Friday, November 14, 2025

Latest Posts

ಸ್ಪಷ್ಟನೆ ನೀಡಿದ ಸ್ಪಿನ್ನರ್ ಯಜ್ವಿಂದರ್ ಚಾಹಲ್

- Advertisement -

ಹೊಸದಿಲ್ಲಿ: ಭಾರತೀಯ ಸ್ಪಿನ್ನರ್ ಯಜ್ವಿಂದರ್ ಚಾಹಲ್ ತಮ್ಮ ಹಾಗೂ ಪತ್ನಿ ನಡುವಿನ ಹರಿದಾಡುತ್ತಿರುವ ಗಾಳಿ ಸುದ್ದಿ ಕುರಿತು ಕೊನೆಗೂ ಮೌನ ಮುರಿದಿದ್ದಾರೆ.

ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಂನಲ್ಲಿ  ತಮ್ಮ ಹಾಗೂ ಧನಶ್ರೀ ನಡುವಿನ ಸಂಬಂಧದ ಕುರಿತು ಸುಳ್ಳು ಸುದ್ದಿಗಳನ್ನು ಹರಡಿಸದಂತೆ ಚಾಹಲ್ ಮನವಿ ಮಾಡಿದ್ದಾರೆ.

ನಮ್ಮಿಬ್ಬರ ಸಂಬಂಧ ಕುರಿತ ಗಾಳಿ ಸುದ್ದಿಗಳನ್ನು ನಂಬಬೇಡಿ. ನಿಮ್ಮಲೆರಿಗೂ ವಿನಮ್ರೆತೆಯಿಂದ ಮನವಿ ಮಾಡುತ್ತಿದ್ದೇನೆ.ಇದಕ್ಕೆಲ್ಲ ಅಂತ್ಯ ಹಾಕಿ. ಎಂದು ಹಾಕಿಸ್ಸಾರೆ. ಈ ಮೂಲಕ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳಿಗೆ ಯಜ್ವಿಂದರ್ ಚಾಹಲ್ ತೆರೆ ಎಳೆದಿದ್ದಾರೆ.

ಆ.16ರಂದು ಚಾಹಲ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹೊಸ ಜೀವನ ಎಂದು ಬರೆದು ಅನುಮಾನ ಮೂಡುವಂತೆ ಮಾಡಿದ್ದರು. ಚಾಹಲ್ ಪತ್ನಿ ಧನಶ್ರೀ ತಮ್ಮ ಇನ್‍ಸ್ಟಾಗ್ರಾಂ ನಿಂದ ಪತಿಯನ್ನು ತೆಗೆದು ಹಾಕಿದ್ದರು ಎಂದು ತಿಳಿದು ಬಂದಿದೆ.

ಮಾಧ್ಯಯಮಗಳಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಚಾಹಲ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.ಧನಶ್ರೀ ಅವರ ಪ್ರತಿಕ್ರಿಯೆಗೆ ಕಾಯಬೇಕಾಗಿದೆ.

 

- Advertisement -

Latest Posts

Don't Miss