Wednesday, April 16, 2025

Latest Posts

ಇಡುವಾಳು ಸಚ್ಚಿದಾನಂದರ ಕೆಲಸವನ್ನ ನೆಚ್ಚಿ ಹೊಗಳಿದ ಚಾಲೆಂಜಿಂಗ್‌ ಸ್ಟಾರ್..

- Advertisement -

ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಇಂದು ನಟ ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅಬ್ಬರದ ಪ್ರಚಾರ ನಡೆಸಿದ್ದು, ಆಪ್ತ ಸ್ನೇಹಿತ ಸಚ್ಚಿದಾನಂದ ಪರ ಡಿ ಬಾಸ್ ಕ್ಯಾಂಪೇನ್ ಮಾಡಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಇಡುವಾಳು ಸಚ್ಚಿದಾನಂದ್ ಜೊತೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್‌.ಎಸ್,ಬೆಳಗೊಳ,ಮಹದೇವಪುರ,ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ರೋಡ್ ಷೋ ಮೂಲಕ ಪ್ರಚಾರ ನಡೆಸಲಾಗಿದೆ. ಈ ವೇಳೆ ನಟ ದರ್ಶನ್ ಅವರನ್ನು ನೋಡಲು ಹಳ್ಳಿಗಳ ರಸ್ತೆ ಬದಿ ನೂರಾರು ಜನ ನಿಂತಿದ್ದರು. ಅಲ್ಲದೇ, ಜೈಕಾರ ಕೂಗುವ ಮೂಲಕ, ಡಿ ಬಾಸ್‌ಗೆ ಅದ್ಧೂರಿ ಸ್ವಾಗತ ಕೋರಲಾಯಿತು.  ಈ ವೇಳೆ ದರ್ಶನ್, ತನ್ನ ಸ್ನೇಹಿತನನ್ನು ಈ ಬಾರಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ದರ್ಶನ್, ಸಚ್ಚಿದಾನಂದ ಅವರು ಈಗಾಗಲೇ ತಮ್ಮ ಸ್ವಂತ ಖರ್ಚಿನಲ್ಲಿ ಹಲವು ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಹೀಗಾಗಿ ನಿಮಗೆ ಸಿಕ್ಕಿರುವ ಅವಕಾಶದ ಮೂಲಕ, ನಿಮ್ಮ ಮತವನ್ನು ನೀವು ಇವರಿಗೆ ಹಾಕಿ, ಗೆಲ್ಲಿಸಿದರೆ, ಸಚ್ಚಿದಾನಂದ ಇನ್ನೂ ಉತ್ತಮ ಕೆಲಸಗಳನ್ನ ಮಾಡುತ್ತಾರೆ. ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾರೆಂದು ದರ್ಶನ್ ಹೇಳಿದರು.

ಅಲ್ಲದೇ, ಅಂಬರೀಷ್ ಅಪ್ಪಾಜಿ ಎಲೆಕ್ಷನ್‌ಗೆ ಬಂದಾಗಲೇ, ಸಚ್ಚಿದಾನಂದ ರಾಜಕೀಯದಲ್ಲಿ ಇದ್ದರು. ನಾನು ನೋಡಿದ ಹಾಗೆ, ಅವರು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ, ಮತದಾರರು ಯಾವುದಾದರೂ ಕೆಲಸ ಹೇಳಿದರೆ, ಅದನ್ನು ಮಾಡಿಸುವ ಅರ್ಹತೆ, ಚಾಣಾಕ್ಷತೆ ಸಚ್ಚಿದಾನಂದರಲ್ಲಿದೆ. ಹಾಗಿದ್ದಲ್ಲಿ, ನೀವು ಇವರಿಗೆ ಮತ ಹಾಕಿ ಗೆಲ್ಲಿಸಿದ್ದಲ್ಲಿ, ಇವರು ನಿಮಗೆ ಇನ್ನೆಷ್ಟು ಸಹಾಯ ಮಾಡಬಹುದು ಅನ್ನೋದನ್ನ ನೀವೇ ಊಹಿಸಿಕೊಳ್ಳಿ. ಆದ್ದರಿಂದ ಈ ಬಾರಿ ನಿಮ್ಮ ಮತವನ್ನು ಸಚ್ಚಿದಾನಂದ್‌ಗೆ ನೀಡಿ ಎಂದು ದರ್ಶನ್ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

‘ಸುಳ್ಳು ಹೇಳುವುದೇ ಅಭ್ಯಾಸವಾಗಿ ಬಿಟ್ಟರೆ ಸತ್ಯ ತಿಳಿಯುವುದೇ ಇಲ್ಲ’

ಮೊಬೈಲ್ ಕಳೆದು ಹೋದ್ರೆ ಇನ್ಮುಂದೆ ಹುಡುಕುವುದು ತೀರ ಸುಲಭ..!

‘ಯಾರು ಹತಾಷರಾಗಿದ್ದಾರೆ ಅನ್ನೋದನ್ನ ಜನಸಾಮಾನ್ಯರು‌ ನೋಡ್ತಾ ಇದ್ದಾರೆ’

- Advertisement -

Latest Posts

Don't Miss