Tuesday, October 15, 2024

Latest Posts

ಮಂಡ್ಯ ವಿಜಯೋತ್ಸವದಲ್ಲಿ ಡಿ ಬಾಸ್ ಪವರ್ ಫುಲ್ ಮಾತು

- Advertisement -

ಮಂಡ್ಯ: ಸಂಸದೆ ಸುಮಲತಾ ಸ್ವಾಭಿಮಾನಿ ವಿಜಯೋತ್ಸವದಲ್ಲಿ ಚಾಲೆಂಜಿಂಗ್ ಸ್ಟಾರ್ ಭಾಗಿಯಾಗಿ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿದ್ರು. ಅಲ್ಲದೆ ಡಿ ಬಾಸ್ ಮಂಡ್ಯ ಜನತೆಯಲ್ಲಿ ಕೆಲ ಮನವಿಗಳನ್ನೂ ಮಾಡಿಕೊಂಡ್ರು.

ಮಂಡ್ಯದ 8 ಕ್ಷೇತ್ರದ ಜನತೆಗೆ ನನ್ನ ಅಭಿನಂದನೆಗಳು.ನಾನು ಇವತ್ತು ಅಪ್ಪಾಜಿಗೆ ವಿಶ್ ಮಾಡಲ್ಲ. ಇವತ್ತು ನೀವು ನಮಗೆ ಹೊಸ ರೂಪ ಕೊಟ್ಟಿದ್ದೀರಾ. ಅದಕ್ಕೆ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೊಡ್ಡವರು ಚಿಕ್ಕವರ ಪಾದಗಳಿಗೆ ನಮಸ್ಕಾರ. ಇವತ್ತು ಕಾರ್ಯಕರ್ತರು ವಿರೋಧ ಕಟ್ಟಿಕೊಂಡು ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ಜೀವನ ಪರ್ಯಂತ ನಿಮ್ಮ ಋಣ ತೀರಸಲಾಗಲ್ಲ. ನಮಗೆ ಪುನರ್ಜನ್ಮ ನೀಡಿದ್ದೀರಾ ಅಂತ ಚಾಲೆಂಜಿಂಗ್ ಸ್ಟಾರ್ ಕೃತಜ್ಞತೆ ಸಲ್ಲಿಸಿದ್ರು.

ಅಲ್ಲದೆ ನಿಮ್ಮ ಸಹಕಾರ ಆಶೀರ್ವಾದ ಸುಮ್ಮಮನ ಮೇಲಿದೆ. ನಮ್ಮಲ್ಲಿ ಉತ್ಸಾಹ ತುಂಬಿದ್ರಿ. ನೀವು ಕೊಟ್ಟಿರೋ ಯೋಗ್ಯತೆಯನ್ನ ಉಳಿಸಿಕೊಂಡು ಬೆಳೆಸಿಕೊಂಡು ಹೋಗ್ತೀವಿ ಅಂದ್ರು.

ಇನ್ನು ಆಯಾ ಕಾರ್ಯವ್ಯಾಪ್ತಿಗೆ ಬರುವವರ ಕೆಲಸವನ್ನ ಅವರಿಗೇ ವಹಿಸಬೇಕು. ಸುಮಲತಾ ಅಮ್ಮ ಹುಟ್ಟಿ ಬರೀ 5 ದಿನ ಆಗಿದೆ. ಅವರು ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಮಂಡ್ಯ ಅಭಿವೃದ್ಧಿ ಕೆಲಸ ಶುರುಮಾಡ್ತಾರೆ.

ಇನ್ನು ನಮ್ಮಂತಹ ಸಣ್ಣ ಪುಟ್ಟ ಕಲಾವಿದರನ್ನೂ ಹರಸಿ ಹಾರೈಸಿ ಅಂತ ಕೇಳಿಕೊಂಡ ಡಿ ಬಾಸ್, ಇದೇ ವೇಳೆ ಅಭಿಷೇಕ್ ಅಂಬರೀಶ್ ನಟನೆಯ ‘ಅಮರ್’ ಚಿತ್ರವನ್ನು ನೋಡಿ ಆತನನ್ನು ಬೆಂಬಲಿಸಿ ಅಂತ ಜನತೆಯಲ್ಲಿ ದರ್ಶನ್ ಮನವಿ ಮಾಡಿಕೊಂಡ್ರು.

- Advertisement -

Latest Posts

Don't Miss