Monday, November 17, 2025

Latest Posts

ಈ ಭೂಮಿ ಉರಿಗೌಡ- ನಂಜೇಗೌಡ ಹುಟ್ಟಿದ ನಾಡು: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

- Advertisement -

ಮಂಡ್ಯ: ಕೊತತ್ತಿಯಲ್ಲಿ ಬಿಜೆಪಿ ಸಾರ್ವಜನಿಕ ಸಭೆ ನಡೆದಿದ್ದು, ಸಚಿವ ಆರ್.ಅಶೋಕ್ ಕೊತ್ತತ್ತಿಗೆ ಆಗಮಿಸಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಪರ ಬಿಜೆಪಿ ನಾಯಕರು ಪ್ರಚಾರ ನಡೆಸಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದೆ.

ಈ ವೇಳೆ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಭೂಮಿ ನಾಲ್ವಡಿ ಕೃಷ್ಣರಾಜ ಒಡೆಯರ್ ,ವಿಶ್ವೇಶ್ವರಯ್ಯ, ಉರೀಗೌಡ  ನಂಜೇಗೌಡ ಹಾಗು ಅಂಬರೀಶ್ ಹುಟ್ಟಿದ ನಾಡು ಎಂದು ಹೇಳುವ ಮೂಲಕ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಏಕೆಂದರೆ, ಕೆಲ ದಿನಗಳ ಹಿಂದಷ್ಟೇ ಉರಿಗೌಡ, ನಂಜೇಗೌಡ ಎಂಬ ಹೆಸರು ಟ್ರೋಲ್ ಆಗಿತ್ತು. ಆದರೂ ಭಾಷಣದ ವೇಳೆ ರಾಜನಾಥ್ ಸಿಂಗ್‌ ಬಾಯಲ್ಲೂ ಉರಿಗೌಡ, ನಂಜೇಗೌಡ ಹೆಸರು ಬಂದಿದೆ.

ಇನ್ನು ಈ ಬಾರಿ 2013 & 2018 ರ ರೀತಿಅತಂತ್ರ ಸ್ಥಿತಿಯ ಸರ್ಕಾರ ನಿರ್ಮಾಣಕ್ಕೆ ಅವಕಾಶ ಮಾಡಕೊಡಬೇಡಿ. ಪ್ರಧಾನಿ ಮೋದಿಯ ಅಭಿವೃದ್ಧಿ ನೋಡಿ ಈ ಬಾರಿ ಬಿಜೆಪಿಗೆ ಮತ ನೀಡಿ. ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲಿ ಅನೇಕ ಭ್ರಷ್ಟಾಚಾರ ಮತ್ತು ಹಗರಣಗಳು ಆಗಿದ್ದವು. ಆದರೆ ಈಗಿನ ನಮ್ಮ ಸರ್ಕಾರದ ಮೇಲೆ ಯಾವುದೇ ಆರೋಪಗಳಿಲ್ಲ. ಭ್ರಷ್ಟಾಚಾರ ರಹಿತ ಸರ್ಕಾರ ನೋಡಿದ್ದೀರಿ ಅಭಿವೃದ್ಧಿ ನೋಡಿದ್ದೀರಿ. ಈ ಬಾರಿ ಪೂರ್ಣಬಹುತದ ಸರ್ಕಾರ ಕೊಡಿ ಭ್ರಷ್ಟಾಚಾರ ಕಡಿವಾಣ ಹಾಕ್ತಿವಿ ಎಂದು ರಾಜನಾಥ್ ಸಿಂಗ್ ಆಶ್ವಾಸನೆ ಕೊಟ್ಟಿದ್ದಾರೆ.

ಅಲ್ಲದೇ, ಭ್ರಷ್ಟಾಚಾರ ಮಾಡಿದ ಮಂತ್ರಿಗಳನ್ನು ಬಿಡದೆ ಜೈಲಿಗೆ ಹಾಕ್ತಿವಿ. ನಾವು ಈಗ ಎಲ್ಲಾ ಯೋಜನೆಗಳನ್ನು ಆನ್ಲೈನ್ ಮಾಡಿದ್ದೀವಿ. ಈ ಹಿಂದೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ರೈತರಿಗೆ ಕೊಡ್ತಿಧ ಹಣ ರೈತನಿಗೆ ಸೇರುವಷ್ಟರಲ್ಲಿ ಶೇ15 % ಬರ್ತಿತ್ತು. ಆದ್ರೆ ಈಗ ಮೋದಿ ಪ್ರಧಾನಿಯಾದ ಮೇಲೆ ಎಲ್ಲಾ ಅನುದಾನದ ಪೂರ್ಣ ಪ್ರಮಾಣದ ಹಣ ಸಾಮಾನ್ಯ ರೈತನ ಖಾತೆಗೆ ಬಂದು ಸೇರುತ್ತದೆ.

ಕಾಂಗ್ರೆಸ್ ನವರಿಗೆ ಈಗಾಗಲೇ ಗೊತ್ತಾಗಿದೆ ನಮಗೆ ಇನ್ನು ಅಧಿಕಾರ ಸಿಗಲ್ಲ ರಾಜ್ಯದಲ್ಲೂ ಸಿಗಲ್ಲ ಅಂತಾ. ಆಗಾಗಿ ಅವ್ರು ಈಗ ಧರ್ಮದ ಆಧಾರದ ಮೇಲೆ ಒಡೆಯುವ ಕೆಲಸ ಮಾಡ್ತಿದ್ದಾರೆ‌. ಈಗ ಯಾವ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡ್ತಾರೆ ಅವರು. ನಾವು ಸಂವಿಧಾನದ ಆಶಯ ರಕ್ಷಣೆ ಮಾಡ್ತಾ ಸಂವಿಧಾನ ರಕ್ಷಣೆ ಮಾಡುವ ಕೆಲಸ ಮಾಡ್ತಿದ್ದೇವೆ‌. ನಾವು ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದ್ರೆ,ಇವರು ಬೇರ್ಪಡಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಿಂಗ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

‘ಗಾಂಧೀಜಿ ಕುಳಿತಿದ್ದ ಜಾಗದಲ್ಲಿ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ’

ಪ್ರಧಾನಿಯನ್ನು ವ್ಯಂಗ್ಯವಾಗಿ ಸ್ವಾಗತಿಸಿ, ಸಾಲು ಸಾಲು ಪ್ರಶ್ನೆ ಕೇಳಿದ ಸಿದ್ದರಾಮಯ್ಯ..

- Advertisement -

Latest Posts

Don't Miss