- Advertisement -
ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಗೆಲುವು ತಂದುಕೊಟ್ಟ ಮಂಡ್ಯ ಜನರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧನ್ಯವಾದ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ನಟ ದರ್ಶನ್ ಸುಮಲತಾ ಅಮ್ಮನನ್ನು ಗೆಲ್ಲಿಸೋ ಮೂಲಕ ಮಂಡ್ಯ ಜನ ಸ್ವಾಭಿಮಾನಿಗಳು ಅಂತ ತೋರಿಸಿಕೊಟ್ಟಿದ್ದಾರೆ. ಜನರು ಕೊಟ್ಟ ಗಿಫ್ಟ್ ಉಳಿಸಿಕೊಂಡು ಹೋಗೋದು ಮುಖ್ಯ. ಮಂಡ್ಯ ಜನರಿಗೆ ಧನ್ಯವಾದ ಅಂದ್ರೆ ಅದು ಚಿಕ್ಕ ಪದ ಆಗುತ್ತೆ ಅಂತ ಮಂಡ್ಯ ಜನತೆಯನ್ನ ದಚ್ಚು ಹಾಡಿಹೊಗಳಿದ್ದಾರೆ.
ಇನ್ನು ನಾನು ವಿರೋಧಿಗಳ ಟೀಕೆಗೆಲ್ಲಾ ತಲೆಕೆಡಿಸಿಕೊಳ್ಳಲ್ಲ ಅಂತ ದರ್ಶನ್ ಖಡಕ್ ಆಗಿ ಉತ್ತರಿಸಿದ್ದಾರೆ.
ಸ್ನೇಹಿತನ ಮನೆಯ ಇಫ್ತಿಯಾರ್ ಕೂಟದಲ್ಲಿ ದಚ್ಚು…. ತಪ್ಪದೇ ಈ ವಿಡಿಯೋ ನೋಡಿ
- Advertisement -