಅಮಿತ್ ಶಾ ಅವರು ಭಾಷಣದಲ್ಲೂ ಹೇಳಿದ್ದಾರೆ. UPA ಕಾಲದಲ್ಲಿ 12 ಲಕ್ಷ ಕೋಟಿ ಭ್ರಷ್ಟಾಚಾರ ಆಗಿದೆ ಅಂತ. UPA ಅಂದ್ರೆ ಜನ ಛೀ ಥೂ ಅಂತ ಉಗಿತಾರೆ ಅಂತ ಹೆಸರು ಚೇಂಜ್ ಮಾಡಿದ್ರು. ನಿಮ್ಮ ಕಾಲದಲ್ಲಿ ಬೇರೆ ದೇಶದಿಂದ ವೀಸಾ ತಗೊಂಡು ಒಳಗೆ ಬರಬೇಕು ಅಂದ್ರೆ, ಕೌನ್ಸಿಲೆಟ್ ನಲ್ಲಿ ಕೂಡ ದುಡ್ಡು ತಗೋತಾರೆ ಅಂತ ಆರೋಪ ಇತ್ತು. ಇಂತ ಭ್ರಷ್ಟಾಚಾರ ನಡೆಸಿದ ನೀವು ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮಾತಾಡ್ತೀರಾ ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೇಲ್ ಮೇಲಿದ್ದಾರೆ . ಇವತ್ತು ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ವೆಂಜೇನ್ ಫುಲ್ ಆಕ್ತಿವಿಟಿ ಆದ್ರೂ ಸಹಿತ. ತನಿಖೆ ಮಾಡಲು ನಮ್ಮ ಅಭ್ಯಂತರ ಇಲ್ಲಾ. ನಿತ್ಯವೂ ಬಿಜೆಪಿಗೆ ಬೈಯುವ ನಿವೃತ್ತ ನ್ಯಾಯಧೀಶರು . ಇದನ್ನ ನೋಡಿದ್ರೆ ಅವರ ಒಂದು ನಿಯತ್ತು ಗೊತ್ತಾಗುತ್ತೆ ಎಂದು ಜೋಶಿ ಕಿಡಿಕಾರಿದ್ದಾರೆ.

‘ಪಾರದರ್ಶಕ ಆಡಳಿತ ಕೊಡ್ತೇವೆ ಅಂತ ವಾಗ್ದಾನ ಮಾಡಿದ್ದೇವೆ. ಅದರ ಪ್ರಕಾರ ನಾವು ನಡೆದುಕೊಳ್ತೇವೆ’

ನೆಹರುರನ್ನು ಬೈಯೋದಕ್ಕೆ ನಿಮಗೆ ಅರ್ಹತೆ ಇದೆಯಾ?: ಬಿಜೆಪಿಗೆ ಸಂತೋಷ್ ಲಾಡ್ ಪ್ರಶ್ನೆ..

‘ಕಾಂಗ್ರೆಸ್ ಯೋಜನೆಯಲ್ಲಿ 1% ಕೂಡ ಭ್ರಷ್ಟಾಚಾರ ನಡೆಯಲು ಚಾನ್ಸ್ ಇಲ್ಲಾ’

- Advertisement -

Latest Posts

Don't Miss