Dharwad News: ಧಾರವಾಡ: ಧಾರವಾಡದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕ್ಕೊಳ್ಳಬೇಕು. ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುತ್ತಾರೆ. ಭಾರತ ಸರಕಾರ ಐದು ಕೆಜಿ ಅಕ್ಕಿಯನ್ನ ಕೊಡ್ತಾ ಇದೆ. 80 ಕೋಟಿ ಜನರಿಗೆ ಐದು ಕೇಜಿ ಅಕ್ಕಿ ಕೊಡ್ತಾ ಇದೆವಿ. ಸಿದ್ದರಾಮಯ್ಯ ಅವರಿಗೆ ಕೇಂದ್ರದಿಂದ ಐದು ಕೆಜಿ ಅಕ್ಕಿ ಬರುತ್ತೆ ಅಂತ ಹೇಳುವಷ್ಟು ವ್ಯವಧಾನ್ಯವಿಲ್ಲ. ದೇಶಕ್ಕೆ ಅಕ್ಕಿ ನಾವು ಕೊಡುತ್ತಿದ್ದೇವೆ. ಇನ್ನು 60 ಕೋಟಿ ಜನರು ಇದಾರೆ ಅವರಿಗೂ ಫ್ರೀಯಾಗಿ ಅಕ್ಕಿ ಕೊಡಬೇಕು. ನಾವು ಮಾರುಕಟ್ಟೆ ಮೂಲಕ ರಿಜನೆಬಲ್ ದರದಲ್ಲಿ ಸಿಗುವ ಪಾಲಿಸಿಯನ್ನ ಮಾಡಿದ್ದೇವೆ. ಇದು ಬಿಜೆಪಿ ಆಡಳಿತ ಇರುವ ರಾಜ್ಯಕ್ಕೂ ಅನ್ವಯವಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ದಾಟಿಯಲ್ಲೇ ಪ್ರಹ್ಲಾದ್ ಜೋಶಿ ಮಿಮಿಕ್ರಿ ಮಾಡಿದ್ದು, ಮಹಾದೇವಪ್ಪ ನಿನಗೂ ಪ್ರಿ….ಕಾಕಾ ಸಾಹೇಬ್ ನಿನಗೂ ಪ್ರಿ ಅಂತ ಹೇಳಿದ್ರಿ…ಹೇಳುವಾಗ ನಿಮಗೆ ಗೊತ್ತಾಗಲಿಲ್ಲವಾ..? ಕೇಂದ್ರ ಸರಕಾರ ಕೊಟ್ರೆ ಕೊಡುತ್ತೆವೆ ಅಂತ ಹೇಳಬೇಕಿತ್ತು.ರಾಜ್ಯ ಸರಕಾರ ಪ್ರತಿಭಟನೆ ಮಾಡಿ ಡೋಂಗಿತನ ಪ್ರದರ್ಶನ ಮಾಡುತ್ತಿದೆ. ಎಲ್ಲ ರಾಜ್ಯಗಳಿಗೆ ಅನುದಾನವನ್ನ ಸಮಾನ ರೀತಿಯಲ್ಲಿ ಕೇಂದ್ರ ಸರಕಾರ ಕೊಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇನ್ನು ಸತೀಶ್ ಜಾರಕಿಹೋಳಿ ಹೇಳಿಕೆಗೂ ಜೋಶಿ, ಟಾಂಗ್ ಕೊಟ್ಟಿದ್ದು, ರಾಜ್ಯ ಸರಕಾರದ ಸರ್ವರ್‌ಗಳನ್ನ ಕೇಂದ್ರ ಬಿಜೆಪಿ ಸರಕಾರ ಹ್ಯಾಕ್ ಮಾಡುತ್ತಿದೆ ಎಂಬುದು ಹಾಸ್ಯಾಸ್ಪದ ಹೇಳಿಕೆ. ನೀವು ಮಂತ್ರಿಯಾಗಿದ್ದವರು, ಮುಂದಿನ ದಿನಗಳಲ್ಲಿ ಸಿಎಂ ಅಂತೀರಿ. ಗಂಭೀರವಾಗಿರಿ. ರಾಜ್ಯದ ಮರ್ಯಾದೆ ತೆಗಿಬೇಡಿ ಎಂದು ಜೋಶಿ ಹೇಳಿದ್ದಾರೆ.
ಹ್ಯಾಕ್ ಮಾಡಿದ್ರೆ ದೂರು ದಾಖಲಿಸಿ. ಸೈಬರ್‌ಕ್ರೈಂ ಇದೆ, ಕೆಲವು ಯೋಜನೆಗಳನ್ನ ಕೊಡಲಿಕ್ಕೆ ಆಗ್ತಾ ಇಲ್ಲ. ಅದಕ್ಕೆ ಡಿಲೆ ಮಾಡಲಿಕ್ಕೆ ವ್ಯವಸ್ಥಿತ ಹುನ್ನಾರ ಇದು. ಇವರು ಹೀಗೆ ಕಂಡಿಶನ್ ಹಾಕೋ ಸಲುವಾಗಿ ಅವರು ಡಿಲೆ ಮಾಡುತ್ತಿದ್ದಾರೆ. ಇಂದಿರಾ ಗಾಂದಿ ಗರೀಭಿ ಹಠಾವೋ 1970 ರಲ್ಲಿ ಹೇಳಿದ್ರು. ಸತ್ಯದ ಮುಖದ ಮೆಲೆ ಹೊಡದೊಂಗೆ ಸುಳ್ಳು ಹೇಳುತ್ತಿದೆ ಕಾಂಗ್ರೆಸ್. ಜನರು ಅವರಿಗೆ ತಕ್ಕ ಪಾಠವನ್ನ ಕಲಿಸುತ್ತಾರೆ. ಕುಣಿಲಿಕ್ಕೆ ಆಗದವರು ನೆಲಡೊಂಕು ಅಂತ ಹೇಳ್ತಾರೆ. ಕೈಲೆ ಆಗದವನು ಮೈಯೆಲ್ಲ ಪರಚಿಕ್ಕೊಂಡವನು ಎಂದು ಸಿದ್ದರಾಮಯ್ಯ ಅವರಿಗೆ ಅನ್ವಯಿಸುತ್ತಿದೆ ನಾವು ಅವರಿಗೂ ಸ್ವಲ್ಪ ಸಮಯ ಕೊಡುತ್ತೇವೆ. ಜನರಿಗೆ ವಂಚನೆ ಮಾಡಿದ್ದೀರಿ. ನಾವು ಮುಂದಿನ ದಿನಗಳಲ್ಲಿ ಹೋರಾಟವನ್ನ ಮಾಡುತ್ತೇವೆ. ಜನರಿಗೆ ಕೊಟ್ಡ ಭರವಸೆಯನ್ನ ಈಡೇರಿಸದಿದ್ದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದು ಜೋಶಿ ಹೇಳಿದ್ದಾರೆ.
ಬಸ್‌ನಲ್ಲಿ ಸೀಟ್‌ಗಾಗಿ ಕಿತ್ತಾಡಿದ ಮಹಿಳೆಯರು: ಜಡೆ ಜಗಳಕ್ಕೆ ಸರ್ಕಾರದ ಬಳಿ ಪರಿಹಾರ ಕೇಳಿದ ನೆಟ್ಟಿಗರು..