Monday, October 6, 2025

Latest Posts

ಸೂಪರ್‌ಸ್ಟಾರ್ ಗೆ ಜೊತೆಯಾದ ಸೆಂಚುರಿ ಸ್ಟಾರ್.!

- Advertisement -

ಸಿನಿ ರಂಗದಲ್ಲಿ ಹ್ಯಾಟ್ರಿಕ್ ಬಾರಿಸಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ಶಿವಣ್ಣ, ಸ್ಯಾಂಡಲ್ ವುಡ್ ನ ಬ್ಯುಸಿ ನಟರಲ್ಲಿ ಒಬ್ಬರು. ಇತ್ತೀಚಿಗಷ್ಟೆ ಶಿವಣ್ಣ, ವೆಬ್ ಸೀರೀಸ್ ನಲ್ಲಿ ನಟಿಸುವುದಾಗಿ ತಿಳಿಸಿ ಪ್ರೇಕ್ಷಕರಿಗೆ ಸಿಹಿ ಸುದ್ದಿಯನ್ನ ನೀಡಿದ್ದರು. ಅದಷ್ಟೇ ‘ಭಜರಂಗಿ-2’ ಚಿತ್ರದ ನಂತರ ಅವರ ಹೊಸ ಸಿನಿಮಾವನ್ನು ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ. ಹೀಗಿರುವಾಗಲೇ ಶಿವಣ್ಣ ರಜನಿಕಾಂತ್ ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿ ಗುಡ್ ನ್ಯೂಸ್ ನೀಡಿತ್ತು, ಇದೀಗ ಅ ಸಿನಿಮಾದ್ದೇ ಇನ್ನೊಂದು ಅಪ್ಡೇಟ್ ಅನ್ನು ಇದೆ ಚಿತ್ರತಂಡ ನೀಡಿದ್ದಾರೆ.

ಸೂಪರ್‌ಸ್ಟಾರ್ ಮತ್ತು ಸೆಂಚುರಿ ಸ್ಟಾರ್ ಇಬ್ಬರೂ ಜೊತೆಯಾಗಿ ತೆರೆಮೇಲೆ ಬರುತ್ತಾರೆ ಅನ್ನೋ ಸುದ್ದಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಇದು ಪ್ಯಾನ್ ಇಂಡಿಯಾ ಜಮಾನವಾಗಿಬಿಟ್ಟಿದೆ. ಹೀಗಿರುವಾಗ ರಜನಿಕಾಂತ್ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಾರೆ ಎಂದಾಗಲೇ ಸಿನಿ ಪ್ರೇಕ್ಷಕರು ಸಂತಸ ಪಟ್ಟಿದ್ದರು.

ಈ ಸಿನಿಮಾದಲ್ಲಿ ಶಿವಣ್ಣ ಅವರ ಪಾತ್ರವೇನು? ರಜನಿಕಾಂತ್ ಜೊತೆ ಶಿವಣ್ಣ ಎಷ್ಟು ನಿಮಿಷ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ? ಶೂಟಿಂಗ್ ಯಾವಾಗ ಶುರುವಾಗುತ್ತೆ? ಅಂತ ಒಂದಷ್ಟು ಪ್ರಶ್ನೆಗಳು ಕನ್ನಡಿಗರ ಮನಸ್ಸಲ್ಲಿತ್ತು. ಇದೀಗ ಆ ಕುತೂಹಲವನ್ನು ಇನ್ನು ಹೆಚ್ಚಾಗಿಸುವ ಘಟನೆಯೊಂದು ನಡೆದಿದೆ. ರಜನಿ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಶಿವಣ್ಣನನ್ನು ಭೇಟಿ ಮಾಡಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಶಿವಣ್ಣ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಆದರೆ ಶಿವಣ್ಣನ ಪಾತ್ರ ಚಿಕ್ಕದಾದರೂ ಕೂಡ ಶಿವಣ್ಣನಿಂದ ಕಥೆಗೆ ದೊಡ್ಡದೊಂದು ಟ್ವಿಸ್ಟ್ ಸಿಗುತ್ತೆ ಎಂಬುದು ಕ್ಯೂರಿಯಾಸಿಟಿಯನ್ನ ಇನ್ನಷ್ಟು ದುಪ್ಪಟ್ಟು ಮಾಡಿದೆ.

ಶಿವಣ್ಣ ಬೇರೆ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೆ ಮೊದಲೇನಲ್ಲ. ಶಿವರಾಜ್‌ಕುಮಾರ್ ಈ ಹಿಂದೆ ತೆಲುಗಿನ ಬಾಲಕೃಷ್ಣ ನಟಿಸಿದ್ದ ‘ಗೌತಮಿಪುತ್ರ ಶಾತಕರ್ಣಿ’ ಸಿನಿಮಾದಲ್ಲಿ ಶಿವಣ್ಣ ಕಾಳಹಸ್ತೇಶ್ವರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರ 169ನೇ ಚಿತ್ರದಲ್ಲಿ ಶಿವಣ್ಣ ಅತಿಥಿಯಾಗಿ ಕಾಣಿಸಿಕೊಳ್ಳುವ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

 

 

- Advertisement -

Latest Posts

Don't Miss