Sunday, March 3, 2024

Latest Posts

ಅಭಿಮಾನಿಗಳಿಗೆ ಡಿ-ಬಾಸ್ ಸವಾಲ್- ಚಾಲೆಂಜ್ ಸ್ವೀಕರಿಸಿ ಸೈ ಎನಿಸಿಕೊಳ್ತಾರಾ ಫ್ಯಾನ್ಸ್..!

- Advertisement -

ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ಸೆಲೆಬ್ರಿಟಿಯೊಬ್ಬರಿಗೆ ಚಾಲೆಂಜ್ ಹಾಕ್ತೀನಿ ಮಧ್ಯಾಹ್ನದವರಗೂ ಕಾಯ್ತಾ ಇರಿ ಅಂತ ಹೇಳಿದ್ದ ದಚ್ಚು ಇದೀಗ ಅಭಿಮಾನಿಗಳಿಗೇ ಓಪನ್ ಚಾಲೆಂಜ್ ಹಾಕಿದ್ದಾರೆ.

ತಾವು ಹೇಳಿದಂತೆ ಇದೀಗ ಫೇಸ್ ಬುಕ್ ಲೈವ್ ಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲೆಂಜ್ ಯಾರಿಗೆ ಅಂತ ಹೇಳಿದ್ರು. ದಚ್ಚು ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಆಡಿಯೋ ಲಾಂಚ್ ಪಾಸ್ ನಲ್ಲಿ ದರ್ಶನ್ ಫೋಟೋ ಇಲ್ಲ ಅಂತ ಗರಂ ಆಗಿದ್ದ ಫ್ಯಾನ್ಸ್ ಗಳನ್ನು ಹೇಗೋ ಸಂತೈಸಿದ್ದರು. ಆದ್ರೆ ಬಹುತಾರಾಗಣ ಹೊಂದಿರೋ ಈ ಚಿತ್ರದಲ್ಲಿ ಬಹುತೇಕ ದೊಡ್ಡ ನಟ ದಂಡೇ ಇದೆ. ರವಿಚಂದ್ರನ್, ದಿವಂಗತ ಅಂಬರೀಶ್, ಅರ್ಜುನ್ ಸರ್ಜಾ, ಶಶಿಕುಮಾರ್, ನಿಖಿಲ್ ಕುಮಾರ್ ಸೇರಿದಂತೆ ಇನ್ನೂ ಅನೇಕ ಸ್ಟಾರ್ ನಟರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಬರೀ ಪಾಸ್ ನಲ್ಲಿ ಫೋಟೋ ಇಲ್ಲದ್ದಕ್ಕೆ ಗರಂ ಆಗಿದ್ದ ಅಭಿಮಾನಿಗಳು ಇನ್ನು ಚಿತ್ರದಲ್ಲಿ ಏನಾದ್ರೂ ಇಂಥಹದ್ದೇ ವಿಚಾರಕ್ಕೆ ಇತರೆ ನಟರಿಗೆ ತಮ್ಮನ್ನು ಹೋಲಿಕೆ ಮಾಡಿ ಬೇಸರ ಮಾಡಿಕೊಳ್ಳಬಾರದು ಅನ್ನೋ ಕಾರಣಕ್ಕೆ ತಮ್ಮ ಫ್ಯಾನ್ಸ್ ಗಳಿಗೆ ಪ್ರೀತಿಯಿಂದ ಓಪನ್ ಚಾಲೆಂಜ್ ಕೊಟ್ಟಿದ್ದಾರೆ.

ಈ ಚಿತ್ರದಲ್ಲಿ ಬರೋ ಎಲ್ಲಾ ಪಾತ್ರಗಳನ್ನು ಒಂದೇ ಸಮವಾಗಿ ಕಂಡು ಯಾವುದೇ ರೀತಿ ಹೋಲಿಕೆ ಮಾಡದೇ ನೋಡಿ ಚಿತ್ರವನ್ನು ಮನೆ ಮಂದಿಯೊಂದಿಗೆ ನೋಡಿ ಅಂತ ಅಭಿಮಾನಿಗಳಿಗೆ ಡಿ ಬಾಸ್ ಪ್ರೀತಿಯಿಂದ ಓಪನ್ ಚಾಲೆಂಜ್ ಮಾಡಿದ್ದಾರೆ. ಅಲ್ಲದೆ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ವಿಚಾರಕ್ಕೆ ಗಲಾಟೆ ಮಾಡಿಕೊಳ್ಳಬೇಡಿ ಅಂತ ದಚ್ಚು ಇದೇ ವೇಳೆ ಅಭಿಮಾನಿಗಳಿಗೆ ಕಿವಮಾತು ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದುರ್ಯೋದನನ ಪಾತ್ರದಲ್ಲಿ ಆರ್ಭಟಿಸಲಿದ್ದಾರೆ.

https://www.facebook.com/1461973834106130/posts/2099317220371785/

ಕುರುಕ್ಷೇತ್ರ ಚಿತ್ರದ ನಿರ್ಮಾಪಕನ ಬಗ್ಗೆ ಡಿ ಬಾಸ್ ಹೇಳಿದ್ದೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=KE6vzcgS0qI
- Advertisement -

Latest Posts

Don't Miss