Bigg Boss: ಮಾತಿನ ಮಲ್ಲಿ ಚೈತ್ರಾ ಕುಂದಾಪುರ ಕನ್ನಡ ರಿಯಾಲಿಟಿ ಶೋ, ಬಿಗ್‌ಬಾಸ್ ಸೀಸನ್ 11ನಿಂದ ಹೊರಬಿದ್ದಿದ್ದಾರೆ. ಎಲ್ಲರಿಗೂ ಭಾವುಕ ವಿದಾಯ ಹೇಳಿರುವ ಚೈತ್ರಾಳನ್ನು ಕಿಚ್ಚ ಸುದೀಪ ಕಣ್ಣೊರಿಸಿ ಸಮಾಧಾನ ಮಾಡಿದ್ದಾರೆ.
ಈ ಬಾರಿ ಎಲಿಮಿನೇಷನ್ ಪ್ರಕ್ರಿಯೆ ಮಾಡುವಾಗ, ಕೊನೆಯಲ್ಲಿ ಧನರಾಜ್ ಮತ್ತು ಚೈತ್ರಾ ಉಳಿದುಕೊಂಡಿದ್ದರು. ಹೀಗಾಗಿ ಕಿಚ್ಚ ಒಂದು ಟಾಸ್ಕ್ ಕೊಟ್ಟಿದ್ದು, ಲಕೋಟೆ ಹುಡುಕಿ, ಅದರಲ್ಲಿ ಯಾಾರು ಔಟ್ ಎಂದು ಬರೆದಿರುತ್ತದೆ. ಯಾರಿಗೆ ಔಟ್ ಎಂದು ಬರೆದಿರುವ ಲಕೋಟೆ ಸಿಗುತ್ತದೆಯೋ, ಅವರು ಔಟ್ ಅನ್ನೋ ರೀತಿ ಆ ಟಾಸ್ಕ್ ಇತ್ತು.
ಹಾಗೆ ಲಕೋಟೆ ಹುಡುಕುತ್ತ ಧನರಾಜ್ ಸ್ವಾಮಿ ಕೊರಗಜ್ಜ ಕಾಪಾಡು ಎಂದು ಬೇಡಿಕೊಂಡು ಲಕೋಟೆ ಹುಡುಕಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ ಧನರಾಜ್ ಸೇಫ್ ಆಗಿದ್ದು, ಚೈತ್ರಾ ಔಟ್ ಆಗಿದ್ದಾರೆ. ಇನ್ನು ಕೊನೆಯ ಕ್ಯಾಪ್ಟನ್ ಆಗಿ ಹನುಮಂತು ಆಯ್ಕೆಯಾಗಿದ್ದ ಬಗ್ಗೆ ಮಾತನಾಡಿರುವ ಚೈತ್ರಾ, ನಾನು ಇಷ್ಟು ದಿನ ಬಿಗ್‌ಬಾಸ್‌ನಲ್ಲಿ ಇದ್ದರೂ ಕೂಡ, ಕ್ಯಾಪ್ಟನ್ ಆಗಲಿಲ್ಲ, ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಳ್ಳಲಿಲ್ಲ ಅನ್ನೋದೇ ಬೇಸರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.