ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಸ್ಮೃತಿ ಇರಾನಿ ಆಗಮಿಸಿದ್ದು, ಬಿಜೆಪಿ ಪರ ರೋಡ್ ಶೋ ನಡೆಸಿ, ಮತಯಾಚನೆ ಮಾಡಿದ್ದಾರೆ.
ನಾಗಮಂಗಲ ಸರ್ಕಾರಿ ಕಾಲೇಜು ಆವರಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಸಚಿವೆ ಸ್ಮೃತಿ ಇರಾನಿ ಆಗಮಸಿದ್ದು, ಸಚಿವೆಯ ಸ್ವಾಗತಕ್ಕೆ ಸುಧಾ ಶಿವರಾಮೇಗೌಡರ ಜೊತೆ ಪತಿ ಶಿವರಾಮೇಗೌಡ ಮಗ ಚೇತನ್ ಕೂಡ ಸಾಥ್ ನೀಡಿದರು.
ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸುಧಾ ಶಿವರಾಮೇಗೌಡ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರ ಮಾಡಿದ್ದಾರೆ. ಸುಧಾ ಶಿವರಾಮೇಗೌಡರನ್ನು ನಾಗಮಂಗಲ ಜನತೆಯ ಅನ್ನಪೂರ್ಣೇಶ್ವರಿ ಎಂದು ಮಾತನ್ನು ಶುರು ಮಾಡಿದ ಕೇಂದ್ರ ಸಚಿವೆ, ಮೋದಿ ಸರ್ಕಾರದ ಅಭಿವೃದ್ಧಿಯ ಬಗೆಯ ತಿಳಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಸುಧಾ ಶಿವರಾಮೇಗೌಡರನ್ನು ಗೆಲ್ಲಿಸುವಂತೆ ನಾಗಮಂಗಲ ಜನೆತೆಗೆ ಮನವಿ ಮಾಡಿ ಕೊಂಡರು.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್: ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ ಎಂದ ಹೆಚ್ಡಿಕೆ
ಗಮನಸೆಳೆದ ಬಿ.ವೈ. ವಿಜಯೇಂದ್ರ-ಪ್ರೀತಂಗೌಡ್ರ ಬುಲೆಟ್ ಸವಾರಿ: ಕಾರ್ಯಕರ್ತರ ಜೊತೆ ಶಾಸಕರ ನೃತ್ಯ